'ಬಾಲಿವುಡ್ ಬ್ಯಾಡ್ ಬಾಯ್' ಸಲ್ಮಾನ್ ಖಾನ್ ಒಂದಲ್ಲೊಂದು ವಿಚಾರವಾಗಿ ಸುದ್ದಿ ಆಗ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಫೋಟೋಗಳನ್ನು ಹಾಕುವ ಸಲ್ಲು ಅಭಿಮಾನಿಗಳ ಚಿತ್ತವನ್ನು ತಮ್ಮತ್ತ ಸೆಳೆಯುತ್ತಾರೆ.
ಹುರಿಗಟ್ಟಿದ ದೇಹವನ್ನು ತೋರಿಸಿರುವ ಭಜರಂಗಿ ಭಾಯಿಜಾನ್ ನಟ 'ಸದೃಢರಾಗಿ' ಎಂದು ಬರೆದಿದ್ದಾರೆ. ಮತ್ತೊಂದು ಪದವನ್ನೂ ಬರೆದಿದ್ದು 'ಜಗತ್ತು ಸದೃಢವಾಗಲಿ' ಎಂದಿದ್ದಾರೆ.
- " class="align-text-top noRightClick twitterSection" data="
">
ಸಲ್ಮಾನ್ ವೃತ್ತಿ ಜೀವನದ ಕಡೆ ನೋಡುವುದಾದ್ರೆ, ಸದ್ಯ ರಾಧೆ ಚಿತ್ರದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿಯೂ ಕೆಲಸ ಮಾಡುತ್ತಾರೆ.