ಪ್ರಯೋಗಾತ್ಮಕ ಚಿತ್ರಗಳ ನಿರ್ಮಾಣ ಮಾಡಿ ಗಮನಸೆಳೆದಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಒಡೆತನದ ಪಿ ಆರ್ ಕೆ ಪ್ರೊಡಕ್ಷನ್ಸ್ನಲ್ಲಿ ಈಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ತಯಾರಿ ಶುರುವಾಗಿದೆ.
![](https://etvbharatimages.akamaized.net/etvbharat/prod-images/ka-bng-1-pprk-production-new-film-ka10012_07042020030457_0704f_1586208897_607.jpg)
![](https://etvbharatimages.akamaized.net/etvbharat/prod-images/ka-bng-1-pprk-production-new-film-ka10012_07042020030457_0704f_1586208897_720.jpg)
ಅಶ್ವಿನಿ ಪುನೀತ್ ರಾಜಕುಮಾರ್, ಲಿಖಿತ್ ಶೆಟ್ಟಿ ಹಾಗೂ ದೇಶ್ ರಾಹ್ ರೈ ನಿರ್ಮಾಣದಲ್ಲಿ ಈ ಹಿಂದೆ ಸಂಕಷ್ಟಕರ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದ ಅರ್ಜುನ್ ಕುಮಾರ್ ಎಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
![](https://etvbharatimages.akamaized.net/etvbharat/prod-images/ka-bng-1-pprk-production-new-film-ka10012_07042020030457_0704f_1586208897_967.jpg)
ಸಂಕಷ್ಟಕರ ಗಣಪತಿ ಚಿತ್ರದ ನಾಯಕ ಲಿಖಿತ್ ಶೆಟ್ಟಿ ಈ ಚಿತ್ರದಲ್ಲಿ ಲೀಡ್ ರೋಲ್ ಪ್ಲೇ ಮಾಡುತ್ತಿದ್ದು, ಫೀಮೇಲ್ ಲೀಡ್ ರೋಲ್ನಲ್ಲಿ ಅಮೃತ ಅಯ್ಯಂಗಾರ್ ಕಾಣಿಸಲಿದ್ದಾರೆ. ಚಿತ್ರತಂಡ ಶೀಘ್ರದಲ್ಲೇ ಟೈಟಲ್ ರಿವೀಲ್ ಮಾಡಲಿದೆ.
![](https://etvbharatimages.akamaized.net/etvbharat/prod-images/ka-bng-1-pprk-production-new-film-ka10012_07042020030457_0704f_1586208897_260.jpg)
ಸದ್ಯ ಚಿತ್ರತಂಡ ಪ್ರೀ ಪ್ರೋಡಕ್ಷನ್ ವರ್ಕ್ನಲ್ಲಿ ಬ್ಯುಸಿ ಇದ್ದು, ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.
![](https://etvbharatimages.akamaized.net/etvbharat/prod-images/ka-bng-1-pprk-production-new-film-ka10012_07042020030457_0704f_1586208897_159.jpg)
ಕಾಮಿಡಿ ಡಾನ್ ರಂಗಾಯಣ ರಘು, ಅಚ್ಯುತ ಕುಮಾರ್, ತಿಲಕ್, ಅಶ್ವಿನಿ ಗೌಡ, ನಾಗಭೂಷಣ್ ಮುಂತಾದವರನ್ನೊಳಗೊಂಡ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
![](https://etvbharatimages.akamaized.net/etvbharat/prod-images/ka-bng-1-pprk-production-new-film-ka10012_07042020030457_0704f_1586208897_239.jpg)
ಗುರುಕಿರಣ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಟಗರು ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.