ದಕ್ಷಿಣ ಭಾರತದ ಜನಪ್ರಿಯ ನಟಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ‘ಅಭದ್ರತೆ, ಅನಿಶ್ಚಿತತೆ’ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
![ರಶ್ಮಿಕಾ ಮಂದಣ್ಣ, Rashmika Mandanna](https://etvbharatimages.akamaized.net/etvbharat/prod-images/7300969_fbddse-1.jpg)
ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಯಶಸ್ಸು ಕಂಡ ನಟಿ ರಶ್ಮಿಕಾಗೆ ಜೀವನದಲ್ಲಿ ಅಭದ್ರತೆ ಕಾಡುತ್ತಿದೆಯಂತೆ. ಹೀಗಂತ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಕೊರೊನಾದಿಂದ ಲಾಕ್ಡೌನ್ಲ್ಲಿರುವ ನಟಿಗೆ ದಿಢೀರನೇ ಜೀವನದಲ್ಲಿ ಅಭದ್ರತೆ, ಅನಿಶ್ಚಿತತೆ ಅನಿಸತೊಡಗಿತಂತೆ. ನಂತರ ನಾವು ನಮ್ಮ ಬಗ್ಗೆ ಅಲ್ಲದೆ ಬೇರೆಯವರ ಬಗ್ಗೆಯೂ ಈ ಲಾಕ್ ಡೌನ್ ಚಿಂತನೆ ಮಾಡುವಂತೆ ಆಗಿದೆ. ಈ ಅಭದ್ರತೆಯನ್ನೇ ನಾವು ಸ್ಟ್ರೆಂತ್ ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ. ಜೊತೆಗೆ ಅವರು ಇದನ್ನು ವೈಯಕ್ತಿಕ ಹಾಗೂ ವೃತ್ತಿ ಜೀವನದ ಕುರಿತಾಗಿ ಬರೆದುಕೊಂಡಿದ್ದಾರೆ ಎನ್ನಲಾಗ್ತಿದೆ.
![ರಶ್ಮಿಕಾ ಮಂದಣ್ಣ, Rashmika Mandanna](https://etvbharatimages.akamaized.net/etvbharat/prod-images/7300969_fbddse-2.jpg)
ರಶ್ಮಿಕಾರ ಈ ಫಿಲೋಸಫಿ ಮಾತಿಗೆ ಅನೇಕರು ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ. ನೀವು ಸತ್ಯವನ್ನೇ ಹೇಳಿದ್ದೀರಾ, ನಿಮ್ಮ ಧೈರ್ಯ ಮೆಚ್ಚಲೇಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಕನ್ನಡದಲ್ಲಿ ಧ್ರುವ ಸರ್ಜಾ ಜೊತೆ ‘ಪೊಗರು’, ತಮಿಳಿನಲ್ಲಿ ಕಾರ್ತಿ ಜೊತೆ ಸುಲ್ತಾನ್ ಹಾಗೂ ಅಲ್ಲು ಅರ್ಜುನ್ ಜೊತೆ ‘ಪುಷ್ಪ’ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.