ಕೆಜಿಎಫ್ ಮೊದಲ ಭಾಗ ಸೂಪರ್ ಹಿಟ್ ಆದ್ಮಲೇ, ಕೆಜಿಎಫ್ ಚಾಪ್ಟರ್ 2 ಮೇಲೆ ಬೆಟ್ಟದಟ್ಟು ನಿರೀಕ್ಷೆಗಳಿವೆ. ಈ ಚಿತ್ರದಲ್ಲಿ ಯಶ್ ಅಲ್ಲದೇ, ಹಲವು ಹೊಸ ಮುಖಗಳ ಪ್ರವೇಶವಾಗಲಿದ್ದು, ಚಿತ್ರರಸಿಕರಿಗೆ ಫುಲ್ ಮಿಲ್ಸ್ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಇವೆ.
ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ರಾವ್ ರಮೇಶ್ ಅಂತಹ ಕಲಾವಿದರು ಕೆಜಿಎಫ್ ತಂಡ ಸೇರಿದ್ದಾರೆ. ಈ ಮಧ್ಯೆ ಕೆಜಿಎಫ್‌ನ ನರಾಚಿಯನ್ನು ವಶಪಡಿಸಿಕೊಳ್ಳಬೇಕು ಎಂದು ಸಂಚು ಹಾಕಿ ಕೂತಿರುವ ಇನಾಯತ್ ಖಲೀಲ್ ಮುಂದುವರಿದ ಅಧ್ಯಾಯದಲ್ಲಿ ಹೆಚ್ಚು ಗಮನ ಸೆಳೆಯುವ ಪಾತ್ರವಾಗಿದೆ. ಈ ಕ್ಯಾರೆಕ್ಟರ್ ಬಗ್ಗೆ ಇದೀಗ, ನಿರ್ದೇಶಕ ಪ್ರಶಾಂತ್ ನೀಲ್ ರಿವೀಲ್ ಮಾಡಿದ್ದಾರೆ.
![new KGF Chapater 2 poster](https://etvbharatimages.akamaized.net/etvbharat/prod-images/kn-bng-04-kgf-chapater-2-movie-new-poster-release-7204735_31052021133331_3105f_1622448211_1039.jpg)
ಕೆಜಿಎಫ್ ಚಿತ್ರದ ಇನಾಯತ್ ಖಲೀಲ್ ಪಾತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಇನಾಯತ್ ಖಲೀಲ್ ಪಾತ್ರ ನಿರ್ವಹಿಸಿರುವ ಬಾಲಕೃಷ್ಣ ಹುಟ್ಟುಹಬ್ಬದ ಹಿನ್ನೆಲೆ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಆ ಪಾತ್ರದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸಣ್ಣ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಅಷ್ಟಕ್ಕೂ ಇನಾಯತ್ ಖಲೀಲ್ ಪಾತ್ರ ಮಾಡಿರೋ ಬಾಲಕೃಷ್ಣಗೆ ಇದು ಮೊದಲ ಸಿನಿಮಾ. ಈಗಾಗಲೇ ಕೆಜಿಎಫ್ ನಲ್ಲಿ ಹಲವು ಹೊಸ ಮುಖಗಳನ್ನ ಪರಿಚಯಿಸಿರೋ ನಿರ್ದೇಶಕ ಪ್ರಶಾಂತ್ ನೀಲ್, ಬೆಂಗಳೂರಿನವರಾದ ಬಾಲಕೃಷ್ಣ ನೀಲಕಂಠಪುರಂ ಅವರನ್ನು, ಈ ಚಿತ್ರದಲ್ಲಿ ಇನಾಯತ್ ಕ್ಯಾರೆಕ್ಟರ್ ಮೂಲಕ ಪರಿಚಯಿಸಿದ್ದಾರೆ.
![new KGF Chapater 2 poster](https://etvbharatimages.akamaized.net/etvbharat/prod-images/11963486_abc.jpg)
ಕೆಜಿಎಫ್ ಚಾಪ್ಟರ್-2ರಲ್ಲಿ ಈಗ ನರಾಚಿ ಸಾರ್ವಭೌಮತ್ವಕ್ಕಾಗಿ ಹೋರಾಟ ನಡೆಯಲಿದೆ. ಅಧೀರ, ಇನಾಯತ್ ಖಲೀಲ್, ರಮಿಕಾ ಸೇನ್, ರಾಜೇಂದ್ರ ದೇಸಾಯಿ, ಆಂಡ್ರ್ಯೂ, ಕಮಲ್, ಹಾಗೂ ರಾಕಿ ಸೇರಿದಂತೆ ಹಲವರ ಕಣ್ಣು ನರಾಚಿ ಮೇಲಿದೆ. ಯಾರ ಕಣ್ಣಿಗೂ ಕಾಣಿಸದೇ ತಲೆಮರಿಸಿಕೊಂಡಿರುವ ಇನಾಯತ್ ಖಲೀಲ್ ನರಾಚಿಗಾಗಿ ಯಾರ ಜೊತೆ ಕೈ ಜೋಡಿಸಲಿದ್ದಾನೆ ಎನ್ನುವ ಪ್ರಶ್ನೆ, ಸದ್ಯ ರಿವೀಲ್ ಆಗಿರುವ ಪೋಸ್ಟರ್ ನಲ್ಲಿದೆ. ಯಾರಿಗೂ ತಿಳಿಯದ ಸ್ಥಳದಲ್ಲಿ ಇನಾಯತ್ ಖಲೀಲ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ' ಎಂಬ ಹೆಡ್‌ಲೈನ್ ಸಹ ಪೋಸ್ಟರ್‌ನಲ್ಲಿ ನೋಡಬಹುದು.