ETV Bharat / sitara

ಚಿರು - ಮೇಘನಾ ಮುದ್ದು ಮಗನ ಹೆಸರು ರಿವೀಲ್ ..! ಏನದು ಗೊತ್ತಾ? - Meghana Raj

ಚಿಂಟು, ಸಿಂಬಾ, ಸಿಂಗ್​ ಎಂದೆಲ್ಲಾ ಇಷ್ಟು ದಿನ ಕರೆಯಲಾಗುತ್ತಿದ್ದ ಜೂನಿಯರ್​ ಚಿರುಗೆ ನಟಿ ಮೇಘನಾ ರಾಜ್ ನಾಮಕರಣ ಮಾಡಿದ್ದು, ಕೊನೆಗೂ ಹೆಸರು ಬಹಿರಂಗವಾಗಿದೆ.

Rayan Raj Sarja
ಚಿರು-ಮೇಘನಾ ಮುದ್ದು ಮಗನ ಹೆಸರು ರಿವೀಲ್
author img

By

Published : Sep 3, 2021, 12:13 PM IST

ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಗೆ ಪುತ್ರ ಜನಿಸಿ ಸುಮಾರು 11 ತಿಂಗಳು ಕಳೆದಿದೆ. ಇದೀಗ ಮೇಘನಾ ರಾಜ್​ ತನ್ನ ಮುದ್ದು ಮಗನಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ. ಇಲ್ಲಿಯವರೆಗೆ ಸಾಕಷ್ಟು ಸಸ್ಪೆನ್ಸ್​ ಆಗಿದ್ದ ಜೂನಿಯರ್​ ಚಿರುವಿನ ನಿಜವಾದ ಹೆಸರು ಕೊನೆಗೂ‌ ರಿವೀಲ್ ಆಗಿದೆ.

ನಟಿ ಮೇಘನಾ ರಾಜ್​​ ಹಂಚಿಕೊಂಡಿರುವ ವಿಡಿಯೋ

ನಿನ್ನೆಯಷ್ಟೇ ಮೇಘನಾ ತಮ್ಮ ಮಗನ‌ ನಾಮಕರಣಕ್ಕೆ ಸಂಬಂಧಿಸಿದ ವಿಶೇಷ​ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಈವರೆಗೆ ಮಗನಿಗೆ ಕರೆಯಲಾಗುತ್ತಿದ್ದ ಕೆಲವು ಹೆಸರುಗಳನ್ನು ಉಲ್ಲೇಖಿಸಿ, ಅಧಿಕೃತ ಹೆಸರು ನಾಳೆ ತಿಳಿಸುವುದಾಗಿ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದರು.

'ನಮ್ಮ ರಾಜಕುಮಾರನಿಗೆ ಈಗ ಹೆಸರು ಇಡಲಾಗಿದೆ. ಅವನ ಕುರಿತು ಎಲ್ಲರಿಂದ ನನಗೆ ಎದುರಾಗುತ್ತಿದ್ದ ಮೊದಲ ಪ್ರಶ್ನೆಯೇ ನಿಮ್ಮ ಮಗನ‌ ಹೆಸರು ಏನು? ಎಂಬುದು. ಈಗ ರಾಜ ತನ್ನ ಮಗನಿಗೆ ಒಂದು ಹೆಸರು ಆಯ್ಕೆ ಮಾಡಿದ್ದಾನೆ. ಅದೇನು ಎಂಬುದನ್ನು ಸೆಪ್ಟೆಂಬರ್ 3ರಂದು ತಿಳಿಸುತ್ತೇನೆ' ಎಂದು ಮೇಘನಾ ರಾಜ್ ಪೋಸ್ಟ್​ ಮಾಡಿದ್ದರು. ಇದೀಗ ಜೂನಿಯರ್ ಚಿರುಗೆ 'ರಾಯನ್ ರಾಜ್ ಸರ್ಜಾ' ಎಂದು ಹೆಸರಿಟ್ಟಿರುವುದನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: 'ನೀನು ದೇವರ ಮನೆಗೆ ಹೋಗಿ ವರ್ಷವಾಯಿತು...'ಮೇಘನಾ ಭಾವನಾತ್ಮಕ ಮಾತು

ಇಷ್ಟು ದಿನ ಜೂನಿಯರ್ ಚಿರುವಿಗೆ ಹಲವು ಹೆಸರುಗಳಿಂದ ಕರೆಯಲಾಗುತ್ತಿತ್ತು. ಮೇಘನಾ ತಂದೆ ಸುಂದರ್​ ರಾಜ್​ ಅವರು 'ಚಿಂಟು' ಎಂದು ಕರೆಯುತ್ತಿದ್ದರು. ಮೇಘನಾ 'ಸಿಂಬಾ' ಎಂದೂ, ಅವರ ಸ್ನೇಹಿತರು ಹಾಗೂ ಸಂಬಂಧಿಕರು 'ಸಿಂಗ', 'ಲಿಟ್ಲ್ ಚಿರು' ಅಂತಾ ಹಲವಾರು ಹೆಸರುಗಳ ಮೂಲಕ ಮಗುವನ್ನು ಮುದ್ದಾಗಿ ಕರೆಯುತ್ತಿದ್ದರು.

ಈಗ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಮಗನಿಗೆ ರಾಯನ್ ರಾಜ್ ಸರ್ಜಾ ಅಂತಾ ನಾಮಕರಣ ಮಾಡಲಾಗಿದ್ದು, ಈ ಹೆಸರು ರಾಜಯೋಗದ ಹೆಸರಾಗಿದೆ. ಚಿರು-ಮೇಘನಾ ಅಭಿಮಾನಿಗಳು ಕೂಡ ರಾಯನ್ ರಾಜ್ ಸರ್ಜಾ ಹೆಸರು ಕೇಳಿ ಫಿದಾ ಆಗಿದ್ದಾರೆ.

ಕಳೆದ ವರ್ಷ ಜೂನ್​ 7ರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಆ ವೇಳೆ, ಮೇಘಾನಾ ರಾಜ್ ಐದು ತಿಂಗಳ ಗರ್ಭಿಣಿಯಾಗಿದ್ದರು. ಈಗ ಮುದ್ದು ಮಗನ ನಾಮಕರಣದ ಸಂಭ್ರಮದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.