ETV Bharat / sitara

'100% ಕಾದಲ್​​​​​​​' ​​​​​​​ನಲ್ಲಿ ಅರ್ಜುನ್ ರೆಡ್ಡಿ ನಾಯಕಿಯ ಪ್ರೇಮ್​​ ಕಹಾನಿ - ನಾಗ ಚೈತನ್ಯ

ಸುಕುಮಾರ್ ನಿರ್ದೇಶನದ ತೆಲುಗು ಸಿನಿಮಾ '100% ಲವ್​' ಈಗ ತಮಿಳಿಗೆ ರಿಮೇಕ್ ಆಗಿದ್ದು '100% ಕಾದಲ್' ಎಂದು ಹೆಸರಿಡಲಾಗಿದೆ. ಸಿನಿಮಾದಲ್ಲಿ ಅರ್ಜುನ್ ರೆಡ್ಡಿ ಖ್ಯಾತಿಯ ಶಾಲಿನಿ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ.

'100% ಕಾದಲ್​​​​​​​'
author img

By

Published : Sep 14, 2019, 8:04 PM IST

2011 ರಲ್ಲಿ ಸುಕುಮಾರ್ ನಿರ್ದೇಶನದಲ್ಲಿ ಬಿಡುಗಡೆಯಾಗಿದ್ದ '100% ಲವ್​' ಸಿನಿಮಾ ಒಳ್ಳೆ ಪ್ರತಿಕ್ರಿಯೆ ಪಡೆದಿತ್ತು. ನಂತರ ಈ ಸಿನಿಮಾ ಬೆಂಗಾಳಿ ಭಾಷೆಯಲ್ಲಿ 'ಪ್ರೇಮ್​ ಕಿ ಬುಜಿನಿ' ಹೆಸರಿನಲ್ಲಿ ರೀಮೇಕ್ ಆಗಿ 2016 ರಲ್ಲಿ ಬಿಡುಗಡೆಯಾಗಿತ್ತು.

  • " class="align-text-top noRightClick twitterSection" data="">

'100% ಲವ್​' ತೆಲುಗು ಸಿನಿಮಾದಲ್ಲಿ ತಮನ್ನಾ ಭಾಟಿಯಾ ಹಾಗೂ ನಾಗ ಚೈತನ್ಯ ಪ್ರೇಮಿಗಳಾಗಿ ಅಭಿನಯಿಸಿದ್ದರು. ಇದೀಗ ಈ ಸಿನಿಮಾ '100% ಕಾದಲ್' ಎಂಬ ಹೆಸರಿನಲ್ಲಿ ತಮಿಳು ಭಾಷೆಯಲ್ಲಿ ತಯಾರಾಗಿದೆ. ಸದ್ಯಕ್ಕೆ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 'ಅರ್ಜುನ್​ ರೆಡ್ಡಿ' ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸಿದ್ದ ಗ್ಲಾಮರ್ ಗೊಂಬೆ ಶಾಲಿನಿ ಪಾಂಡೆ '100% ಕಾದಲ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಶಾಲಿಗೆ ನಾಯಕನಾಗಿ ಜಿ.ವಿ. ಪ್ರಕಾಶ್ ಕುಮಾರ್ ಅಭಿನಯಿಸಿದ್ದಾರೆ. ಎಂ.ಎಂ. ಚಂದ್ರಮೌಳಿ ನಿರ್ದೇಶನದ ಈ ಸಿನಿಮಾವನ್ನು ಕ್ರಿಯೇಟಿವ್ ಸಿನಿಮಾಸ್ ಹಾಗೂ ಎನ್​ಜೆ ಎಂಟರ್​​​ಟೈನ್ಮೆಂಟ್ ಬ್ಯಾನರ್ ಅಡಿ ಸುಕುಮಾರ್ ಹಾಗೂ ಭುವನ ಚಂದ್ರಮೌಳಿ ನಿರ್ಮಿಸಿದ್ದಾರೆ. ಟ್ರೇಲರ್ ಬಿಡುಗಡೆಯಾದ ಒಂದೇ ದಿನದಲ್ಲಿ ಸುಮಾರು 8 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನಾಸರ್ ಕೂಡಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಶೀಘ್ರವೇ ಸಿನಿಮಾ ತೆರೆ ಕಾಣಲಿದೆ.

Intro:Body:

100% kadal

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.