ಮಂಡ್ಯ ಲೋಕಸಭೆ ಚುನಾವಣೆ ಕಾರ್ಯ ಆರಂಭವಾದಾಗಿನಿಂದ ಚಾಲ್ತಿಯಲ್ಲಿರುವ ಹೆಸರುಗಳೆಂದರೆ 'ನಿಖಿಲ್ ಎಲ್ಲಿದಿಯಪ್ಪಾ ?' ಹಾಗೂ 'ಜೋಡೆತ್ತು' ಪದಗಳು. ಈಗಾಗಲೇ 'ಜೋಡೆತ್ತು' ಹೆಸರಿನಲ್ಲಿ 'ಮೆಜೆಸ್ಟಿಕ್ ' ನಿರ್ಮಾಪಕ ರಾಮಮೂರ್ತಿ ಟೈಟಲ್ ರಿಜಿಸ್ಟರ್ ಮಾಡಿಸಿ ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ ಎಂದು ಕೂಡಾ ಹೇಳಿದ್ದಾರೆ.
- " class="align-text-top noRightClick twitterSection" data="">
ಇದರೊಂದಿಗೆ 'ಜೋಡೆತ್ತು' ಪದ ಕೂಡಾ ಕೆಲವೊಂದು ಸಿನಿಮಾಗಳಲ್ಲಿ ಗತ್ತು ತೋರಿಸುತ್ತಿದೆ. ಮಂಡ್ಯ ಚುನಾವಣಾ ಅಖಾಡದಲ್ಲಿ ಭಾರೀ ಸದ್ದು ಮಾಡಿದ್ದ 'ಜೋಡೆತ್ತು' ಪದವನ್ನು ಬಳಸಿಕೊಂಡು ಸ್ಯಾಂಡಲ್‍ವುಡ್‍ನಲ್ಲೊಂದು ಹಾಡು ಬಂದಿದೆ. 'ರಾಜ ರಾಣಿ ರೋರರ್ ರಾಕೆಟ್' ಸಿನಿಮಾದಲ್ಲಿ 'ಜೋಡಿ ಎತ್ತು ಜೋಡಿ ಎತ್ತು..ಸೌಂಡು ಜೋರು' ಎಂಬ ಸಾಲಿನಿಂದ ಆರಂಭವಾಗುವ ಹಾಡನ್ನು ರಚಿಸಿ ಅಳವಡಿಸಿಕೊಳ್ಳಲಾಗಿದೆ. ಈಗಾಗಲೇ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು ಎರಡೇ ದಿನಕ್ಕೆ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ರವಿ ಬಸ್ರೂರು ಹಾಗೂ ಅನಿರುಧ್ ಈ ಹಾಡಿನ ಗಾಯಕರು.
'ಚುಟು ಚುಟು' ಖ್ಯಾತಿಯ ಭೂಷಣ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಇದು ಹೊಸಬರ ಚಿತ್ರವಾಗಿದ್ದು ಭೂಷಣ್ ಹಾಗೂ ಮಾನ್ಯ ನಾಯಕ-ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲೇಖನ ಕ್ರಿಯೇಷನ್ಸ್ ಬ್ಯಾನರ್ ಅಡಿ ನಾಗರಾಜ್ ಪಿ. ಅಜ್ಜಂಪುರ ಶೆಟ್ಟರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಭೂಷಣ್ ಅವರೇ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಖ್ಯಾತ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಭು ಎಸ್.ಆರ್ ಸಂಗೀತ ನಿರ್ದೇಶನವಿದೆ. ಜ್ಞಾನೇಶ್ ಸಂಕಲನ ಇರುವ ಈ ಚಿತ್ರದ ತಾರಾಬಳಗದಲ್ಲಿ ಭೂಷಣ್, ಸಂತೋಷ್, ರಣಧೀರ್, ಮನೋಜ್‍ಕುಮಾರ್, ಮಾನ್ಯ, ಎಂ.ಡಿ. ಕೌಶಿಕ್, ಮೂಗೂರು ಸುಂದರಂ ಹಾಗೂ ಇನ್ನಿತರರು ಇದ್ದಾರೆ.