ETV Bharat / sitara

ರಶ್ಮಿಕಾ ಮಂದಣ್ಣ ಅಭಿನಯದ 'ಮಿಷನ್ ಮಜ್ನು' ಚಿತ್ರೀಕರಣ ಪೂರ್ಣ - ಮಿಷನ್ ಮಜ್ನು ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಸುದ್ದಿ

ಈ ವರ್ಷದ ಫೆಬ್ರವರಿಯಲ್ಲಿ ಲಖನೌದಲ್ಲಿ ಚಿತ್ರೀಕರಣ ಆರಂಭಿಸಿದ 'ಮಿಷನ್ ಮಜ್ನು' ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ. ಈ ಚಿತ್ರ ಪಾಕಿಸ್ತಾನದ ನೆಲದಲ್ಲಿ ಭಾರತದ ಅತ್ಯಂತ ದೊಡ್ಡ ರಾ ಕಾರ್ಯಾಚರಣೆ (RAW operation)ಯ ಕಥೆ ಹೇಳಲಿದೆ.

Rashmika Mandanna
ಮಿಷನ್ ಮಜ್ನು
author img

By

Published : Aug 29, 2021, 3:16 PM IST

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ ಚಿತ್ರ 'ಮಿಷನ್ ಮಜ್ನು' ಬಗ್ಗೆ ಪೋಸ್ಟ್​ ಮಾಡಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಬಗ್ಗೆ ಟ್ವಿಟ್​ ಮಾಡಿರುವ ರಶ್ಮಿಕಾ ಮಂದಣ್ಣ, "ತನ್ನ ಮೊದಲ ಬಾಲಿವುಡ್ ಚಿತ್ರ 'ಮಿಷನ್ ಮಜ್ನು' ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರೀಕರಣದ ವೇಳೆ ಶೂಟಿಂಗ್​ ಸೆಟ್​ನಲ್ಲಿನ ಕ್ಷಣಗಳು ಸುಂದರವಾಗಿತ್ತು" ಎಂದು ಹೇಳಿದ್ದಾರೆ.

  • & It’s a wrap..❤️ what a lovely lovely time I had shooting for #missionmajnu 🌸
    I..for one..can’t believe.. I have already wrapped for my first Hindi film.. I remember the time I heard the script for the first time and I went like.. ‘I want to be a part of this beautiful film’❤️ https://t.co/02C0P8duQt

    — Rashmika Mandanna (@iamRashmika) August 28, 2021 " class="align-text-top noRightClick twitterSection" data=" ">

ಲಖನೌದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಶಂತನು ಬಾಗ್ಚಿ ನಿರ್ದೇಶನದ ಈ ಸಿನಿಮಾ ಈ ವರ್ಷದ ಫೆಬ್ರವರಿಯಲ್ಲಿ ಚಿತ್ರೀಕರಣ ಪ್ರಾರಂಭಿಸಿತು. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಶರೀಬ್ ಹಶ್ಮಿ, ಪರ್ಮೀತ್ ಸೇಥಿ, ಅನಂತ್ ಮಹದೇವನ್ ಮತ್ತು ಕುಮದ್ ಮಿಶ್ರಾ ಕೂಡ ನಟಿಸಿದ್ದಾರೆ.

ನಿರ್ಮಾಪಕರಾದ ರೋನಿ ಸ್ಕ್ರೂವಾಲಾ, ಅಮರ್ ಬುಟಾಲಾ ಮತ್ತು ಗರಿಮಾ ಮೆಹ್ತಾ ಅವರ ಈ ಚಿತ್ರ ಪಾಕಿಸ್ತಾನದ ನೆಲದಲ್ಲಿ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ರಾ ಕಾರ್ಯಾಚರಣೆ(RAW operation)ಯ ಕಥೆ ಹೇಳಲಿದೆ.

ಇದನ್ನೂ ಓದಿ: ಮಹಿಳೆಯರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಬದಲು ರಕ್ಷಣೆ ನೀಡಿ: ನಟ ಚೇತನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.