ETV Bharat / sitara

ಮಿಮಿಕ್ರಿ ದಯಾನಂದ್ ನಟಿಸಿ, ನಿರ್ದೇಶಿಸಿದ 'ಅನಿರೀಕ್ಷಿತ' ಚಿತ್ರಕ್ಕೆ ಪ್ರಶಸ್ತಿಯ ಗರಿ

ಜೀವನದ ಅನಿರೀಕ್ಷಿತ ತಿರುವುಗಳು ಬದುಕಿನ ಗತಿಯನ್ನೇ ಬದಲಿಸಿ ಯಾರೂ ಕಲಿಸದ ಪಾಠವನ್ನು ಕಲಿಸಿಬಿಡುತ್ತವೆ. ಇಂತಹ ತಾತ್ವಿಕವಾದ ಎಳೆಯೊಂದು ಕುತೂಹಲ ಹಿಡಿದಿಟ್ಟುಕೊಂಡು ಹೇಗೆ ಎಳೆಎಳೆಯಾಗಿ ರಹಸ್ಯ ಬಿಚ್ಚಿಕೊಳ್ಳುತ್ತ ಸಾಗುತ್ತದೆ ಎಂಬುದನ್ನು ನಿರೂಪಿಸುವುದೇ ಅನಿರೀಕ್ಷಿತ ಚಿತ್ರದ ಕಥಾಹಂದರ.

Mimicry Dayanand and team
ಮಿಮಿಕ್ರಿ ದಯಾನಂದ್ ಹಾಗೂ ತಂಡ
author img

By

Published : Oct 7, 2021, 4:10 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ‌, ಸಿನಿಮಾ ಪ್ರಿಯರನ್ನ ರಂಜಿಸುತ್ತಿರುವ ಹಾಸ್ಯ ನಟ ಮಿಮಿಕ್ರಿ ದಯಾನಂದ್ ಇದೀಗ ನಟನೆ ಜೊತೆಗೆ ನಿರ್ದೇಶಕರಾಗಿರೋದು ಗೊತ್ತಿರುವ ವಿಚಾರ. ಲಾಕ್​ಡೌನ್​ ಸಮಯವನ್ನ ವ್ಯರ್ಥ ಮಾಡದೇ ಅನಿರೀಕ್ಷಿತ ಅಂತಾ ಟೈಟಲ್ ಇಟ್ಟು, ಮೊದಲ ಬಾರಿಗೆ ಸಿನಿಮಾವೊಂದನ್ನ ನಿರ್ದೇಶನ ಮಾಡಿದ್ದಾರೆ.

Shooting
ಚಿತ್ರೀಕರಣ

ಸದ್ಯ ಟ್ರೈಲರ್ ಹಾಗೂ ಪೋಸ್ಟರ್​ನಿಂದ ಗಮನ ಸೆಳೆಯುತ್ತಿರೋ ಈ ಚಿತ್ರ ಬಿಡುಗಡೆ ಮುನ್ನವೇ ಈ ಚಿತ್ರದ ಕ್ಯಾಮರಾಮ್ಯಾನ್ ಜೀವನ್ ಗೌಡಗೆ ಕೇರಳದ 7th Art Independent International Film Festival ಹಾಗೂ ಅಮೆರಿಕದ ನ್ಯೂ ಜೆರ್ಸಿಯಲ್ಲಿ ನಡೆದ Star Hollywood Awards ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್​ನಲ್ಲಿ Best Cinematography ಎಂಬ ಪ್ರಶಸ್ತಿ ಲಭಿಸಿದೆ.

cameraman jeevan gowda
ಕ್ಯಾಮರಾಮ್ಯಾನ್ ಜೀವನ್ ಗೌಡ

ಜೀವನದ ಅನಿರೀಕ್ಷಿತ ತಿರುವುಗಳು ಬದುಕಿನ ಗತಿಯನ್ನೇ ಬದಲಿಸಿ ಯಾರೂ ಕಲಿಸದ ಪಾಠವನ್ನು ಕಲಿಸಿಬಿಡುತ್ತವೆ. ಇಂತಹ ತಾತ್ವಿಕವಾದ ಎಳೆಯೊಂದು ಕುತೂಹಲ ಹಿಡಿದಿಟ್ಟುಕೊಂಡು ಹೇಗೆ ಎಳೆಎಳೆಯಾಗಿ ರಹಸ್ಯ ಬಿಚ್ಚಿಕೊಳ್ಳುತ್ತ ಸಾಗುತ್ತದೆ ಎಂಬುದನ್ನು ನಿರೂಪಿಸುವುದೇ ಅನಿರೀಕ್ಷಿತ ಚಿತ್ರದ ಕಥಾಹಂದರ.

13 ಜನ ಪ್ರತಿಭಾವಂತರ ತಂಡದ ಪರಿಶ್ರಮದ ‌ಫಲವಾಗಿ ಈ ಚಿತ್ರ ಮೂಡಿಬಂದಿದೆ. ಕೇವಲ ಎರಡು ಪಾತ್ರಗಳನ್ನಿಟ್ಟುಕೊಂಡು ಒಂದೇ ಚಿತ್ರೀಕರಣ ಸ್ಥಳದಲ್ಲಿ ನಾಲ್ಕು ಲೊಕೇಶನ್​ಗಳಂತೆ ಬಳಸಿರುವುದು ಈ ಚಿತ್ರದ ವಿಶೇಷ. ಎಸ್.ಕೆ ಟಾಕೀಸ್ ಲಾಂಛನದಲ್ಲಿ ‌ಶಾಂತಕುಮಾರ್‌ ನಿರ್ಮಿಸಿರುವ ಈ‌ ಚಿತ್ರದ ಸಹ ನಿರ್ಮಾಪಕರು ಸಂತೋಷ್ ಕೊಡಂಕೇರಿ, ರಘು ಎಸ್ ಹಾಗೂ ಮಿಮಿಕ್ರಿ ದಯಾನಂದ್.‌

ಮಿಮಿಕ್ರಿ ದಯಾನಂದ್ ಅವರೇ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನು ನೆಳ್ಳುಳ್ಳಿ ರಾಜಶೇಖರನ್ ಬರೆದಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಕೇವಲ ಎರಡು ಪಾತ್ರಗಳಿದ್ದು,‌ ಮಿಮಿಕ್ರಿ ದಯಾನಂದ್ ಹಾಗೂ ಭಾಮ ಅಭಿನಯಿಸಿದ್ದಾರೆ.

ಸಹ ನಿರ್ಮಾಪಕ ಸಂತೋಷ್ ಕೊಡೆಂಕೇರಿ ಈ ಚಿತ್ರದ ತಾಂತ್ರಿಕ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯ ಕ್ಯಾಮರಾಮ್ಯಾನ್​ಗೆ ಪ್ರಶಸ್ತಿ ಬಂದಿರೋದು ಇಡೀ ಚಿತ್ರತಂಡಕ್ಕೆ ಸಂತೋಷ ಆಗಿದೆ.

ಓದಿ: ‘ನಿನ್ನ ಸನಿಹಕೆ’ ಕುರಿತಾದ ಆಸಕ್ತಿದಾಯಕ ವಿಚಾರ ಹಂಚಿಕೊಂಡ ರಘು ದೀಕ್ಷಿತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.