ETV Bharat / sitara

ಸಂಚಾರಿ ವಿಜಯ್​​​ ಅಭಿನಯದ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಆಡಿಯೋ ಬಿಡುಗಡೆ - ದುನಿಯಾ ರಶ್ಮಿ

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್​​ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರೂ ಆ ಸಿನಿಮಾಗಳು ಹೆಸರು ಮಾಡಲಿಲ್ಲ. ಇದೀಗ ಅವರು ಸ್ವಲ್ಪ ಗ್ಯಾಪ್​ ನಂತರ ಮತ್ತೆ ‘ಆಟಕ್ಕುಂಟು ಲೆಕ್ಕಕ್ಕಿಲ್ಲ‘ ಚಿತ್ರದ ಮೂಲಕ ವಾಪಸಾಗಿದ್ದಾರೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ
author img

By

Published : Jul 30, 2019, 3:19 PM IST

‘ನಾನು ಅವನಲ್ಲ ಅವಳು’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದದ್ದೇ ತಡ ಸಂಚಾರಿ ವಿಜಯ್ ಅವರನ್ನು ಹುಡುಕುತ್ತಾ ಅನೇಕ ಚಿತ್ರಗಳು ಅವರ ಮನೆಬಾಗಿಲಿನತ್ತ ಹೊರಟವು. ಇನ್ನು ಹೊಸಬರ ಆಸೆಗೆ ತಣ್ಣೀರು ಎರಚಬಾರದು ಎಂಬ ಉದ್ದೇಶದಿಂದ ವಿಜಯ್ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಂಡರು.

'ಆಟಕ್ಕುಂಟು ಲೆಕ್ಕಕ್ಕಿಲ್ಲ' ಆಡಿಯೋ ಬಿಡುಗಡೆ

'ನಾನು ನನ್ನ ಹೆಂಡತಿ', 'ಅವ್ಯಕ್ತ', 'ವರ್ತಮಾನ', 'ಕೃಷ್ಣ ತುಳಸಿ', '6 ನೇ ಮೈಲಿ', 'ಪಾದರಸ', 'ನಾತಿಚಾರಮಿ', 'ಆಡುವ ಗೊಂಬೆ' ಸಿನಿಮಾಗಳಲ್ಲಿ ಅವರು ನಟಿಸಿದರೂ ಯಾವ ಚಿತ್ರಗಳು ಕೂಡಾ ಚಿತ್ರಮಂದಿರಗಳಲ್ಲಿ ಹೆಚ್ಚು ದಿನಗಳು ಉಳಿಯಲಿಲ್ಲ ಎಂಬುದು ವಿಜಯ್​​​ಗೆ ನಿಧಾನವಾಗಿ ಅರಿವಾಯಿತು. ಈ ಸಿನಿಮಾಗಳು ಅವರನ್ನು ಮರುಚಿಂತನೆ ಮಾಡುವಂತೆ ಮಾಡಿದವು. ಇದಾದ ಬಳಿಕ 6 ತಿಂಗಳ ಗ್ಯಾಪ್ ಬಳಿಕ ‘ಆಟಕ್ಕುಂಟು ಲೆಕ್ಕಕ್ಕಿಲ್ಲ‘, ‘ಪುಗ್ಸಟ್ಟೆ ಲೈಫು‘, ‘ಪುರುಸೊತ್ತೇ ಇಲ್ಲ‘ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಾಕಷ್ಟು ಬಾರಿ ಈ ಸಿನಿಮಾಗಳ ಕಥೆ, ಚಿತ್ರಕಥೆ ವಿಮರ್ಶೆಗೆ ಒಳಗಾಗಿ ಕ್ಯಾಮರಾ ಮುಂದೆ ಬರಲು ಸಿದ್ಧವಾಗಿವೆ.

