ನವದೆಹಲಿ: ತಮ್ಮ ಚಿತ್ರಗಳಲ್ಲಿ ಪ್ರಗತಿಪರ ಪಾತ್ರಗಳನ್ನು ಮಾಡುವ ಮೂಲಕ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆ ಗಳಿಸಿರುವ ನಟಿ ಭೂಮಿ ಪೆಡ್ನೇಕರ್, ಪ್ರೇಕ್ಷಕರಿಗೆ ಸಂದೇಶ ನೀಡುವ ಚಿತ್ರಗಳಿಗೆ ತಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
ನನ್ನ ಸಿನಿಮಾಗಳು ಜನರನ್ನು ರಂಜಿಸಬೇಕು ಹಾಗೂ ಅದೇ ಸಮಯದಲ್ಲಿ ಆಲೋಸುವಂತೆ ಮಾಡಬೇಕು. ಇದರಿಂದ ಪ್ರೇಕ್ಷಕರ ಆಲೋಚನೆ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಈ ಬಾಲಿವುಡ್ ನಟಿ.
ಪತಿ ಪತ್ನಿ ಔರ್ ವೋ ನಂತಹ ಸಿನಿಮಾ ಸಂಪೂರ್ಣ ಮನರಂಜನೆ ಒಳಗೊಂಡಿರುತ್ತದೆ. ನೀವು ಮದುವೆಯ ಹಾಗೂ ಸಾಮಾಜಿಕ ಒತ್ತಡಗಳಿಗೆ ಬಲಿಯಾಗಬೇಕಿಲ್ಲ ಎಂದು ಚಿತ್ರ ಸ್ಪಷ್ಟವಾಗಿ ಹೇಳುತ್ತದೆ. ಮದುವೆ ಮಹಿಳೆಯ ಆಯ್ಕೆ ಎಂದಿದ್ದಾರೆ.
ನಟ ಅಕ್ಷಯ್ ಕುಮಾರ್, ನಿರ್ಮಾಪಕ ಭೂಷಣ್ ಕುಮಾರ್ ಮತ್ತು ನಿರ್ದೇಶಕ ಜಿ.ಅಶೋಕ್ ನಿರ್ಮಿಸಿರುವ 'ದುರ್ಗಾವತಿ' ಚಿತ್ರದಲ್ಲಿ ಭೂಮಿ ಪೆಡ್ನೇಕರ್ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.