ETV Bharat / sitara

ಸಿನಿಮಾ ನಿರ್ಮಾಪಕ ದಿನೇಶ್​ ಗಾಂಧಿ ಇನ್ನಿಲ್ಲ - ನಿರ್ಮಾಪಕ ದಿನೇಶ್ ಗಾಂಧಿ ಸುದ್ದಿ

ಕನ್ನಡದಲ್ಲಿ ಸುದೀಪ್ ಅಭಿನಯದ ‘ವೀರ ಮದಕರಿ’ ಸೇರಿ ಹಲವು ಚಿತ್ರಗಳನ್ನು ನಿರ್ಮಿಸಿ, ನಟಿಸಿ, ನಿರ್ದೇಶಿಸಿದ್ದ ದಿನೇಶ್ ಗಾಂಧಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ‘ಛತ್ರಪತಿ’ ಎಂಬ ಸಿನಿಮಾ ನಿರ್ದೇಶಿಸಿದ್ದ ಇವರು ಬಳಿಕ ಯಾವ ಚಿತ್ರವನ್ನೂ ಮಾಡಿರಲಿಲ್ಲ.

kannada-film-producer-dinesh-gandhi
ನಿರ್ಮಾಪಕ ದಿನೇಶ್​ ಗಾಂಧಿ ನಿಧನ
author img

By

Published : Oct 31, 2020, 10:13 AM IST

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ದಿನೇಶ್ ಗಾಂಧಿ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ಮಹಾಲಕ್ಷ್ಮೀ ಲೇಔಟ್​​​​ನಲ್ಲಿರುವ ನಿವಾಸದಲ್ಲಿ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರು.

ದಿನೇಶ್ ಗಾಂಧಿ ಅವರಿಗೆ 52 ವರ್ಷವಾಗಿತ್ತು. ಕಿಚ್ಚ ಸುದೀಪ್ ಅಭಿನಯದ ‘ವೀರ ಮದಕರಿ’ ಸಿನಿಮಾ ನಿರ್ಮಾಣ ಮಾಡಿ, ಈ ಚಿತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಯಶಸ್ಸಿನ ಬಳಿಕ, ರವಿಚಂದ್ರನ್ ಅಭಿನಯದ ‘ಹೂ’, ‘ಮಲ್ಲಿಕಾರ್ಜುನ’ ಸಿನಿಮಾ ನಿರ್ಮಾಣ ಮಾಡಿದ್ದರು. ಜೊತೆಗೆ ‘ಛತ್ರಪತಿ’ ಅನ್ನೋ ಸಿನಿಮಾವನ್ನೂ ನಿರ್ದೇಶನ ಜೊತೆಗೆ ನಿರ್ಮಾಣ ಮಾಡಿದ್ದರು.

ಈ ಸಿನಿಮಾ ಸೋಲಿನ ಬಳಿಕ ದಿನೇಶ್ ಗಾಂಧಿ ಯಾವುದೇ ಸಿನಿಮಾ ಮಾಡಿರಲಿಲ್ಲ. ಆದರೆ ‘ಕನ್ವಲ್ ಲಾಲ್’ ಎಂಬ ಟೈಟಲ್ ಹೊಂದಿರುವ ಸಿನಿಮಾವನ್ನು ಸುದೀಪ್ ನಿರ್ದೇಶಿಸುವ ಬಗ್ಗೆ ಘೋಷಣೆ ಮಾಡಿದ್ದರು. ಆದರೆ ಈ ಸಿನಿಮಾ ಕೈಗೂಡಲಿಲ್ಲ. ನಂತರ ಗಣೇಶ್ ಜೊತೆ ಒಂದು ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಆ ಚಿತ್ರವೂ ಸೆಟ್ಟೇರಲಿಲ್ಲ. ದಿನೇಶ್ ಗಾಂಧಿಗೆ ತಮ್ಮ‌ ಹತ್ತು ವರ್ಷದ ಮಗನ ಮೂಲಕ ಮಕ್ಕಳ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಇದಕ್ಕೆ ಪೂರಕವಾಗಿರುವ ಕಥೆಯನ್ನೂ ಕೂಡ ಅವರು ಸಿದ್ಧಪಡಿಸಿಕೊಂಡಿದ್ದರು. ಕೊರೊನಾದಿಂದಾಗಿ ಈ ಸಿನಿಮಾದ ಕೆಲಸ ಶುರುವಾಗಿರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.