ETV Bharat / sitara

3 ಭಾಷೆಗಳಲ್ಲಿ ರಾಮಾಯಣ ಸಿನಿಮಾ ನಿರ್ಮಿಸಲಿರುವ ಅಲ್ಲು ಅರ್ಜುನ್​... ಇದರ ಬಜೆಟ್​ ಎಷ್ಟು?

author img

By

Published : Jul 15, 2019, 8:40 AM IST

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಇದುವರೆಗೂ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದ್ದು ಈಗ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮಾಯಣ ಸಿನಿಮಾವನ್ನು ನಿರ್ಮಿಸಲು ಹೊರಟಿದ್ದಾರೆ. ತೆಲುಗು, ತಮಿಳು, ಹಿಂದಿ ಮೂರು ಭಾಷೆಗಳಲ್ಲೂ ಸಿನಿಮಾ ತಯಾರಾಗಲಿದೆ.

ಅಲ್ಲು ಅರವಿಂದ್

ಟಾಲಿವುಡ್ ಟಾಪ್ ಪ್ರೊಡ್ಯೂಸರ್​​​ಗಳಲ್ಲಿ ಅಲ್ಲು ಅರವಿಂದ್ ಕೂಡಾ ಒಬ್ಬರು. ಗೀತಾ ಆರ್ಟ್ಸ್​​ ಬ್ಯಾನರ್ ಅಡಿ ಬಹಳಷ್ಟು ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟನೆಯ 'ಗೀತಗೋವಿಂದಂ' ಸಿನಿಮಾ ಕೂಡಾ ಅವರ ನಿರ್ಮಾಣದ ಸಿನಿಮಾ.

ಮಧು ಮಂಥೇನ, ನಮಿತ್ ಮಲ್ಹೋತ್ರ, VFX ಕಂಪನಿ ಜೊತೆ ಸೇರಿ ಅಲ್ಲು ಅರ್ಜುನ್ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ವಾಲ್ಮೀಕಿ ವಿರಚಿತ ರಾಮಾಯಣವನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ತೆಲುಗು, ತಮಿಳು, ಹಿಂದಿ ಮೂರೂ ಭಾಷೆಗಳ 3ಡಿ ಟೆಕ್ನಾಲಜಿಯಲ್ಲಿ ಈ ಸಿನಿಮಾವನ್ನು ತಯಾರಿಸಲಾಗುವುದು ಎನ್ನಲಾಗಿದೆ. MOM ಸಿನಿಮಾ ನಿರ್ದೇಶಿಸಿದ್ದ ರವಿ ಉದ್ಯವರ್ ಹಾಗೂ ದಂಗಲ್ ಸಿನಿಮಾ ನಿರ್ದೇಶಿಸಿದ್ದ ನಿತೀಶ್ ತಿವಾರಿ ಜೊತೆ ಸೇರಿ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಶೀಘ್ರದಲ್ಲೇ ಚಿತ್ರತಂಡ ತಾರಾಗಣ, ತಾಂತ್ರಿಕ ವರ್ಗ ಹಾಗೂ ಇನ್ನಿತರ ವಿವರಗಳನ್ನು ರಿವೀಲ್ ಮಾಡಲಿದೆ. 2021 ರಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Intro:Body:

allu

Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.