ETV Bharat / sitara

'ಜೇಮ್ಸ್' ಟೀಸರ್​​ ನೋಡಿ ಪ್ರಭಾಸ್​ ಫಿದಾ.. ಸಿನಿಮಾ ಮಾಸ್ಟರ್​ಪೀಸ್​ ಆಗೋದ್ರಲ್ಲಿ ಸಂಶಯವೇ ಇಲ್ಲ ಎಂದ ನಟ

author img

By

Published : Feb 13, 2022, 3:11 AM IST

ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಈಗಾಗಲೇ ಕೋಟ್ಯಂತರ ಸಿನಿ ಪ್ರೇಕ್ಷಕರು ಇದರ ವೀಕ್ಷಣೆ ಮಾಡಿದ್ದಾರೆ. ಚಿತ್ರದ ಟೀಸರ್​ಗೆ ಟಾಲಿವುಡ್ ನಟ ಪ್ರಭಾಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Prabhas on James
Prabhas on James

ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆ ಮಾಡಿರುವ ಕೊನೆ ಸಿನಿಮಾ ಜೇಮ್ಸ್​​ ಟೀಸರ್​ ಫೆಬ್ರವರಿ 11ರಂದು ರಿಲೀಸ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಟೀಸರ್ ನೋಡಿರುವ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲೂ ಟೀಸರ್ ರಿಲೀಸ್ ಆಗಿದ್ದು, ಈಗಾಗಲೇ ಕೋಟ್ಯಂತರ ಜನರು ಇದರ ವೀಕ್ಷಣೆ ಮಾಡಿದ್ದಾರೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ಕೂಡ ಜೇಮ್ಸ್​ ಚಿತ್ರದ ಟೀಸರ್​ಗೆ ಫಿದಾ ಆಗಿದ್ದು, ಭಾವನಾತ್ಮಕವಾಗಿ ಪೋಸ್ಟ್​ ಹಂಚಿಕೊಂಡಿದ್ದಾರೆ.

"ಜೇಮ್ಸ್​ ಸಿನಿಮಾ ಮೂಲಕ ನಾವೆಲ್ಲರೂ ಒಂದು ಮಾಸ್ಟರ್​ಪೀಸ್​ಗೆ ಸಾಕ್ಷಿಯಾಗಲಿದ್ದೇವೆ. ಪುನೀತ್ ರಾಜ್​ಕುಮಾರ್​ ಸರ್​ ಅವನ್ನ ಮೆಚ್ಚುವ ಲಕ್ಷಾಂತರ ಅಭಿಮಾನಿಗಳಿಗೆ ಈ ಸಿನಿಮಾ ಯಾವಾಗಲೂ ವಿಶೇಷವಾಗಿರುತ್ತದೆ. ವಿ ಮಿಸ್​ ಯೂ" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಜೇಮ್ಸ್ ಟೀಸರ್​ ಶೇರ್ ಮಾಡಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಪ್ರಭಾಸ್ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ಈ ರೀತಿಯಾಗಿ ಬರೆದುಕೊಳ್ಳುತ್ತಿದ್ದಂತೆ ಸಾವಿರಾರು ಜನರು ಇದಕ್ಕೆ ಲೈಕ್ ಮಾಡಿದ್ದು, ಅನೇಕರು ಶೇರ್ ಕೂಡ ಮಾಡಿಕೊಂಡಿದ್ದಾರೆ.ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆ ಮಾಡಿರುವ ಜೇಮ್ಸ್​ ಟೀಸರ್ ಈಗಾಗಲೇ ದಾಖಲೆಯ ವೀಕ್ಷಣೆಯಾಗಿದ್ದು, ನಂಬರ್ 1 ಟ್ರೆಂಡಿಂಗ್​ನಲ್ಲೂ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.