ETV Bharat / sitara

ಖ್ಯಾತ ನಿರ್ದೇಶಕ ದಿನೇಶ್ ಬಾಬು 50ನೇ ಚಿತ್ರ 'ಕಸ್ತೂರಿ ಮಹಲ್' ಮೇ 13ಕ್ಕೆ ತೆರೆಗೆ - director dinensh babu 50th film

ಕಸ್ತೂರಿ ಮಹಲ್ ಸಿನಿಮಾ ಮೇ 13 ರಂದು ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ.

kannada-new-horror-movie-kasthuri-mahal-may-13-th-release
ಖ್ಯಾತ ನಿರ್ದೇಶಕ ದಿನೇಶ್ ಬಾಬು 50ನೇ ಚಿತ್ರ 'ಕಸ್ತೂರಿ ಮಹಲ್' ಮೇ 13ಕ್ಕೆ ತೆರೆಗೆ
author img

By

Published : Mar 28, 2022, 7:53 PM IST

ಬೆಂಗಳೂರು: ಬಹುಭಾಷಾ ನಟಿ ಸಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿರುವ ಹಾರರ್ ಸಿನಿಮಾ ಕಸ್ತೂರಿ ಮಹಲ್ ಮೇ 13ರಂದು ಬಿಡುಗಡೆಯಾಗುತ್ತಿದೆ. ದಿನೇಶ್ ಬಾಬು ನಿರ್ದೇಶನದ 50ನೇ ಸಿನಿಮಾ ಇದಾಗಿದ್ದು, ವಿಭಿನ್ನ ಕಥೆ ಹೊಂದಿದೆ ಎಂದು ಚಿತ್ರತಂಡ ಹೇಳಿದೆ.

ಈ ಕುರಿತು ನಟಿ ಸಾನ್ವಿ ಶ್ರೀವಾತ್ಸವ್ ಮಾತನಾಡಿ, ಉತ್ತಮ ಪಾತ್ರ ನೀಡಿರುವ ದಿನೇಶ್ ಬಾಬು ಅವರ ನಿರ್ದೇಶನದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಎರಡೂವರೆ ವರ್ಷಗಳ ನಂತರ ನನ್ನ ಅಭಿನಯದ ಚಿತ್ರ ತೆರೆಗೆ ಬರುತ್ತಿದೆ, ನೋಡಿ ಹರಸಿ ಎಂದರು. ಚಿತ್ರದ ನಾಯಕ ನಟ ಸ್ಕಂದ ಮಾತನಾಡಿ, ಇದೊಂದು ಉತ್ತಮ ಚಿತ್ರ. ನಿರ್ದೇಶಕರು ಉತ್ತಮ ಪಾತ್ರವನ್ನು ನನಗೆ ನೀಡಿದ್ದಾರೆ ಎಂದು ಹೇಳಿ ಧನ್ಯವಾದ ಅರ್ಪಿಸಿದರು.

ರಂಗಾಯಣ ರಘು, ಶೃತಿ ಪ್ರಕಾಶ್, ವತ್ಸಲಾ ಮೋಹನ್, ಕಾಶಿಮಾ, ನೀನಾಸಂ ಅಶ್ವಥ್ ಮೊದಲಾದವರು ತಾರಾಗಣದಲ್ಲಿದ್ದಾರೆ. ರಮೇಶ್ ಕೃಷ್ಣ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ರವೀಶ್ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: Oscars 2022; ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ತಾರೆಯರ ಪಟ್ಟಿ ಹೀಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.