ETV Bharat / sitara

ಪಂಚಭಾಷಾ "ಸಲಾರ್" ಚಿತ್ರ​ ಪ್ಯಾನ್​ ಇಂಡಿಯಾ ಬಿಡುಗಡೆಗೆ ದಿನಾಂಕ ಫಿಕ್ಸ್​ - ಸಲಾರ್ ಬಿಡುಗಡೆ ದಿನಾಂಕ

ಆಕ್ಷನ್ ಚಿತ್ರ ‘ಸಲಾರ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಚಿತ್ರ ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಪಂಚಭಾಷೆಗಳಲ್ಲಿ ಮೂಡಿಬರಲಿದೆ.

author img

By

Published : Feb 28, 2021, 5:29 PM IST

ಹೈದರಾಬಾದ್: ತೆಲಗು ರೆಬೆಲ್​ ಸ್ಟಾರ್​ ಪ್ರಭಾಸ್​ ಅಭಿನಯದ ಆಕ್ಷನ್ ಚಿತ್ರ ‘ಸಲಾರ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಕೆಜಿಎಫ್ ಖ್ಯಾತಿಯ ಸ್ಟಾರ್ ನಿರ್ದೇಶಕರ ಮತ್ತೊಂದು ಬಿಗ್ ಮೂವಿ ಬಿಡುಗಡೆಗೆ ಮುಹೂರ್ತ ಫಿಕ್ಸ್​ ಮಾಡಿದ್ದಾರೆ.

"ಪ್ಯಾನ್ ಇಂಡಿಯಾ" ಚಿತ್ರ ಸಲಾರ್​ ಅನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ವಿಜಯ್ ಕಿರಗಂದೂರು ಅವರ ಹೊಂಬಾಳೆ ಪ್ರೊಡಕ್ಷನ್ಸ್​ನಲ್ಲಿ ಮೂಡಿಬರುತ್ತಿರುವ ಸಲಾರ್ ಚಿತ್ರದಲ್ಲಿ ಟಾಲಿವುಡ್​ ಸೂಪರ್​ ಸ್ಟಾರ್​ ಪ್ರಭಾಸ್ ನಾಯಕನಾಗಿ ನಟಿಸಿದ್ದಾರೆ. ಬಹು ನಿರೀಕ್ಷಿತ ಸಲಾರ್​ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ.

ಈ ಚಿತ್ರ ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಪಂಚಭಾಷೆಗಳಲ್ಲಿ ಮೂಡಿಬರಲಿದೆ. ಬಹುತೇಕ ಕೆಜಿಎಫ್ ತಾಂತ್ರಿಕ ವರ್ಗವೇ ಇರಲಿದ್ದು, ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಬಹಿರಂಗಪಡಿಸಿದೆ.

2020 ರ ಜನವರಿ 15 ರಂದು ಸಲಾರ್​ ಚಿತ್ರ ಹೈದರಾಬಾದ್​ನಲ್ಲಿ ಸೆಟ್ಟೇರಿತ್ತು.

ಹೊಂಬಾಳೆ ಪ್ರೊಡಕ್ಷನ್ಸ್ ತನ್ನ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಸಲಾರ್ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ವಿಶ್ವದಾದ್ಯಂತ ಸಲಾರ್ ಏಪ್ರಿಲ್​ 14 ರಂದು ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.