ಪುನೀತ್ ರಾಜ್‍ಕುಮಾರ್ ಹಾಗೂ ಭರ್ಜರಿ ಚೇತನ್ ಕಾಂಬಿನೇಷನ್ನಲ್ಲಿ ಮೂಡಿ ಬರಲಿರುವ ಜೇಮ್ಸ್ ಚಿತ್ರ ಸೆಟ್ಟೇರೋ ಮೊದಲೇ ಹವಾ ಕ್ರಿಯೇಟ್ ಮಾಡಿದೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬರ್ತ್ ಡೇಗೆ ಜೇಮ್ಸ್ ಚಿತ್ರ ತಂಡ ಚಿತ್ರದ ಮೊಷನ್ ಪೋಸ್ಟರ್ ಲಾಂಚ್ ಮಾಡಿತ್ತು. ಅಲ್ಲದೆ ಈ ಮೋಷನ್ ಪೋಷ್ಟರ್ಗೆ ಫಿದಾ ಆಗಿದ್ದ ಅಪ್ಪು ಅಭಿಮಾನಿಗಳು ಯಾವಗ ಚಿತ್ರ ಶುರುವಾಗುತ್ತೆ ಅಂತ ಕಾಯ್ತಿದ್ದರು.
ಈಗ ಅಪ್ಪು ಫ್ಯಾನ್ಸ್ಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೌದು ಭರಾಟೆ ಸಕ್ಸಸ್ ನಂತ್ರ ನಿರ್ದೇಶಕ ಚೇತನ್ ಕುಮಾರ್ "ಭರ್ಜರಿ"ಯಾಗಿ ಜೇಮ್ಸ್ ಚಿತ್ರಕ್ಕೆ ತಯಾರಿ ಮಾಡ್ಕೊಂಡಿದ್ದು, ಮುಂದಿನ ವರ್ಷ ಅಂದ್ರೆ ಜನವರಿ 19ಕ್ಕೆ ಜೇಮ್ಸ್ ಚಿತ್ರೀಕರಣ ಶುರುವಾಗಲಿದೆಯಂತೆ.
![punith raj kumar](https://etvbharatimages.akamaized.net/etvbharat/prod-images/5223567_thumb.jpg)
ಸದ್ಯ ಅಪ್ಪು ಯುವರತ್ನ ಚಿತ್ರದ ಶೂಟಿಂಗ್ನಲ್ಲಿ ಬಿಝಿ ಇದ್ದು. ಯುವರತ್ನ ಶೂಟಿಂಗ್ ಕಂಪ್ಲೀಟ್ ಆದ ಮೇಲೆ ಜೇಮ್ಸ್ ಅಡ್ಡಕ್ಕೆ ಎಂಟ್ರಿ ಕೊಡಲಿದ್ದಾರೆ. ಅಲ್ಲದೆ ಈ ಚಿತ್ರದ ವಿಶೇಷ ಅಂದರೆ ಅಪ್ಪು ಮೂರು ಡಿಫರೆಂಟ್ ಲುಕ್ನಲ್ಲಿ ಮಿಂಚಲಿದ್ದಾರಂತೆ.