ETV Bharat / sitara

ಕಿಲಾಡಿಗಳು ಶೀರ್ಷಿಕೆಯಲ್ಲಿ ಮತ್ತೊಂದು ಸಿನಿಮಾ.. ಅಮೆರಿಕಾದಲ್ಲಿ ಪೋಸ್ಟ್ ಪ್ರೊಡಕ್ಷನ್..

ಕನ್ನಡ ಸಿನಿಮಾ ನಟ, ನಿರ್ಮಾಪಕ ಮಹೇಂದ್ರ ಮುನೋತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪೊಲೀಸ್ ವೃತ್ತಿಯಲ್ಲಿರುವವರ ವೈಯಕ್ತಿಕ ಜೀವನ, ಹಿರಿಯ ಅಧಿಕಾರಿಗಳ ಜೊತೆ ಸಂಪರ್ಕ ಹೇಗೆ ಇರುತ್ತದೆ ಎಂಬ ಕುರಿತು ಅಧ್ಯಯನ ನಡೆಸಿ ಸಿನಿಮಾದಲ್ಲಿ ಅಳವಡಿಸಲಾಗಿದೆ.

author img

By

Published : Apr 11, 2020, 1:01 PM IST

khiladigalu
khiladigalu

ಕನ್ನಡದಲ್ಲಿ ಈ ಹಿಂದೆ 1994ರಲ್ಲಿ ಡಾ ವಿಷ್ಣುವರ್ಧನ ಹಾಗೂ ದ್ವಾರಕೀಶ್ ಒಟ್ಟಿಗೆ ನಟಿಸಿದ ಸಿನಿಮಾ ‘ಕಿಲಾಡಿಗಳು’. ಆ ಚಿತ್ರವನ್ನ ದ್ವಾರಕೀಶ್ ಅವರೇ ನಿರ್ದೇಶನ ಮಾಡಿದ್ದರು. ಸ್ವರ್ಣ ಹಾಗೂ ಶ್ರೀರಕ್ಷ ನಾಯಕಿಯರಾಗಿ ಅಭಿನಯ ಮಾಡಿದ್ದರು.

ಈಗ 2020ರಲ್ಲಿ ಮತ್ತೊಮ್ಮೆ ಅದೇ ಶೀರ್ಷಿಕೆಯುಳ್ಳ ಸಿನಿಮಾ ‘ಕಿಲಾಡಿಗಳು’ ತೆರೆಗೆ ಬರಲು ಸಿದ್ಧವಾಗ್ತಿದೆ. ಈ ಚಿತ್ರದ ಹೆಗ್ಗಳಿಕೆ ಏನಪ್ಪಾ ಅಂದರೆ ಅಮೆರಿಕ ದೇಶದಲ್ಲಿ ಸಿನಿಮಾಕ್ಕೆ ಡಿ ಟಿ ಎಸ್ ಮತ್ತು 5.1 ಸೌಂಡ್ ಮಿಕ್ಸಿಂಗ್ ಕೆಲಸ ಸಂಪೂರ್ಣವಾಗಿದೆ. ವಿದೇಶಿ ತಂತ್ರಜ್ಞ ವಾಲ್ದಾರ್ ತಾಂತ್ರಿಕ ಮೆರಗು ನೀಡಲು ಮೂರು ತಿಂಗಳು ಕಾಲವಾಕಾಶ ತೆಗೆದುಕೊಂಡಿದ್ದಾರೆ.

post production work of kiladigalu movie in america
ಕಿಲಾಡಿಗಳು ಶೀರ್ಷಿಕೆಯಲ್ಲಿ ಮತ್ತೊಂದು ಸಿನಿಮಾ..

ಕನ್ನಡ ಸಿನಿಮಾ ನಟ, ನಿರ್ಮಾಪಕ ಮಹೇಂದ್ರ ಮುನೋತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪೊಲೀಸ್ ವೃತ್ತಿಯಲ್ಲಿರುವವರ ವೈಯಕ್ತಿಕ ಜೀವನ, ಹಿರಿಯ ಅಧಿಕಾರಿಗಳ ಜೊತೆ ಸಂಪರ್ಕ ಹೇಗೆ ಇರುತ್ತದೆ ಎಂಬ ಕುರಿತು ಅಧ್ಯಯನ ನಡೆಸಿ ಸಿನಿಮಾದಲ್ಲಿ ಅಳವಡಿಸಲಾಗಿದೆ.

ಈ ಚಿತ್ರದಲ್ಲಿ ಮಕ್ಕಳ ಅಪಹರಣ ವಿಚಾರವನ್ನು ಇಟ್ಟುಕೊಂಡು, ಅದಕ್ಕೆ ಪೊಲೀಸ್ ಸಿಬ್ಬಂದಿ ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾರೆ ಎಂದು ತೋರಿಸಲಾಗಿದೆ. ಇದರ ಜೊತೆಗೆ ಕೆಲವು ಸಾಮಾಜಿಕ ಬದ್ಧತೆ ಸಹ ಚಿತ್ರದಲ್ಲಿ ಹಾದು ಹೋಗುತ್ತದೆ. ಹರಿಹರನ್ ಚಿತ್ರಕಥೆ, ಗೀತ ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. 140 ಪಾತ್ರಗಳಲ್ಲಿ 50 ಮಕ್ಕಳು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಡಿಐಜಿ ಪಾತ್ರದಲ್ಲಿ ಗುರುರಾಜ ಹೊಸಕೋಟೆ ಅಭಿನಯಿಸಿದ್ದಾರೆ. ಇದೇ ಚಿತ್ರದಲ್ಲಿ ಅಭಿನಯ ಭಾರ್ಗವ ಡಾ ವಿಷ್ಣುವರ್ಧನ ಸಹ ಏಳು ಸೆಕಂಡ್ ಗ್ರಾಫಿಕ್ ಮೂಲಕ ಬಂದು ಹೋಗುತ್ತಾರೆ.

ಬೆಂಗಳೂರು ಸುತ್ತ ಮುತ್ತ 81 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಡಾ. ವಿ ನಾಗೇಂದ್ರ ಪ್ರಸಾದ್, ಹೃದಯ ಶಿವ ಗೀತೆ ರಚನೆ ಮಾಡಿದ್ದಾರೆ. ಎ ಟಿ ರವೀಶ್ ಸಂಗೀತ, ನಿರಂಜನ್, ಬೋಪಣ್ಣ, ಜಾನ್ ಹಾಗೂ ಸೂರ್ಯೋದಯ ಛಾಯಾಗ್ರಹಣ ಮಾಡಿದ್ದಾರೆ. ಕೋಟೆರಾಜ್, ಅಪ್ಪು ವೆಂಕಟೇಶ್ ಹಾಗೂ ಅಲೆಕ್ಸ್ ಸಾಹಸ ನಿರ್ದೇಶ ಮಾಡಿದ್ದಾರೆ. ಇದು ಅನಂತ್ ಸಿನಿಮಾಸ್ ಅಡಿಯಲ್ಲಿ ಚಿತ್ರ ಸಿದ್ದಗೊಂಡಿದ್ದು, ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.