ETV Bharat / sitara

ಪುನೀತ್ 30ನೇ ದಿನದ ಪುಣ್ಯಸ್ಮರಣೆ: ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ರಾಜ್​ ಕುಟುಂಬಸ್ಥರು - Puneeth rajkumar 30th day rituals

ಕಳೆದ ಅಕ್ಟೋಬರ್ 29ರಂದು ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಇಂದು 30ನೇ ದಿನದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಸೇರಿದಂತೆ ಇಡೀ ರಾಜ್ ಕುಟುಂಬಸ್ಥರು ಸಮಾಧಿಗೆ ಬಂದು ಪೂಜೆ ಸಲ್ಲಿಸಿದರು.

ಪುನೀತ್ 30ನೇ ದಿನದ ಪುಣ್ಯಸ್ಮರಣೆ
ಪುನೀತ್ 30ನೇ ದಿನದ ಪುಣ್ಯಸ್ಮರಣೆ
author img

By

Published : Nov 29, 2021, 12:44 PM IST

Updated : Nov 29, 2021, 2:01 PM IST

ಕನ್ನಡ ಚಿತ್ರರಂಗದ 'ಯುವರತ್ನ', ಅಭಿಮಾನಿಗಳ ಆರಾಧ್ಯದೈವ, ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾಗಿ ಇಂದಿಗೆ ಒಂದು ತಿಂಗಳು ಕಳೆದಿದೆ. ಈ ಹಿನ್ನೆಲೆ ಅಪ್ಪು ಸಮಾಧಿಗೆ ರಾಜ್ ಕುಟುಂಬಸ್ಥರು ಪೂಜೆ ಸಲ್ಲಿಸಿದರು.

ಕಳೆದ ಅಕ್ಟೋಬರ್ 29ರಂದು ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಇಂದು 30ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ, ಚೆನ್ನೇಗೌಡ ಸೇರಿದಂತೆ ಇಡೀ ರಾಜ್ ಕುಟುಂಬ, ಪುನೀತ್ ಸಮಾಧಿಗೆ ಬಂದು ಪೂಜೆ ಸಲ್ಲಿಸಿದರು.

ಪುನೀತ್ ರಾಜ್​ಕುಮಾರ್​ 30ನೇ ದಿನದ ಪುಣ್ಯಸ್ಮರಣೆ

ಇದನ್ನೂ ಓದಿ: ಅಪ್ಪು ಅಮರ.. 100ಕ್ಕೂ ಹೆಚ್ಚು ಕಲಾವಿದರಿಂದ ನೇತ್ರದಾನದ ವಾಗ್ದಾನ.. ಪುನೀತ್‌ಗೆ ಸೆಲ್ಯೂಟ್ ಎಂದ ರಾಘಣ್ಣ..

ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್‌ ಕುಮಾರ್, ಮನೆಯಲ್ಲಿ ಪೂಜೆ ಸಹ ಮಾಡಲಿದ್ದೇವೆ. ಪುನೀತ್ ನಮ್ಮನ್ನು ಅಗಲಿ ಒಂದು ತಿಂಗಳು ಅಯ್ತು. ಒಂದು ತಿಂಗಳ ಪೂಜೆಯನ್ನು ಸಮಾಧಿ ಬಳಿ ಸಲ್ಲಿಸಿದ್ದೇವೆ. ಮನೆಗೆ ಹೋಗಿ ಪುನೀತ್ ಫೋಟೋಗೆ ಕುಟುಂಬಸ್ಥರೆಲ್ಲ ಪೂಜೆ ಸಲ್ಲಿಸುತ್ತೇವೆ. ಇಂದು ಯಾವುದೇ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿಲ್ಲ. ಸಾಂಬ್ರಾಣಿ ಹಾಕಿ ಪೂಜೆ ಸಲ್ಲಿಸಿದ್ದೇವೆ. ಒಂದು ವರ್ಷದ ಕಾರ್ಯವನ್ನು ಎಲ್ಲರನ್ನು ಕರೆದು ಮಾಡುತ್ತೇವೆ ಎಂದರು.

ಇದನ್ನೂ ಓದಿ: ಹಾಲನ್ನು ವ್ಯರ್ಥ ಮಾಡಬೇಡಿ, ಬಡಮಕ್ಕಳಿಗೆ ನೀಡಿ: ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಮನವಿ

ಪಿಆರ್​ಕೆ ಬ್ಯಾನರ್​ನಲ್ಲಿ ನಿರ್ಮಾಣವಾದ 'ಗಂಧದಗುಡಿ ಡಾಕ್ಯುಮೆಂಟರಿ' ಕುರಿತು ಮಾತನಾಡಿದ ಅವರು, ಯಾವುದೇ ಮೇಕಪ್ ಇಲ್ಲದೆ ಸಾಮಾನ್ಯ ವ್ಯಕ್ತಿ ಹಾಗೆ ಸಂದೇಶ ಕೊಟ್ಟಿದ್ದಾರೆ. ಅತಿ ಶೀಘ್ರದಲ್ಲೇ ಇದು ಬಿಡುಗಡೆ ಆಗಲಿದೆ. ವೈಲ್ಡ್ ಲೈಫ್, ಕಾಡಿನ ಮಹತ್ವದ ಬಗ್ಗೆ ಒಳ್ಳೆ ಭಾವನೆಯಿಂದ ಮೂಡಿ ಬರುತ್ತಿರುವ ಸಾಕ್ಷ್ಯಚಿತ್ರ ಇದು. ಅದೊಂದು ಕೊನೆಯ ಆಸ್ತಿ ಬಿಟ್ಟು ಹೋಗಿದ್ದಾನೆ. ಸಿನಿಮಾ ಸಂದೇಶ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಸಹೋದರ ರಾಘವೇಂದ್ರ ರಾಜ್ ಕುಮಾರ್ ಹೇಳಿದರು.

Last Updated : Nov 29, 2021, 2:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.