ETV Bharat / sitara

ಕ್ರೇಜಿಸ್ಟಾರ್ ಕಿರಿಯ ಪುತ್ರ ವಿಕ್ರಮ್ ಸ್ಯಾಂಡಲ್​ವುಡ್‌ಗೆ ಎಂಟ್ರಿ.. - sandlwood

ಜೂನಿಯರ್ ಕ್ರೇಜಿಸ್ಟಾರ್ ತ್ರಿವಿಕ್ರಮ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಕ್ರೇಜಿಸ್ಟಾರ್ ಪುತ್ರ ವಿಕ್ರಮ್ ಸ್ಯಾಂಡಲ್​ವುಡ್ ಗೆ ಎಂಟ್ರಿ
author img

By

Published : Aug 10, 2019, 8:55 AM IST

ಬೆಂಗಳೂರು : ಸ್ಯಾಂಡಲ್​ವುಡ್​ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡೋಕೆ ಜಬರ್ದಸ್ತಾಗಿ ರೆಡಿಯಾಗಿದ್ದಾರೆ.

ಜೂನಿಯರ್ ಕ್ರೇಜಿಸ್ಟಾರ್ ತ್ರಿವಿಕ್ರಮ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಿಕ್ರಮ್ ರವಿಚಂದ್ರನ್ ಅಭಿನಯದ ಮೊದಲ ಚಿತ್ರ ಅದ್ದೂರಿಯಾಗಿ ಸೆಟ್ಟೇರಿದೆ. ಮೊದಲ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ರವಿಚಂದ್ರನ್​ ಕುಟುಂಬ ಸಾಕ್ಷಿಯಾಯಿತು. ನಾಗರಬಾವಿಯ ಶ್ರೀಮಲೆಮಹದೇಶ್ವರ ದೇವಾಲಯದಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾಗವಹಿಸಿದ್ದರು. ಕ್ಲ್ಯಾಪ್ ಮಾಡುವ ಮೂಲಕ ತ್ರಿವಿಕ್ರಮ ಚಿತ್ರಕ್ಕೆ ಶುಭ ಹಾರೈಸಿದರು. ಅಲ್ಲದೆ ಸ್ಯಾಂಡಲ್​ವುಡ್​ ಚಂದ್ರಮುಖಿ ಸಾನ್ವಿ ಶ್ರೀವಾತ್ಸವ್ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿ ವಿಕ್ರಮ್​ಗೆ ವಿಶ್ ಮಾಡಿದರು.

ಸೆಟ್ಟೇರಿದ ತ್ರಿವಿಕ್ರಮ ಸಿನಿಮಾ

ಮಾಸ್ ಲೀಡರ್ ನಿರ್ದೇಶಕ ಸಹನಾಮೂರ್ತಿ ತ್ರಿವಿಕ್ರಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ತ್ರಿವಿಕ್ರಮ ಒಂದೊಳ್ಳೆ ವಿಷಯ ಇಟ್ಕೊಂಡು ವಿಕ್ರಮ್ ರವಿಚಂದ್ರನ್‌ ಅವರನ್ನು ಸ್ಯಾಂಡಲ್​ವುಡ್‌ಗೆ ಎಂಟ್ರಿ ಕೊಡಿಸುವುದಾಗಿ ಹೇಳಿದರು.

ಅಲ್ಲದೆ ಈ ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್ ಯುವಕನ ಪಾತ್ರದಲ್ಲಿ ಕಾಣಿಸುತ್ತಿದ್ದು, ಲವರ್ ಬಾಯ್ ಪಾತ್ರದಲ್ಲಿ ಮಿಂಚಲಿದ್ದಾರೆ. ನಮ್ಮ ತಂದೆ ಒಬ್ಬ ಸ್ಟಾರ್ ಆದ್ದರಿಂದ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ನನ್ನ ಸಿನಿಮಾವನ್ನು ನೋಡಲು ಅಭಿಮಾನಿಗಳು ರವಿಚಂದ್ರನ್ ಪುತ್ರ ಎಂದೇ ಥಿಯೇಟರ್​ಗೆ ಬರುತ್ತಾರೆ. ಆದರೆ, ಈ ಚಿತ್ರವನ್ನು ನೋಡಿದ ನಂತರ ವಿಕ್ರಮ್ ರವಿಚಂದ್ರನ್ ಎಂಬ ಭಾವನೆ ಮೂಡುವಂತಾಗಬೇಕು. ಹಾಗಾಗಿ ಈ ಚಿತ್ರದ ಮೂಲಕ ಬರುತ್ತಿದ್ದೇವೆ ಎಂದು ತಮ್ಮ ಮೊದಲ ಚಿತ್ರದ ಬಗ್ಗೆ ವಿಕ್ರಮ್ ರವಿಚಂದ್ರನ್ ತಿಳಿಸಿದರು.

