ETV Bharat / sitara

ಇಂದು 'ಆಕ್ಟ್ 1978' ಬಿಡುಗಡೆ...ಚಿತ್ರಮಂದಿರದತ್ತ ಮುಖ ಮಾಡದ ಪ್ರೇಕ್ಷಕರು

author img

By

Published : Nov 20, 2020, 11:52 AM IST

ಮಂಸೋರೆ ನಿರ್ದೇಶನದ 'ಆಕ್ಟ್​​ 1978' ಸಿನಿಮಾ ಇಂದು ಥಿಯೇಟರ್​​ಗಳಲ್ಲಿ ಬಿಡುಗಡೆಯಾಗಿದೆ. ಆದರೆ ಸಿನಿಮಾ ನೋಡಲು ಕೆಲವೇ ಮಂದಿ ಮಾತ್ರ ಚಿತ್ರಮಂದಿರಕ್ಕೆ ಬಂದಿದ್ದು ಚಿತ್ರತಂಡಕ್ಕೆ ನಿರಾಸೆಯುಂಟಾಗಿದೆ.

Act 1978 movie
'ಆಕ್ಟ್ 1978'

ಲಾಕ್​​ಡೌನ್ ಬಳಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೊದಲ ಸಿನಿಮಾ 'ಆಕ್ಟ್​ 1987'. ಈ ಸಿನಿಮಾವನ್ನು ಮಂಸೋರೆ ನಿರ್ದೇಶಿಸಿದ್ದು ಚಿತ್ರದಲ್ಲಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಮೊದಲ ದಿನವೇ ಚಿತ್ರತಂಡಕ್ಕೆ ನಿರಾಶೆಯುಂಟಾಗಿದೆ. ಜನರು ಕೊರೊನಾಗೆ ಹೆದರಿ ಚಿತ್ರಮಂದಿರದ ಕಡೆ ಬಂದಿಲ್ಲ.

'ಆಕ್ಟ್ 1978' ಚಿತ್ರಕ್ಕೆ ನೀರಸ ಪ್ರತಿಕ್ರಿಯೆ

ಮಾಗಡಿ ರಸ್ತೆ ವೀರೇಶ್ ಚಿತ್ರಮಂದಿರದಲ್ಲಿ ಇಂದು ಸಿನಿಮಾ ಬಿಡುಗಡೆಯಾಗಿದೆ. ಆದರೆ ಬೆಳಗಿನ ಶೋ ನೋಡಲು ಚಿತ್ರಮಂದಿರದ ಬಳಿ ಬೆರಳೆಣಿಕೆಯಷ್ಟು ಜನರು ಮಾತ್ರ ಇದ್ದರು. ಮಧ್ಯಾಹ್ನದ ಶೋಗಾದರೂ ಜನರು ಬರಬಹುದಾ ಎಂಬ ನಿರೀಕ್ಷೆ ಇದೆ. ನವೆಂಬರ್ 27 ರಂದು 'ಗಡಿಯಾರ' ಎಂಬ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ 'ಆಕ್ಟ್ 1978' ಸಿನಿಮಾಗೆ ದೊರೆಯುತ್ತಿರುವ ನೀರಸ ಪ್ರತಿಕ್ರಿಯೆ ನೋಡಿದರೆ ಕೊರೊನಾ ಸಂಪೂರ್ಣ ನಾಶವಾಗುವವರೆಗೂ ಯಾವ ಸಿನಿಮಾಗಳು ಕೂಡಾ ಬಿಡುಗಡೆಯಾಗುವುದಿಲ್ಲ ಎಂದು ಕಾಣಿಸುತ್ತಿದೆ. 'ಆಕ್ಟ್ 1978' ಚಿತ್ರದಲ್ಲಿ ಯಜ್ಞಾ ಶೆಟ್ಟಿ, ಸಂಚಾರಿ ವಿಜಯ್, ಬಿ. ಸುರೇಶ್ ಹಾಗೂ ಇನ್ನಿತರರು ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.