ETV Bharat / sitara

ರಕ್ಷಿತ್ ಬೇಸರಕ್ಕೆ ಪುಷ್ಕರ್ ಕಾರಣ… ಇಷ್ಟಕ್ಕೂ ಆಗಿದ್ದೇನು? - ರಕ್ಷಿತ್ ಬೇಸರಕ್ಕೆ ಪುಷ್ಕರ್ ಕಾರಣ

ರಕ್ಷಿತ್ ಬಗ್ಗೆ ಅವಹೇಳನಕಾರಿ ಕಾರ್ಯಕ್ರಮ ಮೂಡಿಬರುವುದಕ್ಕೆ ಮುಖ್ಯ ಕಾರಣ, ಅವರ ಒಂದು ಕಾಲದ ಗೆಳೆಯ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಂತೆ. ಈ ವಿಷಯವನ್ನು ಸ್ವತಃ ರಕ್ಷಿತ್ ಬಹಿರಂಗಪಡಿಸಿದ್ದಾರೆ.

Rakshit Shetty
ರಕ್ಷಿತ್ ಬೇಸರಕ್ಕೆ ಪುಷ್ಕರ್ ಕಾರಣ
author img

By

Published : Jul 12, 2021, 9:33 AM IST

ತಮ್ಮ ಬಗ್ಗೆ ಕೆಲವು ಸುದ್ದಿವಾಹಿನಿಗಳಲ್ಲಿ ಅವಹೇಳನಕಾರಿಯಾದ ಕಾರ್ಯಕ್ರಮಗಳು ಬರುತ್ತಿವೆ ಮತ್ತು ಅದಕ್ಕೆ ತಕ್ಕ ಉತ್ತರವನ್ನು ಕೊಡುವುದಾಗಿ ರಕ್ಷಿತ್ ಶೆಟ್ಟಿ ಕೆಲವು ದಿನಗಳ ಹಿಂದೆಯೇ ಹೇಳಿಕೊಂಡಿದ್ದರು. ಅದರಂತೆ ಅವರು ಭಾನುವಾರ ಸಂಜೆ ನಡೆದ ಮಾಧ್ಯಮಗೋಷ್ಟಿಯಲ್ಲಿ ತಮ್ಮ ಬೇಸರ ಹೊರಹಾಕಿದ್ದಾರೆ.

ರಕ್ಷಿತ್ ಬಗ್ಗೆ ಅವಹೇಳನಕಾರಿ ಕಾರ್ಯಕ್ರಮ ಮೂಡಿಬರುವುದಕ್ಕೆ ಮುಖ್ಯ ಕಾರಣ, ಅವರ ಒಂದು ಕಾಲದ ಗೆಳೆಯ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಂತೆ. ಈ ವಿಷಯವನ್ನು ಸ್ವತಃ ರಕ್ಷಿತ್ ಶೆಟ್ಟಿ ಬಹಿರಂಗಪಡಿಸಿದ್ದಾರೆ.

ಒಂದೂವರೆ ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಪುಷ್ಕರ್ ನಿರ್ಮಿಸಿದ್ದರು. ಕಥೆ ಬರೆಯುವುದರ ಜೊತೆಗೆ ಒಂದು ಪ್ರಮುಖ ಪಾತ್ರವನ್ನು ರಕ್ಷಿತ್ ನಿರ್ವಹಿಸಿದ್ದರು. ಈ ಚಿತ್ರ ಬಾಕ್ಸ್ ಆಫೀಸ್​​​​ನಲ್ಲಿ ಸೋತ ನಂತರ ಅವರಿಬ್ಬರ ಸಂಬಂಧ ಹದಗೆಟ್ಟಿತಂತೆ. ಈ ಸೋಲಿಗೆ ರಕ್ಷಿತ್ ಶೆಟ್ಟಿಯೇ ಕಾರಣ ಎಂದು ಅವರ ಬೆನ್ನ ಹಿಂದೆ ಪುಷ್ಕರ್ ಕೆಟ್ಟದಾಗಿ ಮಾತನಾಡುವುದಕ್ಕೆ ಪ್ರಾರಂಭಿಸಿದರಂತೆ. ಇದು ರಕ್ಷಿತ್ ಶೆಟ್ಟಿ ಕಿವಿಗೆ ಬಿದ್ದಿದೆ. ಕೊನೆಗೆ, ಅವರು ಅವನೇ ಶ್ರೀಮನ್ನಾರಾಯಣ ಚಿತ್ರದಿಂದ ಪುಷ್ಕರ್​ಗೆ ಆದ ನಷ್ಟವನ್ನು ತುಂಬಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅವರೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಬೇಸರದಿಂದ ಪುಷ್ಕರ್, ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವುದರ ಜೊತೆಗೆ, ಕಾರ್ಯಕ್ರಮ ಮಾಡಿಸಿದ್ದಾರೆ ಎಂಬುದು ರಕ್ಷಿತ್ ಆರೋಪ.

ಈ ಕುರಿತು ಮಾತನಾಡಿರುವ ಅವರು, ಪುಷ್ಕರ್​​​ಗೆ ದುಬಾರಿ ಬಡ್ಡಿಗೆ ಸಾಲ ತಂದಿದ್ದರು. ಹಾಗಾಗಿಯೇ ಚಿತ್ರದ ಬಜೆಟ್ ಹೆಚ್ಚಾಗಿತ್ತು. ಇಲ್ಲವಾದರೆ, ಅದು ದೊಡ್ಡ ನಷ್ಟವೇನಲ್ಲ. ಆದರೂ ನಾನು 20 ಕೋಟಿ ಸಾಲ ತೀರಿಸಿದ್ದೇನೆ. ನನ್ನ ಮತ್ತು ಚಿತ್ರದ ಬಗ್ಗೆ ಗಾಳಿಸುದ್ದಿ ಹಬ್ಬಿಸಬೇಡಿ ಎಂದಿದ್ದೆ. ಅಷ್ಟೇ ಅಲ್ಲ, 777 ಚಾರ್ಲಿ ಮತ್ತು ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳಲ್ಲಿ ಅವರು ಹೂಡಿದ್ದ ಬಂಡವಾಳವನ್ನು ಸಹ ವಾಪಸ್​ ಕೊಟ್ಟಿದ್ದೆ. ಆದರೂ ನನ್ನ ವಿರುದ್ಧ ಅಪಪ್ರಚಾರ ನಿಲ್ಲಲಿಲ್ಲ. ಇದರಿಂದ ಬಹಳ ಬೇಸರವಾಗಿತ್ತು. ಇದಕ್ಕೆಲ್ಲ ಉತ್ತರ ಕೊಡಬೇಕಾಗಿತ್ತು. ಅದೇ ಕಾರಣಕ್ಕೆ ಸತ್ಯಾಂಶಗಳ ಮೂಲಕ ಇಲ್ಲಿ ನಿಂತಿದ್ದೇನೆ ಎಂದು ರಕ್ಷಿತ್​ ಹೇಳಿದ್ರು.

ಇದನ್ನೂ ಓದಿ: ನಾನು ಯಾವುದಕ್ಕೂ ಯಾವ ವಿಷಯಕ್ಕೂ ತಲೆಕೆಡಿಸಿಕೊಂಡಿಲ್ಲ: ನಟ ರಕ್ಷಿತ್ ಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.