ETV Bharat / sitara

ಸೈರಾಕ್ಕೆ ಕಂಟಕ :ನಿರ್ಮಾಪಕರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ - ಹೈದ್ರಾಬಾದ್​ ಹೈಕೋರ್ಟ್​​ಗೆ ಪಿಎಲ್​​​ಐ

ಉಯ್ಯಾಲವಾಡ ವಂಶಸ್ಥರು ಸೈರಾ ನಿರ್ಮಾಪಕರ ವಿರುದ್ಧ ಹೈದರಾಬಾದ್​ ಹೈಕೋರ್ಟ್​​ಗೆ ಪಿಎಲ್​​​ಐ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಅಮಿತಾಬ್​​ ಬಚ್ಚನ್​ ಹೆಸರು ಸೇರಿಸಿದ್ದು, ಇದಕ್ಕೆ ಹೈಕೋರ್ಟ್​​ ಆಕ್ಷೇಪ ಮಾಡಿದೆ. ಇರುವ ದಾಖಲೆಗಳ ಪ್ರಕಾರ ಅಮಿತಾಬ್​​ ಬಚ್ಚನ್​ಗೂ ಈ ಕೇಸ್​ಗೂ ಯಾವುದೇ ಸಂಬಂಧವಿಲ್ಲ ಎಂದು ಕೋರ್ಟ್​​ ಹೇಳಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.

ಸೈರಾಕ್ಕೆ ಕಂಟಕ : ನಿರ್ಮಾಪಕರ ವಿರುದ್ದ ಪಿಎಲ್​​ಐ
author img

By

Published : Sep 25, 2019, 8:19 PM IST

ಟಾಲಿವುಡ್​ನಲ್ಲಿ ಸಿನಿಮಾ ಟೈಟಲ್​​ ಲಾಂಚ್​ನಿಂದಲೂ ಸುದ್ದಿಯಲ್ಲಿರುವ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ, ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೈಲರ್​ ರಿಲೀಸ್​ ಆಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಈ ಹಿಂದೆ ಸಿನಿಮಾ ನಿರ್ಮಾಪಕರ ಮೇಲೆ ಉಯ್ಯಾಲವಾಡ ನರಸಿಂಹರೆಡ್ಡಿ ವಂಶಸ್ಥರು ಸೈರಾ ನಿರ್ಮಾಪಕರು ಒಪ್ಪಂದದಂತೆ ನಮಗೆ ಹಣ ನೀಡಿಲ್ಲ ಎಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ಇದೀಗ ಉಯ್ಯಾಲವಾಡ ವಂಶಸ್ಥರು ಹೈದರಾಬಾದ್​ ಹೈಕೋರ್ಟ್​​ಗೆ ಪಿಎಲ್​​​ಐ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಅಮಿತಾಬ್​​ ಬಚ್ಚನ್​ ಹೆಸರು ಸೇರಿಸಿದ್ದು, ಇದಕ್ಕೆ ಹೈಕೋರ್ಟ್​​ ಆಕ್ಷೇಪ ವ್ಯಕ್ತಪಡಿಸಿದೆ. ಇರುವ ದಾಖಲೆಗಳ ಪ್ರಕಾರ ಅಮಿತಾಬ್​​ ಬಚ್ಚನ್​ಗೂ ಈ ಕೇಸ್​ಗೂ ಯಾವುದೇ ಸಂಬಂಧವಿಲ್ಲ ಎಂದು ಕೋರ್ಟ್​​ ಹೇಳಿದೆ. ಅಲ್ಲದೇ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.

ಪಿಎಲ್​​​ಐನಲ್ಲಿ ಏನಿತ್ತು :

ಉಯ್ಯಾಲವಾಡ ನರಸಿಂಹರೆಡ್ಡಿ ವಂಶಸ್ಥರು ಸೈರಾ ಚಿತ್ರದ ನಿರ್ಮಾಪಕರಾದ ರಾಮ್ ಚರಣ್​ ವಿರುದ್ಧ ಹೈದರಾಬಾದ್​ ಹೈಕೋರ್ಟ್​​ನಲ್ಲಿ ಪಿಎಲ್​ಐ ಸಲ್ಲಿಸಲಾಗಿದೆ. ಇದರಲ್ಲಿ ಸಿನಿಮಾಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಸೆನ್ಸಾರ್​ ಪತ್ರವನ್ನು ನೀಡಬಾರದು ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ ಸಿನಿಮಾ ಬಿಡುಗಡೆಗೂ ಮುನ್ನ ಸಿನಿಮಾದಲ್ಲಿ ಏನಿದೆ ಎಂಬುದನ್ನು ಪ್ರೀ ವ್ಯೂ ತೋರಿಸಬೇಕೆಂದು ಉಯ್ಯಾಲವಾಡ ನರಸಿಂಹರೆಡ್ಡಿ ವಂಶಸ್ಥರು ಅರ್ಜಿಯಲ್ಲಿ ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.