ETV Bharat / sitara

ಬರ್ತ್​ಡೇ ಖುಷಿಯಲ್ಲಿ ಹೊಸ ಚಿತ್ರಗಳನ್ನು ಘೋಷಿಸಿದ ಸತೀಶ್ ನೀನಾಸಂ - Satish celebrate simple birthday

ಇಂದು ಸತೀಶ್ ನೀನಾಸಂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಈ ವಿಶೇಷ ದಿನದ ಅಂಗವಾಗಿ ತಮ್ಮ ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ. ಈ ಬಾರಿ ಸತೀಶ್ ಬೆಂಗಳೂರಿನ ನಿವಾಸದಲ್ಲಿ ಕುಟುಂಬದವರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

Neenasam Satish
ಸತೀಶ್ ನೀನಾಸಂ
author img

By

Published : Jun 20, 2020, 5:17 PM IST

ಅಭಿನಯ ಚತುರ, ಸತೀಶ್ ನೀನಾಸಂ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೊರೊನಾ ಲಾಕ್​​ಡೌನ್​​ ಕಾರಣದಿಂದ ಸತೀಶ್​​, ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

Neenasam Satish celebrating birthday
ಶರ್ಮಿಳಾ ಮಾಂಡ್ರೆ ನಿರ್ಮಾಣದ ಸಿನಿಮಾ

ಅಭಿಮಾನಿಗಳು ಸತೀಶ್ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇದ್ದರೂ ಸತೀಶ್ ಮಾತ್ರ ಅಭಿಮಾನಿಗಳಿಗೆ ನಿರಾಸೆ ಮಾಡದೆ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ಹುಟ್ಟುಹಬ್ಬದಂದು ತಮ್ಮ ಹೊಸ ಸಿನಿಮಾಗಳನ್ನು ಸತೀಶ್ ಘೋಷಿಸಿದ್ದಾರೆ. ಈ ಮೂಲಕ ತಮ್ಮ ಬರ್ತಡೇಯಂದು ತಾವೇ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ. ಶರ್ಮಿಳಾ ಮಾಂಡ್ರೆ ನಿರ್ಮಾಣದಲ್ಲಿ ಸತೀಶ್ ತಾವು ಅಭಿನಯಿಸುತ್ತಿರುವ 'ದಸರಾ' ಚಿತ್ರದ ಟೈಟಲ್ ಹಾಗೂ ಫಸ್ಟ್​​​ಲುಕ್ ರಿವೀಲ್ ಮಾಡಿದ್ದಾರೆ.

Neenasam Satish celebrating birthday
ಹೊಸ ಚಿತ್ರಗಳನ್ನು ಘೋಷಿಸಿದ ಸತೀಶ್ ನೀನಾಸಂ
  • " class="align-text-top noRightClick twitterSection" data="">

ಶ್ರೀ ಸಾಯಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಸಿನಿಮಾವನ್ನು ಸ್ವಾಮಿಗೌಡ ನಿರ್ಮಿಸುತ್ತಿದ್ದಾರೆ. ಆದರೆ ಈ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ.ಇದರ ಜೊತೆಗೆ ನಿರ್ಮಾಪಕಿ ವಿನುತಾ ಮಂಜುನಾಥ್ ನಿರ್ಮಾಣದಲ್ಲಿ ಸತೀಶ್ ನಟಿಸುತ್ತಿದ್ದು ಈ ಸಿನಿಮಾಗೆ ಕೂಡಾ ಟೈಟಲ್ ಫೈನಲ್ ಮಾಡಿಲ್ಲ. ಈಗಾಗಲೇ ಬಿಡುಗಡೆಗೆ ಸಿದ್ಧವಿರುವ 'ಗೋದ್ರಾ ' ಚಿತ್ರತಂಡ ಸತೀಶ್ ಹುಟ್ಟುಹಬ್ಬಕ್ಕಾಗಿ ಸ್ಪೆಷಲ್ ಟೀಸರ್ ಲಾಂಚ್ ಮಾಡಿ ಅಭಿನಯ ಚತುರನ ಹುಟ್ಟುಹಬ್ಬಕ್ಕೆ ಶುಭ ಕೋರಿದೆ.

Neenasam Satish celebrating birthday
'ಗೋದ್ರಾ '

ETV Bharat Logo

Copyright © 2025 Ushodaya Enterprises Pvt. Ltd., All Rights Reserved.