ETV Bharat / sitara

ಲಾಕ್​ಡೌನ್​ ವೇಳೆ ಸಿನಿಮಾ ರಿಲೀಸ್​​ಗೆ ಹೊಸ ದಾರಿ ಕಂಡುಕೊಂಡ ಪಿಆರ್​​ಕೆ ಪ್ರೊಡಕ್ಷನ್​​!

ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರ ಅಭಿನಯದ "ಲಾ" ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ಅಮೆಜಾನ್ ಪ್ರೈಮ್​​ನಲ್ಲಿ ಬಿಡುಗಡೆ ಆಗಲಿದೆ.

author img

By

Published : May 15, 2020, 1:42 PM IST

PRK Production new way to release cinema
ಲಾಕ್​ಡೌನ್​ ವೇಳೆ ಸಿನಿಮಾ ರಿಲೀಸ್​ ಮಾಡಲು ಹೊಸ ದಾರಿ ಹುಡುಕಿಕೊಂಡ ಪಿಆರ್​​ಕೆ ಪ್ರೊಡಕ್ಷನ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್​​ ನಿರ್ಮಾಣದ ಫ್ರೆಂಚ್ ಬಿರ್ಯಾನಿ ಚಿತ್ರ ಒಟಿಟಿ ಪ್ಲಾಟ್ ಫಾರ್ಮ್​ನಲ್ಲಿ ಬಿಡುಯಾಗಲಿದೆ ಎಂದು ಇತ್ತೀಚೆಗಷ್ಟೇ ಪಿಆರ್​ಕೆ ಪ್ರೋಡಕ್ಷನ್ ಹೇಳಿತ್ತು. ಇದೀಗ ಅದೇ ರೀತಿ ಪಿಅರ್​​ಕೆ ಪ್ರೊಡಕ್ಷನ್​​ನ ಮತ್ತೊಂದು ಚಿತ್ರ ಒಟಿಟಿ ಪ್ಲಾಟ್ ಫಾರ್ಮ್​​ನಲ್ಲಿಯೇ ಬಿಡುಗಡೆಗೆ ಸಿದ್ಧವಾಗಿದೆ.

PRK Production new way to release cinema
ಫ್ರೆಂಚ್ ಬಿರ್ಯಾನಿ ಚಿತ್ರ

ಹೌದು, ಪಿಆರ್​ಕೆ ಪ್ರೋಡಕ್ಷನ್​​ನಲ್ಲಿ ಪುನೀತ್ ರಾಜ್ ಕುಮಾರ್ ‌ನಿರ್ಮಾಣ ಮಾಡಿ, ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರ ಅಭಿನಯಿಸಿರುವ "ಲಾ" ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ಅಮೆಜಾನ್ ಪ್ರೈಮ್​​ನಲ್ಲಿ ಬಿಡುಗಡೆ ಆಗಲಿದೆ.

ಚಿತ್ರಕ್ಕೆ ನವ ನಿರ್ದೇಶಕ ರಘು ಸಮರ್ಥ್ ಆ್ಯಕ್ಷನ್​ ಕಟ್​ ಹೇಳಿದ್ದು, ರಾಗಿಣಿ ಚಂದ್ರ, ಸಿರಿ ಪ್ರಹ್ಲಾದ್, ಮುಖ್ಯಮಂತ್ರಿ ಚಂದ್ರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

"ಲಾ" ಚಿತ್ರ

"ಲಾ" ಚಿತ್ರ ಜೂನ್ 26ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಅದೇ ರೀತಿ ಪಿಆರ್​ಕೆ ಪ್ರೋಡಕ್ಷನ್​ನಲ್ಲಿ ಪುನೀತ್ ರಾಜ್​ಕುಮರ್ ನಿರ್ಮಾಣ ಮಾಡಿರುವ ಡ್ಯಾನಿಶ್ ಸೇಟ್, ಸಾಲ್ ಯೂಸುಫ್ ಹಾಗೂ ಪಿತೋಬಶ್ ನಟಿಸಿರುವ ಅವಿನಾಶ್ ಬಳೇಕ್ಕಳ ಚಿತ್ರಕಥೆಯನ್ನು ಬರೆದಿರುವ, ಪನ್ನಗ ಭರಣ ನಿರ್ದೇಶನದ ಫ್ರೆಂಚ್ ಬಿರ್ಯಾನಿ ಜುಲೈ 24ರಿಂದ ಅಮೆಜಾನ್ ಪ್ರೈಮ್​​ನಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.