ಇಂದು ಕಿಚ್ಚ ಸುದೀಪ್ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ನೆಚ್ಚಿನ ನಟನ ಬರ್ತ್ಡೇ ಖುಷಿಯಲ್ಲಿದ್ದ ಕಿಚ್ಚನ ಅಭಿಮಾನಿಗಳಿಗೆ ತ್ರಿಬಲ್ ಧಮಾಕ. ಒಂದು ಕಡೆ ಕೋಟಿಗೊಬ್ಬ-3 ಟೀಸರ್ ಲಾಂಚ್ ಆಗಿದ್ರೆ, ಮತ್ತೊಂದೆಡೆ ಅಭಿನಯ ಚಕ್ರವರ್ತಿಯ ಬಯೋಗ್ರಫಿ ಬಿಡುಗಡೆಯಾಗಿದೆ.
ಸಿನಿಮಾ ಪತ್ರಕರ್ತ ಶರಣು ಹುಲ್ಲೂರು ಬರೆದಿರುವ ಕಿಚ್ಚನ ಆತ್ಮಚರಿತ್ರೆಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಲಾಂಚ್ ಮಾಡಿ, ಸ್ಯಾಂಡಲ್‌ವುಡ್ ಬಾದ್ ಷಾ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಕೊರೊನಾ ಕಾರಣ ಕಿಚ್ಚ ಸುದೀಪ್ ಹುಟ್ಟುಹಬ್ಬವನ್ನು ಸರಳವಾಗಿ ಅನಾಥ ಮಕ್ಕಳ ಜೊತೆ ಆಚರಿಸಿಕೊಂಡಿದ್ದಾರೆ.