ಬಾಲಿವುಡ್ಗೆ ಕಪೂರ್ ಕುಟುಂಬದಿಂದ ಮತ್ತೋರ್ವ ಪ್ರತಿಭೆ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ. ನಿರ್ಮಾಪಕ ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಪುತ್ರಿ ಖುಷಿ ಕಪೂರ್ ಬಾಲಿವುಡ್ ಪ್ರವೇಶಿಸಲು ಮುಂದಾಗಿರುವ ಯುವ ಪ್ರತಿಭೆ. ಈ ಮೂಲಕ ಕಪೂರ್ ಫ್ಯಾಮಿಲಿಯಿಂದ ಬಾಲಿವುಡ್ಗೆ ಮತ್ತೊಬ್ಬ ಕಲಾವಿದೆ ಪಾದಾರ್ಪಣೆ ಮಾಡಿದಂತಾಗಿದೆ.
![ಬಿ-ಟೌನ್ನಲ್ಲಿ ಕಮಾಲ್ ಮಾಡಲು ಹೊರಟ ಶ್ರೀದೇವಿಯ 2ನೇ ಪುತ್ರಿ](https://etvbharatimages.akamaized.net/etvbharat/prod-images/125297220_3078923802208588_3032710075218583572_n_1901newsroom_1611051808_165.jpg)
ಇತ್ತೀಚೆಗೆ ನಡೆದ ಸಂದರ್ಶನವೊಂದರ ಮಾತನಾಡಿರು ಬೋನಿ ಕಪೂರ್, ನಮ್ಮ ಫ್ಯಾಮಿಲಿಯಿಂದ ಬತ್ತೊಬ್ಬರು ಬಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ನನ್ನ ಕಿರಿ ಮಗಳು ಖುಷಿ ಸಿನಿಮಾದಲ್ಲಿ ನಟಿಸಲು ಉತ್ಸುಕಳಾಗಿದ್ದು, ಅತಿ ಶೀಘ್ರದಲ್ಲಿ ಅವರ ಪ್ರವೇಶದ ಬಗ್ಗೆ ಮಾಹಿತಿ ಕೊಡುತ್ತೇವೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಖುಷಿಯ ಸಿನಿಮಾ ಜರ್ನಿ ಬಗ್ಗೆ ಹೇಳುತ್ತೇವೆ ಎಂದಿದ್ದಾರೆ.
![ಬಿ-ಟೌನ್ನಲ್ಲಿ ಕಮಾಲ್ ಮಾಡಲು ಹೊರಟ ಶ್ರೀದೇವಿಯ 2ನೇ ಪುತ್ರಿ](https://etvbharatimages.akamaized.net/etvbharat/prod-images/41829518_2128924360465505_7005535308275288202_n_1901newsroom_1611051808_107.jpg)
ಬೋನಿ ಕೆಲವು ದಶಕಗಳ ಹಿಂದೆ ತಮ್ಮ ಸಹೋದರ ಸಂಜಯ್ ಕಪೂರ್ ಅವರನ್ನು ಪರಿಚಯಿಸಿದಂತೆ ಅವರು ಖುಷಿಯನ್ನು ಇಂಟ್ರೂಡ್ಯೂಸ್ ಮಾಡೋದಿಲ್ಲ ಎಂದೂ ಹೇಳಿದ್ದಾರೆ. ನನ್ನ ಬಳಿ ಸಂಪನ್ಮೂಲಗಳಿರಬಹುದು, ಆದರೆ ಬೇರೊಬ್ಬರು ಖುಷಿಯನ್ನು ಪರಿಚಯಿಸಲಿ ಎಂದೇ ನಾನು ಬಯಸುತ್ತೇನೆ. ಏಕೆಂದರೆ ನಾನು ಅವಳ ತಂದೆ ಎಂದಿದ್ದಾರೆ.
![ಬಿ-ಟೌನ್ನಲ್ಲಿ ಕಮಾಲ್ ಮಾಡಲು ಹೊರಟ ಶ್ರೀದೇವಿಯ 2ನೇ ಪುತ್ರಿ](https://etvbharatimages.akamaized.net/etvbharat/prod-images/123954562_2805624083020809_2698047594828218838_n_1901newsroom_1611051808_83.jpg)
ಈಗಾಗಲೇ ಕಪೂರ್ ಫ್ಯಾಮಿಲಿಯಿಂದ ಜಾಹ್ನವಿ ಕಪೂರ್ ಮತ್ತು ಅರ್ಜುನ್ ಕಪೂರ್ ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಖುಷಿ ಎಂಟ್ರಿ ಹೇಗಿರುತ್ತೆ ಎಂಬುದನ್ನು ಕಾದು ನೋಡಬೇಕಿದೆ.