ಸ್ಯಾಂಡಲ್ ವುಡ್ನಲ್ಲಿ ಟ್ರೆಂಡಿ ಟೈಟಲ್ಗಳ ಜಮಾನ ಶುರುವಾಗಿದ್ದು, ಸದ್ಯಕ್ಕೆ 'ಸವರ್ಣದೀರ್ಘ ಸಂಧಿ' ಅಂತ ಟೈಟಲ್ ಇಟ್ಟುಕೊಂಡ ಚಿತ್ರವೊಂದು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. 'ಕೋಸ್ಟಲ್ ವುಡ್ಲ್ಲಿ ಚಾಲಿ ಪೋಲಿಲು' ಎಂಬ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ದೇಶಕ ವೀರೇಂದ್ರ ಶೆಟ್ಟಿ ಈ ಸವರ್ಣ ದೀರ್ಘ ಸಂಧಿ ಚಿತ್ರದಲ್ಲಿ ಆ್ಯಕ್ಟಿಂಗ್ ಜೊತೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇದೀಗ ಡಾರ್ಲಿಂಗ್ ಪ್ರಭಾಸ್ ಅಭಿನಯದ, ಸಾಹೋ ಚಿತ್ರದ ರಿಲೀಸ್ ದಿನದೊಂದು ಸವರ್ಣದೀರ್ಘ ಸಂಧಿ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದೆ. ಇದೊಂದು ಪಕ್ಕಾ ಕಾಮಿಡಿ ಸಿನಿಮಾವಾಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ಸ್ಯಾಂಡಲ್ವುಡ್ನಲ್ಲಿ ಪೋಷಕ ಕಲಾವಿದರಾಗಿ ಗುರುತಿಸಲ್ಪಟ್ಟಿರುವ ವಿನಯ್ ಪ್ರಸಾದ್ ಸಹೋದನ ಮಗಳು ಕೃಷ್ಣಾ ಅಭಿನಯಿಸಿದ್ದಾರೆ. ಪದ್ಮಜ ರಾವ್, ಕೃಷ್ಣಾ ಅಡಿಗಾ, ನಿರಂಜನ ದೇಶಪಾಂಡೆ ಮತ್ತು ರವಿ ಮಂಡ್ಯ ಹೀಗೆ ಹಲವಾರು ಕಲಾವಿದರು ನಟಿಸಿದ್ದಾರೆ.
ಇನ್ನು ವೀರು ಟಾಕೀಸ್ ಮತ್ತು ಲಿಲಾಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರ ತಯಾರಾಗಿದೆ. ಅಲ್ಲದೇ ಚಿತ್ರಕ್ಕೆ ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದು, ಲೋಗಂತನ್ ಶ್ರೀನಿವಾಸ್ರ ಕ್ಯಾಮೆರಾ ಕೈ ಚಳಕವಿದೆ. ಪ್ರಭಾಸ್ 'ಸಾಹೋ' ಚಿತ್ರದ ರಿಲೀಸ್ ದಿನವೇ ' ಸವರ್ಣದೀರ್ಘ ಸಂಧಿ' ಚಿತ್ರದ ಟ್ರೈಲರ್ ಅನಾವರಣಗೊಳ್ಳುತ್ತಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.