ಚೆನ್ನೈ (ತಮಿಳುನಾಡು): ಬಹುಭಾಷಾ ನಟ ಹಾಗೂ ಮಕ್ಕಳ್ ನೀದಿ ಮೈಯಮ್ ಪಕ್ಷದ (ಎಂಎನ್ಎಂ) ಸಂಸ್ಥಾಪಕ ಕಮಲ್ ಹಾಸನ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಕೊರೊನಾದಿಂದಾಗಿ ಜನರು ತಮ್ಮ ಜೀವನೋಪಾಯ ಕಳೆದುಕೊಂಡಿದ್ದಾರೆ. ಭಾರತದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ನೂತನ ಸಂಸತ್ ಭವನ ನಿರ್ಮಾಣ ಮಾಡುವ ಅಗತ್ಯವೇನಿದೆ? ನನ್ನ ಪ್ರೀತಿಯ ಚುನಾಯಿತ ಪ್ರಧಾನಿಯವರೇ ದಯವಿಟ್ಟು ಉತ್ತರಿಸಿ" ಎಂದು ತಮಿಳು ಭಾಷೆಯಲ್ಲಿ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿಗೆ ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.
-
பதில் சொல்லுங்கள் என் மாண்புமிகு தேர்ந்தெடுக்கப்பட்ட பிரதமரே....
— Kamal Haasan (@ikamalhaasan) December 13, 2020 " class="align-text-top noRightClick twitterSection" data="
(2/2)
">பதில் சொல்லுங்கள் என் மாண்புமிகு தேர்ந்தெடுக்கப்பட்ட பிரதமரே....
— Kamal Haasan (@ikamalhaasan) December 13, 2020
(2/2)பதில் சொல்லுங்கள் என் மாண்புமிகு தேர்ந்தெடுக்கப்பட்ட பிரதமரே....
— Kamal Haasan (@ikamalhaasan) December 13, 2020
(2/2)
"ಚೀನಾದ ಮಹಾಗೋಡೆ ನಿರ್ಮಾಣದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಜನರನ್ನು ರಕ್ಷಿಸಲು ಈ ಗೋಡೆಯನ್ನು ಕಟ್ಟಲಾಗಿದೆ ಎಂದು ಅಂದಿನ ರಾಜರು ಸಮರ್ಥಿಸಿಕೊಂಡಿದ್ದರು" ಎಂದು ಉದಾಹರಣೆ ನೀಡಿರುವ ಹಾಸನ್, ನೂತನ ಸಂಸತ್ ಭವನವನ್ನು ಚೀನಾದ ಮಹಾಗೋಡೆಗೆ ಹೋಲಿಕೆ ಮಾಡಿ ಇದು ವ್ಯರ್ಥ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇದನ್ನೂ ಓದಿ: ನೂತನ ಸಂಸತ್ ಭವನವು 'ಆತ್ಮನಿರ್ಭರ ಭಾರತ' ನಿರ್ಮಾಣಕ್ಕೆ ಸಾಕ್ಷಿ : ಭೂಮಿ ಪೂಜೆ ಬಳಿಕ ಮೋದಿ ಮಾತು
971 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಸಂಸತ್ ಭವನಕ್ಕೆ ಡಿಸೆಂಬರ್ 10 ರಂದು ಪಿಎಂ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಇದು ಹಳೆಯ ಸಂಸತ್ತಿನ ಕಟ್ಟಡಕ್ಕಿಂತ 17,000 ಚ. ಮೀ. ದೊಡ್ಡದಾಗಿರಲಿದೆ. ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ಗೆ ಸಂಸತ್ ನಿರ್ಮಾಣ ಯೋಜನೆಯ ಗುತ್ತಿಗೆ ನೀಡಲಾಗಿದೆ.