Atakkuntu lekkakkilla
'ಆಟಕ್ಕುಂಟು ಲೆಕ್ಕಕ್ಕಿಲ್ಲ' ಚಿತ್ರತಂಡ

ವೃತ್ತಿಯಲ್ಲಿ ಇಂಜಿನಿಯರ್ ಆದ ರಾಮಚಂದ್ರ ‘ಆಟಕ್ಕುಂಟು ಲೆಕ್ಕಕ್ಕಿಲ್ಲ‘ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪ್ರಪಂಚದಲ್ಲಿ ಪ್ರತಿ ಮನುಷ್ಯನಲ್ಲಿ 0.7 ಪರ್ಸೆಂಟ್ ಒಂದು ವಿಚಾರ ಅಡಗಿರುತ್ತದೆ. ಅದೇ 100 ಪರ್ಸೆಂಟ್ ಆಗಿ ಬಿಟ್ಟರೆ ಏನಾಗಬಹುದು ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರದಲ್ಲಿ ವಿಜಯ್ ಜೊತೆ ಮಯೂರಿ ಕ್ಯಾಥರಿ ಪತ್ನಿಯಾಗಿ ನಟಿಸಿದ್ದಾರೆ. ಇನ್ನು ನವೀನ್ ಕೃಷ್ಣ ನಿರ್ದೇಶನದ ‘ಮೇಲೊಬ್ಬ ಮಾಯಾವಿ’ ಬಿಡುಗಡೆಗೆ ಸಿದ್ಧವಾಗಿದೆ.

Atakkuntu lekkakkilla
ಮಯೂರಿ, ಸಂಚಾರಿ ವಿಜಯ್

Intro:ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ನಟಿ ಮಯೂರಿ ಹಾಗೂ ದುನಿಯಾ ರಶ್ಮಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ" ಆಟಕ್ಕುಂಟು ಲೆಕ್ಕಕ್ಕಿಲ್ಲ" ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ "ಆಟಕುಂಟು ಲೆಕ್ಕಕ್ಕಿಲ್ಲ" ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಿ ಆರ್ ಜೈರಾಜ್, ಕಾರ್ಯದರ್ಶಿಗಳಾದ ಎನ್ಎಮ್ ಸುರೇಶ್, ಚಿಟ್ಟೆ ಖ್ಯಾತಿಯ ವಸಿಷ್ಟ ಸಿಂಹ ಹಾಗೂ ನಟ ರೆಹಮಾನ್ ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Body:ಇನ್ನು ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರವಿರುವ ಆಟಕುಂಟು ಲೆಕ್ಕಕಿಲ್ಲ ಚಿತ್ರವನ್ನು ಸಾಫ್ಟ್ವೇರ್ ಇಂಜಿನಿಯರ್ ರಾಮಚಂದ್ರ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ವಸುಂಧರ ಕೃತಿಕ್ ಫಿಲಂಸ್ ಬ್ಯಾನರ್ ನಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲಾ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ಸಾಫ್ಟ್‌ವೇರ್ ಎಂಜಿನಿಯರ್ ಆದ ರಾಮಚಂದ್ರ ಅವರಿಗೆ ಇದು ಮೊದಲ ಚಿತ್ರವಾಗಿದ್ದು ಕನ್ನಡ ತಮಿಳು ತೆಲುಗು ಹಿಂದಿ ಇಂಗ್ಲಿಷ್ ಭಾಷೆಯಲ್ಲಿ ಸಾಕಷ್ಟು ಸಿನಿಮಾಗಳನ್ನು ನೋಡಿದ್ದು ಯಾವ ಚಿತ್ರಗಳಲ್ಲೂ ಇಂತಹ ಪ್ರಾಮುಖ್ಯತೆ ಕೊಟ್ಟಿಲ್ಲ ಆದ್ದರಿಂದ ಈ ಕಥೆ ನನಗೆ ಹೊಳೆದ ತಕ್ಷಣ ಸಿನಿಮಾ ಮಾಡಬೇಕೆಂಬ ಹಟದೊಂದಿಗೆ ಈ ಸಿನಿಮಾ ಮಾಡಿರುವುದಾಗಿ ನಿರ್ದೇಶಕರು ಹೇಳಿದರು. ಇನ್ನು ಚಿತ್ರದಲ್ಲಿ ಚಿತ್ರದ ಕಥೆಯೇ ನಾಯಕನಾಗಿದ್ದು ತುಂಬಾ ಅದ್ಭುತವಾದ ಪಾತ್ರದಲ್ಲಿ ಕಾಣಿಸಿರುವುದಾಗಿ ನಟ ಸಂಚಾರಿ ವಿಜಯ್ ತಿಳಿಸಿದರು. ಇನ್ನು ಈ ಚಿತ್ರದಲ್ಲಿ ಮಯೂರಿ ಗೃಹಿಣಿ ಪಾತ್ರದಲ್ಲಿ ಕಾಣಿಸಿದ್ದು ತುಂಬಾ ವಿಶೇಷವಾದ ಪಾತ್ರದಲ್ಲಿ ನಟಿಸಿದ್ದು ಎಲ್ಲಾ ವರ್ಗದ ಜನರು ಈ ಚಿತ್ರವನ್ನು ಸ್ವೀಕರಿಸುತ್ತಾರೆ ಎಂದು ನಟಿ ಮಯೂರಿ ತಿಳಿಸಿದರು.

