ETV Bharat / sitara

ಡಾ. ವಿಷ್ಣುವರ್ಧನ್​​ 70ನೇ ಬರ್ತ್​ಡೇ ವಿಶೇಷ..ಅಭಿನಯ ಭಾರ್ಗವನ ಪೋಸ್ಟಲ್ ಕವರ್ ರಿಲೀಸ್​​​​​​

ಇಂದು ಡಾ. ವಿಷ್ಣುವರ್ಧನ್ 70ನೇ ಹುಟ್ಟುಹಬ್ಬದ ವಿಶೇಷವಾಗಿ ಅವರ ಭಾವಚಿತ್ರವಿರುವ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗುತ್ತಿದೆ. ಸಾಹಸಸಿಂಹನ ಹುಟ್ಟುಹಬ್ಬಕ್ಕೆ ಸುದೀಪ್ ಸೇರಿದಂತೆ ಸ್ಯಾಂಡಲ್​ವುಡ್ ಗಣ್ಯರು ಶುಭ ಕೋರಿದ್ದಾರೆ.

Dr Vishnuvardhan 70th Birthday
ವಿಷ್ಣುವರ್ಧನ್
author img

By

Published : Sep 18, 2020, 10:11 AM IST

ಅಭಿನಯ ಭಾರ್ಗವ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಹುಟ್ಟಿದ ದಿನ ಇಂದು. ರಾಜ್ಯಾದ್ಯಂತ ಅಭಿಮಾನಿಗಳು ಡಾ. ವಿಷ್ಣುವರ್ಧನ್ 70ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇನ್ನು 11 ವರ್ಷಗಳ ಬಳಿಕ ವಿಷ್ಣು ಸ್ಮಾರಕ ನಿರ್ಮಾಣದ ಕಾರ್ಯ ಕೂಡಾ ಮೈಸೂರಿನಲ್ಲಿ ಆರಂಭವಾಗಿದೆ.

Dr Vishnuvardhan 70th Birthday
ಸಂಜೆಯ ಕಾರ್ಯಕ್ರಮದ ಆಹ್ವಾನ ಪತ್ರಿಕೆ

ಡಾ. ವಿಷ್ಣುವರ್ಧನ್ ಅವರ 70ನೇ ಜನ್ಮದಿನದ ಅಂಗವಾಗಿ ಪೋಸ್ಟಲ್ ಕವರ್ ಬಿಡುಗಡೆ ಮಾಡಲಾಗುತ್ತಿದೆ. ಇದು ರಾಷ್ಟ್ರಮಟ್ಟದಲ್ಲಿ ಡಾ. ವಿಷ್ಣುವರ್ಧನ್ ಅವರಿಗೆ ಸಲ್ಲುತ್ತಿರುವ ಗೌರವವಾಗಿದೆ. ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ಪ್ರಯತ್ನದಿಂದ ಮಧ್ಯಾಹ್ನ 3 ಕ್ಕೆ ವಿಧಾನ ಸೌಧದ ಎದುರಿನ ಕೇಂದ್ರ ಅಂಚೆ ಇಲಾಖೆಯಲ್ಲಿ ಈ ಲಕೋಟೆ ಬಿಡುಗಡೆ ಆಗಲಿದೆ. ಈ ಸಮಾರಂಭಕ್ಕೆ ಜೋಗಿ ಪ್ರೇಮ್, ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್, ಡಾ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಭಾಗವಹಿಸಲಿದ್ದಾರೆ.