ಕಿರುತೆರೆಯಿಂದ ಬೆಳ್ಳಿ ತೆರೆಗೆ ಪರಿಚಯವಾಗ್ತಿರುವ ಬಾಂಬೆ ಬೆಡಗಿ ಆಕಾಂಕ್ಷ ಶರ್ಮಾ ಚಿತ್ರದ ನಾಯಕಿ. ಸುಮಾರು 2-3 ತಿಂಗಳಿನಿಂದ ಕನ್ನಡ ಕಲಿಯುತ್ತಿರುವ ಆಕಾಂಕ್ಷ, ಪಾತ್ರಕ್ಕಾಗಿ ಭರ್ಜರಿ ತಯಾರಿ ಮಾಡುತ್ತಿದ್ದಾರಂತೆ.

ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಗೌರಿ ಎಂಟರ್ಟೇನರ್ಸ್ ಬ್ಯಾನರ್ ಅಡಿ ಸೋಮಣ್ಣ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ಮುಂದಿನ ವರ್ಷ ಸಮ್ಮರ್ ವೇಳೆಗೆ ಚಿತ್ರವನ್ನು ರಿಲೀಸ್ ಮಾಡಲು ನಿರ್ಮಾಪಕರು ಪ್ಲಾನ್ ಮಾಡಿಕೊಂಡಿದ್ದಾರೆ.

Intro:ಸ್ಯಾಂಡಲ್ವುಡ್ನ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಂ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡೋಕೆ ಜಬರ್ದಸ್ತಾಗಿ ರೆಡಿಯಾಗಿದ್ದಾರೆ. ಜೂನಿಯರ್ ಕ್ರೇಜಿಸ್ಟಾರ್ ತ್ರಿವಿಕ್ರಮ ಚಿತ್ರದ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡುತ್ತಿದ್ದು. ಇಂದು ಕ್ರೇಜಿಸ್ಟಾರ್ ಪುತ್ರ ವಿಕ್ರಂ ರವಿಚಂದ್ರನ್ ಅಭಿನಯದ ಮೊದಲ ಚಿತ್ರ ಚಿತ್ರ ಅದ್ದೂರಿಯಾಗಿ ಸೆಟ್ಟೇರಿತು. ಜೂನಿಯರ್ ಕ್ರೇಜಿಸ್ಟಾರ್ ನ ಮೊದಲ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ಕುಟುಂಬ ಸಾಕ್ಷಿಯಾಯಿತು. ನಾಗರಬಾವಿಯ ಶ್ರೀಮಲೆಮಹದೇಶ್ವರ ದೇವಾಲಯದಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾಗವಹಿಸಿ .ಕ್ಯಾಪ್ ಮಾಡುವ ಮೂಲಕ ಮಾಡುವ ಮೂಲಕ ತ್ರಿ ಕ್ರಮ ಸ್ಯಾಂಡಲ್ವುಡ್ನಲ್ಲಿ ಯಶಸ್ವಿ ಆಗಲಿ ಎಂದು ಶುಭ ಹಾರೈಸಿದರು. ಅಲ್ಲದೆ ಸ್ಯಾಂಡಲ್ವುಡ್ನ ಚಂದ್ರಮುಖಿ ಮಾಸ್ಟರ್ಪೀಸ್ ಹುಡುಗಿ ಸಾನ್ವಿ ಶ್ರೀವಾತ್ಸವ್ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿ ವಿಕ್ರಂಗೆ ವಿಶ್ ಮಾಡಿದರು.

