ಲಾಕ್ಡೌನ್ ಸಮಯದಲ್ಲಿ ಅನೇಕ ಸೆಲಬ್ರಿಟಿಗಳು ಸರಳವಾಗಿ ಮದುವೆಯಾಗಿದ್ದಾರೆ. ಇದೀಗ ಮಗಧೀರ ಖ್ಯಾತಿಯ ಕಾಜಲ್ ಅಗರ್ವಾಲ್ ಮದುವೆ ದಿನಾಂಕ ನಿಶ್ಚಯವಾಗಿದೆ. ಸ್ವತ: ಕಾಜಲ್ ಅಗರ್ವಾಲ್ ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಮುಂಬೈ ಮೂಲದ ಗೌತಮ್ ಕಿಚ್ಲು ಎಂಬುವವರನ್ನು ಕಾಜಲ್ ಮದುವೆಯಾಗುತ್ತಿದ್ದಾರೆ. ಕಾಜಲ್ ಹಾಗೂ ಗೌತಮ್ ಇಬ್ಬರೂ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಇಬ್ಬರೂ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ವಿಚಾರವಾಗಿ ಕಾಜಲ್ ಅಗರ್ವಾಲ್ ಅಧಿಕೃತವಾಗಿ ಘೋಷಿಸಿರಲಿಲ್ಲ. ಇದೀಗ ಮದುವೆ ವಿಚಾರವನ್ನು ಅಧಿಕೃತವಾಗಿ ಘೋಷಿಸಿರುವ ನಟಿ ಅಕ್ಟೋಬರ್ 30 ರಂದು ಮುಂಬೈನಲ್ಲಿ ಗೌತಮ್ ಕೈ ಹಿಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕೊರೊನಾ ಸಮಯದಲ್ಲಿ ಮದುವೆಯಾಗುತ್ತಿರುವುದರಿಂದ ಕೆಲವೇ ಮಂದಿ ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಕಾಜಲ್ ಮದುವೆಯಾಗುತ್ತಿದ್ದಾರೆ.
"ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಾವಿಬ್ಬರೂ ಮದುವೆಯಾಗುತ್ತಿದ್ದೇವೆ. ಹೊಸ ಜೀವನವನ್ನು ಆರಂಭಿಸುತ್ತಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಇದೆ ಎಂದು ಭಾವಿಸುತ್ತೇನೆ. ನನ್ನ ಮೇಲೆ ನೀವು ತೋರಿಸಿದ ಪ್ರೀತಿ, ಅಭಿಮಾನಕ್ಕೆ ಧನ್ಯವಾದಗಳು. ಮದುವೆ ಆದ ನಂತರ ಕೂಡಾ ನನ್ನ ಜೀವಿತಾವಧಿಯವರೆಗೂ ನಟಿಸುತ್ತೇನೆ" ಎಂದು ಕಾಜಲ್ ಬರೆದುಕೊಂಡಿದ್ದಾರೆ.
ಕಾಜಲ್ ಅಗರ್ವಾಲ್ ಕರಿಯರ್ ವಿಚಾರಕ್ಕೆ ಬರುವುದಾದರೆ ಚಿರಂಜೀವಿ ಜೊತೆ 'ಆಚಾರ್ಯ' ಚಿತ್ರದಲ್ಲಿ, ಕಮಲಹಾಸನ್ ಜೊತೆ 'ಭಾರತೀಯುಡು 2', ಮಂಚು ವಿಷ್ಣು ಜೊತೆ 'ಮೋಸಗಾಳ್ಲು' ಹಾಗೂ ಹಿಂದಿಯ ಒಂದು ಚಿತ್ರದಲ್ಲಿ ಕಾಜಲ್ ಬ್ಯುಸಿ ಇದ್ದಾರೆ.