ಹೈದರಾಬಾದ್ : ಲಿಗರ್ ಸಿನಿಮಾ ರಿಲೀಸ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ನಟ ವಿಜಯ್ ದೇವರಕೊಂಡ ಗರಂ ಆಗಿದ್ದಾರೆ. ಯಾವುದೇ ಕಾರಣಕ್ಕೂ ‘ಲಿಗರ್’ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವುದಿಲ್ಲ ಎಂಬುದನ್ನು ಅವರು ಟ್ವಿಟರ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಲಿಗರ್ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತದೆ. ಇದಕ್ಕಾಗಿ ನಿರ್ಮಾಪಕರು ಸುಮಾರು 200 ಕೋಟಿ ರೂಪಾಯಿ ವ್ಯವಹಾರ ಖುದುರಿಸಿದೆ ಎಂಬ ಸುದ್ದಿ ಹರಿದಾಡಿದ್ದವು.
-
Too little.
— Vijay Deverakonda (@TheDeverakonda) June 21, 2021 " class="align-text-top noRightClick twitterSection" data="
I’ll do more in the theaters. pic.twitter.com/AOoRYwmFRw
">Too little.
— Vijay Deverakonda (@TheDeverakonda) June 21, 2021
I’ll do more in the theaters. pic.twitter.com/AOoRYwmFRwToo little.
— Vijay Deverakonda (@TheDeverakonda) June 21, 2021
I’ll do more in the theaters. pic.twitter.com/AOoRYwmFRw
ಓಟಿಟಿ ಎಂಬುದು ತುಂಬಾ ಚಿಕ್ಕ ವೇದಿಕೆ, ಥಿಯೇಟರ್ಗಳಲ್ಲೇ ಚಿತ್ರ ನೋಡಿದರೆ ಚೆನ್ನಾಗಿರುತ್ತದೆ ಎಂದು ದೇವರಕೊಂಡ ಉಲ್ಲೇಖಿಸಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ ಲಿಗರ್‌ನಲ್ಲಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ಮಕರಂದ ದೇಶಪಾಂಡೆ, ರೋನಿ ರಾಯ್, ಮೈಕ್ ಟೈಸನ್, ರಮ್ಯಾ ಕೃಷ್ಣ ಮುಖ್ಯ ತಾರಾಗಣದಲ್ಲಿ ಅಭಿನಯಿಸಿದ್ದಾರೆ.
- " class="align-text-top noRightClick twitterSection" data="
">
ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಲಿಗರ್ ಕನ್ನಡ, ತಮಿಳು, ಮಲಯಾಳಂಗೆ ಡಬ್ ಆಗಲಿದೆ. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ:ಸಂಕಷ್ಟದಲ್ಲಿರುವ ಕನ್ನಡ ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸಿದ ಹ್ಯಾಟ್ರಿಕ್ ಹೀರೋ
ಇತ್ತೀಚೆಗೆ ದೊಡ್ಡ ದೊಡ್ಡ ಸಿನಿಮಾಗಳೇ ಲಾಕ್‌ಡೌನ್ ಕಾರಣದಿಂದ ನೇರವಾಗಿ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿವೆ. ಆದರೆ, ಕೆಲ ನಾಯಕರು ಓಟಿಟಿಗೆ ಮನಸ್ಸು ಮಾಡುತ್ತಿಲ್ಲ.