Body:ಇನ್ನು ತ್ರಿವಿಕ್ರಮ ಚಿತ್ರವನ್ನು ಮಾಸ್ ಲೀಡರ್ ಹಾಗೂ ಚಿತ್ರಗಳನ್ನು ನಿರ್ದೇಶನ ಮಾಡಿದ ಸಹನಾಮೂರ್ತಿ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದು. ಒಬ್ಬ ಸ್ಟಾರ್ ಪುತ್ರನನ್ನು ಪರಿಚಯ ಮಾಡಲು ಆಗಲ್ಲ ಎಲಿಮೆಂಟ್ಸ್ ಗಳು ಇರಬೇಕು ಇಟ್ಟುಕೊಂಡು. ಒಂದೊಳ್ಳೆ ಸಬ್ಜೆಕ್ಟ್ ಮೂಲಕ ವಿಕ್ರಂ ರವಿಚಂದ್ರನ್ ಅವರನ್ನು ತ್ರಿವಿಕ್ರಮ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಿಸುವುದಾಗಿ ಹೇಳಿದರು. ಅಲ್ಲದೆ ಈ ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್ ಯುವಕನ ಪಾತ್ರದಲ್ಲಿ ಕಾಣಿಸುತ್ತಿದ್ದು ಲವರ್ ಬಾಯ್ ಆಗಿ ಚಿತ್ರದಲ್ಲಿ ರೆಡಿಯಾಗಿದ್ದಾರೆ. ನಮ್ಮ ತಂದೆ ಒಬ್ಬ ಸ್ಟಾರ್ ಆದರಿಂದ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ನನ್ನ ಸಿನಿಮಾವನ್ನು ನೋಡಲು ಅಭಿಮಾನಿಗಳು ರವಿಚಂದ್ರನ್ ಪುತ್ರ ಎಂದೇ ಥಿಯೇಟರ್ಗೆ ಬರುತ್ತಾರೆ. ಆದರೆ ಈ ಚಿತ್ರವನ್ನು ನೋಡಿದ ನಂತರ ವಿಕ್ರಮ್ ರವಿಚಂದ್ರನ್ ಇನ್ನು ಭಾವನೆ ಮೂಡುವ ಹಾಗೆ ಒಂದು ಒಳ್ಳೆ ಸಬ್ಜೆಕ್ಟ್ ಮೂಲಕ ಈ ಚಿತ್ರದ ಮೂಲಕ ಬರುತ್ತಿದ್ದೇವೆ ಎಂದು ತಮ್ಮ ಮೊದಲ ಚಿತ್ರದ ಬಗ್ಗೆ ವಿಕ್ರಮ್ ರವಿಚಂದ್ರನ್ ತಿಳಿಸಿದರು. ಅಲ್ಲದೆ ಈ ಚಿತ್ರದಲ್ಲಿ ನಾಯಕಿಯಾಗಿ ಬಾಂಬೆ ಬೆಡಗಿ ಆಕಾಂಕ್ಷ ಶರ್ಮ ಈ ಚಿತ್ರದ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಅಲ್ಲದೆ ಚಿತ್ರಕ್ಕಾಗಿ ಸುಮಾರು ಎರಡು ಮೂರು ತಿಂಗಳಿನಿಂದ ಕನ್ನಡ ಕಲಿಯುತ್ತಿರುವ ಆಕಾಂಕ್ಷ ಪಾತ್ರಕ್ಕಾಗಿ ಭರ್ಜರಿಯಾಗಿ ತಯಾರಿ ಮಾಡುತ್ತಿದ್ದಾರಂತೆ. ಇನ್ನು ಈ ಚಿತ್ರಕ್ಕೆ ಸಂತೋಷ್ ರೈ ಪತಾಜೆ ಛಾಯಾಗ್ರಹಣವಿದ್ದು , ಗೌರಿ ಎಂಟರ್ಟೇನರ್ಸ್ ಬ್ಯಾನರ್ ಅಡಿ ಸೋಮಣ್ಣ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.ಅಲ್ಲದೆ ಈ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತವಿದ್ದು ಇಂದಿನಿಂದ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಮುಂದಿನ ವರ್ಷ ಸಮ್ಮರ್ ವೇಳೆಗೆ ಚಿತ್ರವನ್ನು ರಿಲೀಸ್ ಮಾಡಲು ನಿರ್ಮಾಪಕರು ಪ್ಲಾನ್ ಮಾಡಿಕೊಂಡಿದ್ದಾರೆ.

ಸತೀಶ ಎಂಬಿ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.