ಬಹುನಿರೀಕ್ಷಿತ ಸ್ಯಾಂಡಲ್ವುಡ್ ಸಿನಿಮಾ ಕೆಜಿಎಫ್ 2 ಬಿಡುಗಡೆಯ ದಿನಾಂಕ ಸಮೀಪಿಸುತ್ತಿದೆ. ನಿರ್ಮಾಪಕರೂ ಸೇರಿದಂತೆ ಚಿತ್ರತಂಡ ಸಿನಿಮಾ ಪ್ರಚಾರವನ್ನು ಹೊಸದಾಗಿ ನಡೆಸಲು ಮುಂದಾಗಿದ್ದು, ಕೆಜಿಎಫ್ ಮೆಟಾವರ್ಸ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಕೆಜಿಎಫ್ ಮೆಟಾವರ್ಸ್ ಅನ್ನು 'ಕೆಜಿಎಫ್ ವರ್ಸ್' ಎಂದು ಹೆಸರಿಡಲಾಗಿದೆ.
ಶೀಘ್ರದಲ್ಲೇ ಕೆಜಿಎಫ್ವರ್ಸ್ ಬಿಡುಗಡೆಯಾಗಲಿದ್ದು, ಕೆಜಿಎಫ್ ಅಭಿಮಾನಿಗಳು ಮತ್ತು ಸಿನಿಮಾ ರಸಿಕರು ಕೆಜಿಎಫ್ ಚಾಪ್ಟರ್ 2 ಸಿನಿಮಾ ಪಾತ್ರಗಳನ್ನು ತಮ್ಮದೇ ಆದ ಅವತಾರ್ಗಳ ರೀತಿಯಲ್ಲಿ ರಚಿಸಲು ಅವಕಾಶ ನೀಡುತ್ತದೆ. ವಿಶಿಷ್ಟವಾಗಿ ಕೆಜಿಎಫ್ ಸಿನಿಮಾದ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.
ಏಪ್ರಿಲ್ 7 ರಿಂದ ಬಳಕೆದಾರರು ಕೆಜಿಎಫ್ವರ್ಸ್ ಅನ್ನು ಬಳಸಿಕೊಳ್ಳಬಹುದಾಗಿದೆ. 'ಮೆಟಾವರ್ಸ್ ಶೀಘ್ರದಲ್ಲೇ ರಾಕಿಯ ಜಗತ್ತಾಗಲಿದೆ. ಏಪ್ರಿಲ್ 7ರಂದು ಗ್ರ್ಯಾಂಡ್ ಎಂಟ್ರಿಗೆ ಸಿದ್ಧರಾಗಿ. ಆಫರ್ ಕ್ಲೋಸಸ್ ಸೂನ್' ಎಂದು ಹೊಂಬಾಳೆ ಪ್ರೊಡಕ್ಷನ್ಸ್ ಟ್ವೀಟ್ ಮಾಡಿದೆ.
ಮೆಟಾವರ್ಸ್ ಎಂದರೆ ವರ್ಚುಯಲ್ ರಿಯಾಲಿಟಿ ಆವೃತ್ತಿಯಿದ್ದಂತೆ. ಡಿಜಿಟಲ್ ಮೂಲಕ ಕೆಜಿಎಫ್ ಪಾತ್ರಗಳನ್ನು ಸ್ಥಳಗಳನ್ನು ಸೃಷ್ಟಿಸಲಾಗುತ್ತದೆ. ಆ ಡಿಜಿಟಲ್ ಸ್ಥಳಗಳಿಗೆ ಬಳಕೆದಾರರು ವರ್ಚುಯಲ್ ರಿಯಾಲಿಟಿ ಮೂಲಕ ಎಂಟ್ರಿ ಪಡೆಯಬಹುದು. ಇಂಥದ್ದೇ ಪ್ರಯೋಗವನ್ನು ಕೆಜಿಎಫ್ ಸಿನಿಮಾ ಮಾಡುತ್ತಿದೆ.
ಇದನ್ನೂ ಓದಿ: 'ಹೋಂ ಮಿನಿಸ್ಟರ್' ಚಿತ್ರಕ್ಕಾಗಿ ರಿಯಲ್ ಸ್ಟಾರ್ ಮಾಡಿದ್ದೇನು ಗೊತ್ತೇ? ನೋಡಿ