ಕಿಚ್ಚ ಸುದೀಪ್ಗೆ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ ಫಾಲೋಯಿಂಗ್ ಇದೆ. ಇನ್ನು ಅವರನ್ನು ನೋಡಲು ಸಾಕಷ್ಟು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ತಮ್ಮ ಅಭಿಮಾನಿಗಳಿಗೆ ಕಿಚ್ಚ ಎಂದಿಗೂ ನಿರಾಶೆ ಮಾಡಿದವರಲ್ಲ.
ಸುದೀಪ್ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿರುತ್ತಾರೆ. ಇಷ್ಟಾದರೂ ಅಭಿಮಾನಿಗಳಿಗೆ ಅವರನ್ನು ಒಮ್ಮೆ ಎದುರಿಗೆ ಕಣ್ತುಂಬ ನೋಡಿ ಅವರೊಂದಿಗೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆಯಿಂದ ಪ್ರತಿದಿನ ಅವರ ಮನೆಗೆ ಬರುತ್ತಾರೆ. ಕಿಚ್ಚ ಕೂಡಾ ಅಭಿಮಾನಿಗಳ ಜೊತೆ ಆತ್ಮೀಯವಾಗಿ ಮಾತನಾಡಿಸಿ ಫೋಟೋಗೆ ನಿಂತು ಅವರನ್ನು ನಗುತ್ತಾ ಬೀಳ್ಕೊಡುತ್ತಾರೆ.
![undefined](https://s3.amazonaws.com/saranyu-test/etv-bharath-assests/images/ad.png)
ಸದ್ಯಕ್ಕೆ ಕಿಚ್ಚ ಮುಂಬೈನಲ್ಲಿ ಪೈಲ್ವಾನ್ ಚಿತ್ರದ ಶೂಟಿಂಗ್ನಲ್ಲಿದ್ದಾರೆ. ಸುದೀಪ್ ಅವರನ್ನು ನೋಡಲು ಬನಶಂಕರಿಯಿಂದ ಅಭಿಮಾನಿಯೊಬ್ಬ ಪುಟ್ಟೇನಹಳ್ಳಿಯ ಕಿಚ್ಚನ ನಿವಾಸಕ್ಕೆ ಬಂದಿದ್ದಾರೆ. ಆದರೆ ಸುದೀಪ್ ಮನೆಯಲ್ಲಿ ಇಲ್ಲ ಎಂದು ತಿಳಿದು ನಿರಾಶರಾಗಿ ದುಃಖದಿಂದ ಮನೆ ಮುಂದೆ ನಿಂತು ಅಳಲು ಆರಂಭಿಸಿದ್ದಾರೆ. ಸ್ಥಳದಲ್ಲೇ ಇದ್ದ ಸುದೀಪ್ ಆಪ್ತ ನಿರ್ಮಾಪಕ ಜಾಕ್ ಮಂಜು ಎಷ್ಟೇ ಸಮಾಧಾನಪಡಿಸಿದರೂ ಆತ ಅಳು ನಿಲ್ಲಿಸಿಲ್ಲ.
ಕೊನೆಗೆ ಮಂಜು ಕಿಚ್ಚನಿಗೆ ಫೋನ್ ಮಾಡಿದ್ದಾರೆ. ಅಭಿಮಾನಿಯೊಂದಿಗೆ ಫೋನ್ ಮೂಲಕ ಮಾತನಾಡಿದ ಕಿಚ್ಚ ಆತನನ್ನು ಸಮಾಧಾನಪಡಿಸಿ ಮುಂದಿನ ವಾರ ಮನೆಗೆ ಬಂದು ಭೇಟಿ ಆಗುವಂತೆ ಹೇಳಿದ್ದಾರೆ.