ಡಾ. ರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಮಹಾನ್ ನಟ. ಇವತ್ತಿಗೂ ಕೋಟ್ಯಾಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿರುವ ಅಣ್ಣಾವ್ರು, ಆ ಕಾಲದ ಜನರೇಷನ್ಗೆ ಮಾತ್ರ ಅಲ್ಲ, ಈ ಕಾಲದ ಪುಟಾಣಿ ಮಕ್ಕಳಿಗೆ ಕೂಡ ರಾಜ್ ಅಂದರೆ ಪೂಜ್ಯ ಭಾವನೆ.
ಈ ಮಾತಿಗೆ ಸಾಕ್ಷಿಯಾಗಿ ಮದನ್ಯ ಎಂಬ ಮಗು ಅಣ್ಣಾವ್ರ ಫೋಟೋ ಇರುವ ಟೀ ಶರ್ಟ್ ಅನ್ನ ತಪ್ಪಿಕೊಂಡು ಮುದ್ದಾಡುವ ಪರಿ ನೋಡಿದರೆ, ಎಂಥವರು ಕೂಡ ಬೋಲ್ಡ್ ಆಗ್ತಾರೆ. ಈ ಮುದ್ದಾದ ವಿಡಿಯೋಗೆ, ಅಣ್ಣಾವ್ರ ಮುದ್ದಿನ ಮಗ, ಪುನೀತ್ ರಾಜ್ಕುಮಾರ್ ಕೂಡ ಫಿದಾ ಆಗಿದ್ದಾರೆ.
ಅಷ್ಟಕ್ಕೂ ಈ ಮಗು ಯಾವ ಊರಿನವಳು ಅನ್ನೋದು ಮಾಹಿತಿ ಇಲ್ಲ. ಆದರೆ ಮಗುವಿನ ತಂದೆ, ಯಾರು ಅವರು ಅಂತಾ ಕೇಳಿದಿಕ್ಕೆ ರಾಜ್ ಕುಮಾರ್ ಅಂತಾ ಹೇಳಿ ಅಣ್ಣಾವ್ರು ಇರುವ ಟೀ ಶರ್ಟ್ ಅನ್ನು ತಬ್ಬಿಕೊಂಡು ಮುದ್ದಾಡುತ್ತಾಳೆ. ಈ ವಿಡಿಯೋವನ್ನ ಪುನೀತ್ ರಾಜ್ಕುಮಾರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪುಟ್ಟ ಅಭಿಮಾನಿ ಅಂತಾ ಹೇಳಿ ಹಂಚಿಕೊಂಡಿದ್ದಾರೆ.
ಈ ಹಿಂದೆ ನಾಲ್ಕು ವರ್ಷದ ಪುಟಾಣಿಯೊಬ್ಬ ಅಣ್ಣಾವ್ರ ಅಭಿನಯದ ಬಬ್ರುವಾಹನ ಚಿತ್ರದ ಸನ್ನಿವೇಶದ ಸಂಭಾಷಣೆಯನ್ನ ಹೇಳುವ ಮೂಲಕ ಅಪ್ಪು ಗಮನ ಸೆಳೆದಿದ್ದ. ಈಗ ಈ ಪುಟಾಣಿಯ ದೊಡ್ಡ ಪ್ರೀತಿಗೆ ಪವರ್ ಸ್ಟಾರ್ ಬೋಲ್ಡ್ ಆಗಿದ್ದಾರೆ.