ETV Bharat / sitara

ಆಡಿಯೋ ವೈರಲ್ ಆರೋಪ;​​ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ ಜಗ್ಗೇಶ್ - ಜಗ್ಗೇಶ್​​ ಸುದ್ದಿ

ಜಗ್ಗೇಶ್​​​ ದೂರವಾಣಿಯಲ್ಲಿ ನಿರ್ದಿಷ್ಟ ನಟನ ಅಭಿಮಾನಿಗಳ​​ ಬಗ್ಗೆ ಮಾತನಾಡಿರುವ ಆಡಿಯೋ ಕ್ಲಿಪ್​ ಒಂದು ಸಖತ್​​ ವೈರಲ್​ ಆಗುತ್ತಿದೆ.

ಆಡಿಯೋ ವೈರಲ್​​ : ದರ್ಶನ್​​​ ಹುಡುಗರನ್ನ ಹೀಯಾಳಿಸಿದ್ರಾ ಜಗ್ಗೇಶ್​​?

author img

By

Published : Feb 11, 2021, 3:10 PM IST

Updated : Feb 11, 2021, 3:27 PM IST

ಜಗ್ಗೇಶ್​​​ ದೂರವಾಣಿಯಲ್ಲಿ ನಿರ್ದಿಷ್ಟ ನಟನ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್​ ಒಂದು ಸಖತ್​​ ವೈರಲ್​ ಆಗುತ್ತಿದೆ. ಆ ಆಡಿಯೋದಲ್ಲಿ ಜಗ್ಗೇಶ್​​​ ಮಾತನಾಡಿದ್ದು, 'ನಮ್ಮ ಹತ್ರ ಇರೋರೆಲ್ಲ ಹಾರ್ಡ್ ವರ್ಕರ್ಸ್. ಬಟ್... ತಲೆ ಮಾಂಸ ಕಳಿಸಿ ಅಣ್ಣಾ.. ನೂರ್ ಕುರಿ ಕಳಿಸಿ ಅಂತಣ್ಣಾ ಅನ್ನೋರು ಯಾರು ಇಲ್ಲ ನನ್ನ ಹತ್ರ...' ಎಂದು ಕೇಳಿಸುತ್ತದೆ.

ಆದ್ರೆ ಈ ಬಗ್ಗೆ ಪರ ಮತ್ತು ವಿರೋಧ ಎರಡೂ ಮಾತುಗಳು ಇದೀಗ ಟ್ವೀಟ್​​ ವಾರ್​​ಗೆ ಕಾರಣವಾಗಿದೆ. ಈ ರೀತಿ ಮಾತನಾಡಿರುವುದಕ್ಕೆ ಜಗ್ಗೇಶ್​​ ದರ್ಶನ್​ ಬಳಿ ಕ್ಷಮೆ ಕೇಳಬೇಕು ಎಂದು ದರ್ಶನ್​​ ಅಭಿಮಾನಿಗಳು ಹೇಳ್ತಿದ್ರೆ, ಇತ್ತ ಜಗ್ಗೇಶ್​​ ಅಭಿಮಾನಿಗಳು, ಜಗ್ಗೇಶ್​​ ಈ ರೀತಿ ಮಾತನಾಡುವವರಲ್ಲ. ಅದ್ರಲ್ಲು ದೂರವಾಣಿಯಲ್ಲಿ ಜಗ್ಗೇಶ್​​​ ಯಾರ ಬಳಿಯೂ ಸುಲಭವಾಗಿ ಮಾತನಾಡುವವರಲ್ಲ ಎನ್ನುತ್ತಿದ್ದಾರೆ.

ಈ ಎಲ್ಲಾ ಮುಸುಕಿನ ಗುದ್ದಾಟ ಶುರುವಾದ ಹಿನ್ನೆಲೆಯಲ್ಲಿ ಜಗ್ಗೇಶ್​​ ಟ್ವೀಟ್​​ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಟ್ವೀಟ್​​ನಲ್ಲಿ ಬರೆದುಕೊಂಡಿರುವ ನಟ, "ಚಿತ್ರ ಪ್ರಚಾರಕ್ಕೆ fakenews spread ಮಾಡುವ ಹುನ್ನಾರ! ಒಬ್ಬ ಚಿಕ್ಕಹುಡುಗನದು ಈ ಆಟ! ನಾನು ಏನು ಅಂತ ನನ್ನ ಬಲ್ಲವರಿಗೆ ಎಲ್ಲರಿಗು ತಿಳಿದಿದೆ! ಇಂಥ ವಿಷಯಕ್ಕೆ ಹೃದಯ ತೆಗೆದು ತೋರುವ ಅವಶ್ಯಕತೆ ಇಲ್ಲಾ! ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಒಳಿತು! ಈ ಪ್ರಯತ್ನದ ಮಹನೀಯರಿಗೆ ಶುಭಹಾರೈಕೆ! ಕರ್ತವ್ಯದಿಂದ ಜಗಗೆಲ್ಲಿ ನನ್ನ ವಿನಂತಿ!'' ಎಂದು ಬರೆದಿದ್ದಾರೆ.

ಜಗ್ಗೇಶ್​​ ನಿರ್ಮಾಪಕರೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಸಿನಿಮಾ ಪ್ರಚಾರದ ವಿಚಾರಕ್ಕೆ ಸಂಬಂಧಪಟ್ಟಂತೆ ಸಲಹೆ ನೀಡಿದ್ದಾರೆ. ಆದ್ರೆ ಈ ಬಗ್ಗೆ ಇನ್ನೂ ಸ್ಪಷ್ಟತೆ ಸಿಗೋದು ನೇರವಾಗಿ ಜಗ್ಗೇಶ್​​ ಅಥವಾ ದರ್ಶನ್​ ಮಾತನಾಡಿದಾಗ. ಆ ಆಡಿಯೋ ಯಾವುದು, ಅದನ್ನು ಆ ರೀತಿ ಮಾಡಿದ್ದು ಯಾರು ಮತ್ತು ಏಕೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

Last Updated : Feb 11, 2021, 3:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.