Dr Vishnuvardhan 70th Birthday
ಡಾ. ವಿಷ್ಣುವರ್ಧನ್ ಕಾಮನ್ ಡಿಪಿ

ಇನ್ನು ರಾಜ್ಯಾದ್ಯಂತ ಈ ದಿನ ಡಾ. ವಿಷ್ಣುವರ್ಧನ್ 70ನೇ ಜನ್ಮದಿನವನ್ನು ವಿವಿಧ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಆಚರಿಸಲಾಗುತ್ತಿದೆ. ಕಿಚ್ಚ ಸುದೀಪ್ ಡಾ. ವಿಷ್ಣುವರ್ಧನ್ ಅವರ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದರು. ಸ್ಯಾಂಡಲ್​ವುಡ್ ಗಣ್ಯರು ಯಜಮಾನನ ಹುಟ್ಟುಹಬ್ಬಕ್ಕೆ ಸೋಷಿಯಲ್ ಮೀಡಿಯಾ ಮುಖಾಂತರ ಶುಭ ಕೋರಿದ್ದಾರೆ. ಸುದೀಪ್, ನಿರ್ದೇಶಕ ಸಂತೋಷ್ ಆನಂದ್ ರಾಮ್​, ಪವನ್ ಒಡೆಯರ್ ಹಾಗೂ ಪತ್ನಿ ಅಪೇಕ್ಷಾ ಪುರೋಹಿತ್, ನಿರ್ದೇಶಕ ರವಿ ಶ್ರೀವತ್ಸ, ಪ್ರಣಿತಾ ಸುಭಾಷ್​, ಡಾಲಿ ಧನಂಜಯ್ ಹಾಗೂ ಇನ್ನಿತರರು ಡಾ. ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

  • ಅವರನ್ನು ಭೇಟಿ ಮಾಡಲು ಸಮಯದ ಆಶೀರ್ವಾದವಿತ್ತು. ಅವರೊಂದಿಗೆ ಕೆಲಸ ಮಾಡಲು ಸಿನಿಮಾದ ಆಶೀರ್ವಾದವಿತ್ತು. ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಅವರು ನನ್ನನ್ನು ನನ್ನ ಹೆಸರಿಂದ ಗುರುತಿಸುತ್ತಿದ್ದರು. ನನ್ನ IDOನ CDP ಬಿಡುಗಡೆ ನನಗೆ ಸಿಕ್ಕ ಭಾಗ್ಯ. ಎಂದಿಗೂ ಅವರ ಅಭಿಮಾನಿ. Happy 18th to all his Fans&Followers.#VishnuSirLivesForever pic.twitter.com/U4rxwGzdai

    — Kichcha Sudeepa (@KicchaSudeep) September 17, 2020 " class="align-text-top noRightClick twitterSection" data=" ">

18 ಸೆಪ್ಟೆಂಬರ್​​​​ 1950 ರಂದು ಮೈಸೂರಿನಲ್ಲಿ ಜನಿಸಿದ ಸಂಪತ್​ಕುಮಾರ್​​ 'ವಂಶವೃಕ್ಷ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು. ಆದರೆ ಮೊದಲು ಬಿಡುಗಡೆಯಾಗಿದ್ದು 'ನಾಗರಹಾವು'. ಈ ಚಿತ್ರದ ಮೂಲಕ ವಿಷ್ಣುವರ್ಧನನಾಗಿ ಬದಲಾದ ಅಭಿನಯ ಭಾರ್ಗವ, ಇಂದು ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ. ಸಿನಿಮಾಗಳಿಂದ ಹೆಚ್ಚಾಗಿ ತಮ್ಮ ವ್ಯಕ್ತಿತ್ವದಿಂದಲೇ ಎಲ್ಲರನ್ನು ಸೆಳೆಯುತ್ತಿದ್ದ ಡಾ. ವಿಷ್ಣುವರ್ಧನ್ 30 ಡಿಸೆಂಬರ್​ 2009 ರಲ್ಲಿ ಮೈಸೂರಿನಲ್ಲೇ ನಿಧನರಾದರು.

  • ಹುಟ್ಟುಹಬ್ಬದ ಶುಭಾಶಯಗಳು ದಾದಾ. ಕನ್ನಡ ಕುಲಕೋಟಿ ಮನಸ್ಸುಗಳಲ್ಲಿ ನೀವೆಂದಿಗೂ ಜೀವಂತ. 🙏 pic.twitter.com/bbH1olKUg6

    — Pavan Wadeyar (@PavanWadeyar) September 18, 2020 " class="align-text-top noRightClick twitterSection" data=" ">

ಡಾ. ವಿಷ್ಣುವರ್ಧನ್ ಇಂದು ನಮ್ಮೊಂದಿಗೆ ಇಲ್ಲವಾದರೂ ಅವರು ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಈಟಿವಿ ಭಾರತದ ವತಿಯಿಂದ ಡಾ. ವಿಷ್ಣುವರ್ಧನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.