ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕೆಲ ನಟ, ನಟಿಯರು ಒಂದೊಂದು ರೀತಿಯಲ್ಲಿ ಕೆಲಸಗಳನ್ನ ಮಾಡ್ತಾ ಕಾಲ ಕಳೆದಿದ್ರು. ಆದರೆ ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿ ಲಾಕ್ ಡೌನ್ ಸಂದರ್ಭದಲ್ಲಿ ಹೊಸ ಸಿನಿಮಾದ ಶೂಟಿಂಗ್ ಮಾಡಿ ಈಗ ಆ ಚಿತ್ರದ ಲುಕ್ ಮತ್ತು ಹೆಸರನ್ನ ಅನಾವರಣ ಮಾಡಿದ್ದಾರೆ.
ಬೆಲ್ ಬಾಟಮ್ ಚಿತ್ರದ ಬಳಿಕ ರಿಷಬ್ ಶೆಟ್ಟಿ ನಾಯಕ ನಟನಾಗಿ ಚಿತ್ರೀಕರಣ ಮುಗಿಸಿರುವ ಚಿತ್ರದ ಹೆಸರು ಹೀರೋ ಅಂತಾ. ಯುವ ಪ್ರತಿಭೆ ಭರತ್ ರಾಜ್ ಎಂಬುವರು, ಚಿತ್ರ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಇದು ಭರತ್ ರಾಜ್ ಅವ್ರ ಚೊಚ್ಚಲ ನಿರ್ದೇಶನದ ಚಿತ್ರ.
ರಿಷಬ್ ಶೆಟ್ಟಿ ಜೊತೆ ಯುವ ನಟಿ ಗಾನವಿ ಲಕ್ಷ್ಮಣ್ ಜೋಡಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಹೀರೋ ಚಿತ್ರದ ಸಣ್ಣ ಟೀಸರ್ ತುಣುಕು ಬಿಟ್ಟು ಕುತೂಹಲ ಮೂಡಿಸಿದ್ರು. ಈಗ ಹೀರೋ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಇವರೊಂದಿಗೆ ಪ್ರಮೋದ್ ಶೆಟ್ಟಿ, ಮಂಜುನಾಥ ಗೌಡ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದ್ದು, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣವಿದೆ. ರಿಷಬ್ ಶೆಟ್ಟಿ ಬ್ಯಾನರ್ ನಿರ್ಮಾಣ ಮಾಡಿರೋ ಹೀರೋ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಸಿನಿಮಾ ಯಾವಾಗ ರಿಲೀಸ್ ಅನ್ನೋದು ಪ್ಲಾನ್ ಮಾಡಿಲ್ಲ ಅಂತ ರಿಷಬ್ ಶೆಟ್ಟಿ ಹೇಳಿದ್ದಾರೆ.