Conclusion:ಅಲ್ಲದೇ ತುಂಬಾ ವರ್ಷಗಳ ನಂತರ ದುನಿಯಾ ಖ್ಯಾತಿಯ ರಶ್ಮಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದು, ಚಿತ್ರದ ಕಥೆ ತುಂಬ ವಿಶೇಷವಾಗಿದ್ದು ನನ್ನ ಪಾತ್ರವೂ ತುಂಬಾ ವಿಭಿನ್ನವಾಗಿತ್ತು ಹಾಗಾಗಿ ಈ ಚಿತ್ರದಲ್ಲಿ ನಟಿಸಲು ನಾನು ಓಕೆ ಎಂದೆ ಎಂದು ದುನಿಯಾ ರಶ್ಮಿ ತಿಳಿಸಿದರು. ಈಗಾಗಲೇ ಎಲ್ಲಾ ಕೆಲಸಗಳನ್ನು ಮುಗಿಸಿ ರಿಲೀಸ್ಗೆ ರೆಡಿಯಾಗಿರುವ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರ ಆಗಸ್ಟ್ 23ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಇನ್ನೂ ಚಿತ್ರದಲ್ಲಿ ಎರಡು ಹಾಡುಗಳಿದ್ದು ನಾಭಿನ್ ಪೌಲ್ ಸಂಗೀತ ಸಂಯೋಜನೆ ಮಾಡಿದರೆ ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ. ಏನು ಚಿತ್ರದ ವಿಶೇಷ ಅಂದ್ರೆ ಚಿತ್ರದ ಆಡಿಯೋ ಹಕ್ಕನ್ನು ಮ್ಯೂಸಿಕ್ ಸಂಸ್ಥೆಯು ಖರೀದಿಸಿದ್ದು ಚಿತ್ರದ ಕ್ವಾಲಿಟಿ ಗೆ ಹಿಡಿದ ಕೈಗನ್ನಡಿಯಾಗಿದೆ.ಅಲ್ಲದೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರಕಥೆಯು ಯೂನಿವರ್ಸಲ್ ಸಬ್ಜೆಕ್ಟ್ ಆಗಿದ್ದು ಎಲ್ಲಾ ಭಾಷೆಯ ಜನರಿಗೂ ಇಷ್ಟವಾಗುತ್ತದೆ ಹಾಗಾಗಿ ಈ ಚಿತ್ರವನ್ನು ಯುಕೆಯಲ್ಲಿ ಬಿಡುಗಡೆ ಮಾಡುವುದಾಗಿ ಪ್ಲಾನ್ ಮಾಡಿರುವುದಾಗಿ ನಿರ್ದೇಶಕರು ತಿಳಿಸಿದರು. ಅದೇನೇ ಇರಲಿ ನಟ ಸಂಚಾರಿ ವಿಜಯ್ ಇತ್ತೀಚಿಗೆ ನಟಿಸಿದ ಬಹುತೇಕ ಎಲ್ಲಾ ಚಿತ್ರಗಳು ಸಹ ಪ್ರಯೋಗಾತ್ಮಕ ಚಿತ್ರಗಳಾಗಿದ್ದು ಮತ್ತೊಂದು ಪ್ರಯೋಗಕ್ಕೆ ಸಂಚಾರಿ ವಿಜಯ್ ಸಜ್ಜಾಗಿದ್ದು ಅವರ ಪ್ರಯೋಗ ಯಶಸ್ವಿಯಾಗಲಿ ಎಂದು ಹಾರೈಸೋಣ.

ಸತೀಶ ಎಂಬಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.