ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೆಗಾ ಧಾರಾವಾಹಿ ಲಕ್ಷ್ಮಿಬಾರಮ್ಮ ಇನ್ನೊಂದು ವಾರದಲ್ಲಿ ಮುಕ್ತಾಯವಾಗಲಿದೆ. ಲಕ್ಷ್ಮಿಬಾರಮ್ಮ ಧಾರಾವಾಹಿಯಲ್ಲಿ ನಾಯಕಿ ಶ್ರುತಿ ಅಲಿಯಾಸ್ ಗೊಂಬೆಯಾಗಿ ಕಾಣಿಸಿಕೊಂಡಿರುವ ಚೆಂದುಳ್ಳಿ ಚೆಲುವೆಯ ಹೆಸರು ನೇಹಾ ಗೌಡ.
![lakshmi baramma end bext week](https://etvbharatimages.akamaized.net/etvbharat/prod-images/kn-bng-02-nehagowda-serial-photo-ka10018_19012020131850_1901f_1579420130_180.jpg)
ಗೊಂಬೆ ಪಾತ್ರ ನನಗಿಂದು ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿದೆ. ಜನ ನನ್ನನ್ನು ಗೊಂಬೆ ಎಂದು ಗುರುತಿಸುವಾಗ ತುಂಬಾನೇ ಸಂತಸವಾಗುತ್ತದೆ ಎನ್ನುವ ನೇಹಾ ಗೌಡ ಮೇಕಪ್ ಮ್ಯಾನ್ ಎನ್ ಕೆ ರಾಮಕೃಷ್ಣ ಅವರ ಮುದ್ದಿನ ಮಗಳು. ಮೇಕಪ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಿಟ್ಟಿಸಿರುವ ನೇಹಾ ಗೌಡಗೆ ಬಣ್ಣದ ನಂಟು ಹೊಸತಲ್ಲ. ಕುಟುಂಬ ಸ್ನೇಹಿತರು, ಅಪ್ಪನ ಬಳಗ ಎಲ್ಲರೂ ಈ ಕ್ಷೇತ್ರದಲ್ಲಿ ಇದ್ದ ಕಾರಣದಿಂದ ಬಣ್ಣದ ನಂಟು ಮೊದಲೇ ಪರಿಚಯವಿತ್ತು.
![lakshmi baramma end bext week](https://etvbharatimages.akamaized.net/etvbharat/prod-images/kn-bng-02-nehagowda-serial-photo-ka10018_19012020131850_1901f_1579420130_825.jpg)
![lakshmi baramma end bext week](https://etvbharatimages.akamaized.net/etvbharat/prod-images/kn-bng-02-nehagowda-serial-photo-ka10018_19012020131850_1901f_1579420130_805.jpg)
![lakshmi baramma end bext week](https://etvbharatimages.akamaized.net/etvbharat/prod-images/kn-bng-02-nehagowda-serial-photo-ka10018_19012020131850_1901f_1579420130_651.jpg)
ಯಾವತ್ತಿಗೂ ಬಣ್ಣದ ಲೋಕಕ್ಕೆ ಬರುವ ಕನಸು ಕಂಡಿರದ ನೇಹಾ ಗೌಡ ಆಕಸ್ಮಿಕವಾಗಿ ಬಂದವರು. ಸಿಕ್ಕ ಅವಕಾಶವನ್ನು ಬೇಡ ಎನ್ನದೇ ಕಿರುತೆರೆಗೆ ಕಾಲಿಟ್ಟ ನೇಹಾ ಗೌಡ ನಟನೆಗೆ ಮುನ್ನುಡಿ ಬರೆದದ್ದು ರಂಗಭೂಮಿಯಿಂದ. ಕಾಲೇಜು ದಿನಗಳಿಂದಲೇ ಬೆನಕ ರಂಗ ತಂಡದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನೇಹಾ ಗೌಡ ನಟಿಸಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಾದರೂ ಜನಪ್ರಿಯತೆ ನೀಡಿದ್ದು ಮಾತ್ರ ಗೊಂಬೆ ಪಾತ್ರ.
![lakshmi baramma end bext week](https://etvbharatimages.akamaized.net/etvbharat/prod-images/kn-bng-02-nehagowda-serial-photo-ka10018_19012020131850_1901f_1579420130_679.jpg)
![lakshmi baramma end bext week](https://etvbharatimages.akamaized.net/etvbharat/prod-images/kn-bng-02-nehagowda-serial-photo-ka10018_19012020131850_1901f_1579420130_1082.jpg)
ಗೊಂಬೆ ಮತ್ತು ಚಂದು ನಡುವಿನ ಸೊಗಸಾದ ಪ್ರೀತಿ, ಚಿನ್ನು ಮತ್ತು ಗೊಂಬೆಯ ನಡುವಿನ ಅನ್ಯೂನ್ಯ ಬಾಂಧವ್ಯಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ಕನ್ನಡ ಭಾಷೆಯ ಜೊತೆಗೆ ತಮಿಳು, ತೆಲುಗು ಧಾರಾವಾಹಿಗಳಲ್ಲೂ ನೇಹಾ ಅಭಿನಯಿಸಿದ್ದರೂ ಮನೆ ಮಾತಾಗಿದ್ದು ಮಾತ್ರ ಗೊಂಬೆಯಾಗಿ. ಅಷ್ಟರ ಮಟ್ಟಿಗೆ ಆ ಪಾತ್ರ ಕಿರುತೆರೆ ವೀಕ್ಷಕರನ್ನು ಆವರಿಸಿಬಿಟ್ಟಿದೆ.
![lakshmi baramma end bext week](https://etvbharatimages.akamaized.net/etvbharat/prod-images/kn-bng-02-nehagowda-serial-photo-ka10018_19012020131850_1901f_1579420130_89.png)
![lakshmi baramma end bext week](https://etvbharatimages.akamaized.net/etvbharat/prod-images/kn-bng-02-nehagowda-serial-photo-ka10018_19012020131850_1901f_1579420130_384.png)