ETV Bharat / sitara

Independence Day 2021: ದೇಶಪ್ರೇಮ ಸಾರುವ ಕನ್ನಡ ಸಿನಿಮಾಗಳ ಒಂದು ನೋಟ!

author img

By

Published : Aug 14, 2021, 10:48 PM IST

Updated : Aug 14, 2021, 10:54 PM IST

ಮುತ್ತಿನ ಹಾರ ಸಿನಿಮಾ ಬಳಿಕ, ಮತ್ತೆ ಸಾಹಸ ಸಿಂಹ ವಿಷ್ಣುವರ್ಧನ್ ದೇಶ ಪ್ರೇಮಿಯಾಗಿ ಅಭಿನಯಿಸಿದ ಚಿತ್ರ 'ವೀರಪ್ಪ ನಾಯ್ಕ'. ಬೆಳಗಾವಿ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ಒಬ್ಬ ದೇಶಪ್ರೇಮಿ ಹಾಗೂ ಗಾಂಧಿವಾದಿ ನಾಯಕನ ಜೀವನದ ಕಥೆಯನ್ನು ಈ ಚಿತ್ರ ಒಳಗೊಂಡಿತ್ತು. ಸಂಬಂಧಗಳಿಗಿಂತ ದೇಶಪ್ರೇಮವೇ ಹೆಚ್ಚೆಂದು ಉಗ್ರಗಾಮಿಯಾದ ತನ್ನ ಮಗನನ್ನೇ ಕೊಲ್ಲುವ ಅಪ್ಟಟ ದೇಶಾಭಿಮಾನಿಯ ಕಥೆ ಇದು..

independence-day-2021-kannada-patriotic-movies
ದೇಶಪ್ರೇಮ ಆಧಾರಿತ ಕನ್ನಡ ಸಿನಿಮಾಗಳ ಒಂದು ನೋಟ

ಭಾರತೀಯ ಚಿತ್ರರಂಗದಲ್ಲಿ ದೇಶಪ್ರೇಮ ಆಧಾರಿತ ಸಾಕಷ್ಟು ಸಿನಿಮಾ ಬಂದಿವೆ. ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರಕ್ಕಾಗಿ ಹೋರಾಡಿದ ಘಟನೆಗಳಿಂದ ಹಿಡಿದು, ಸ್ವಾತಂತ್ರ್ಯ ನಂತರ ನಡೆದ ಯುದ್ಧಗಳ ಮೇಲೂ ಸಿನಿಮಾಗಳಿವೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲೂ ದೇಶ ಪ್ರೇಮ ಸಾರುವ ಹಲವಾರು ಸಿನಿಮಾಗಳು ತೆರೆ ಕಂಡಿವೆ. 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಕನ್ನಡದಲ್ಲಿ ದೇಶಪ್ರೇಮ ಸಾರುವ ಚಿತ್ರಗಳ ಬಗ್ಗೆ ಒಂದು ನೋಟ ಇಲ್ಲಿದೆ.

ಕಿತ್ತೂರು ಚೆನ್ನಮ್ಮ : ಕನ್ನಡ ಚಿತ್ರರಂಗದಲ್ಲಿ 1961ರಲ್ಲಿ ತೆರೆ ಕಂಡು ಇವತ್ತಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಸಿನಿಮಾ 'ಕಿತ್ತೂರು ಚೆನ್ನಮ್ಮ'. ಬಹುಭಾಷಾ ನಟಿ ಬಿ. ಸರೋಜಾದೇವಿ ಕಿತ್ತೂರು ಚೆನ್ನಮ್ಮನಾಗಿ ಅಭಿನಯಿಸಿದ ಸಿನಿಮಾವಿದು. ಈ ಚಿತ್ರದಲ್ಲಿ 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ಕಾಯ್ದೆಯಡಿ ಬ್ರಿಟಿಷರು ಕಿತ್ತೂರು ಸಂಸ್ಥಾನ ವಶಪಡಿಸಿಕೊಳ್ಳಲು ಬಂದಾಗ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದಿಟ್ಟ ಮಹಿಳೆ ರಾಣಿ ಚೆನ್ನಮ್ಮ. ಅಮೋಘ ಅಭಿನಯದಿಂದ ಇವತ್ತಿಗೂ ಚೆನ್ನಮ್ಮ ಅಂದರೆ ಬಿ. ಸರೋಜಾದೇವಿ ನೆನಪಾಗುತ್ತಾರೆ. ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಡಾ. ರಾಜ್ ಕುಮಾರ್ ಕೂಡ ನಟಿಸಿದ್ದರು. ಪ್ರಖ್ಯಾತ ನಿರ್ದೇಶಕ ಬಿ ಆರ್ ಪಂತಲ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಆ ಕಾಲದಲ್ಲೇ 9ನೇ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.

ಮುತ್ತಿನ ಹಾರ : ಬಳಿಕ ತೆರೆಗೆ ಬಂದ ಮೈ ಜುಮ್​ ಎನಿಸುವ ದೇಶ ಪ್ರೇಮದ ಕುರಿತಾದ ಸಿನಿಮಾ 'ಮುತ್ತಿನ ಹಾರ'. ಈ ಚಿತ್ರದಲ್ಲಿ ವಿಷ್ಣುವರ್ಧನ್ ವೀರ ಸೈನಿಕನ ಪಾತ್ರದಲ್ಲಿ ವಿಜೃಂಭಿಸಿದ್ದು, ಸುಹಾಸಿನಿ ನಾಯಕಿಯಾಗಿದ್ದರು. ಕೊಡಗಿನ ವೀರ ಸೈನಿಕ ಅಚ್ಚಪ್ಪನ ಸಾಹಸ ಶೌರ್ಯ ಮತ್ತು ಸುಂದರ ದಾಂಪತ್ಯದ ಜೊತೆಗೆ ಯುದ್ಧದ ಸನ್ನಿವೇಶವನ್ನ ಈ ಚಿತ್ರದಲ್ಲಿ ತೋರಿಸಲಾಗಿದೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದರು. ಯುದ್ಧದ ಇನ್ನೊಂದು ಮುಖವನ್ನು ತೆರೆದಿಟ್ಟ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಈ ಸಿನಿಮಾ 1990ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು.

independence-day-2021-kannada-patriotic-movies
ಮುತ್ತಿನಹಾರ

ತಾಯಿ ಸಾಹೇಬ : ಅಪ್ಪಾ ಸಾಹೇಬ ಎಂಬ ಸ್ವಾತಂತ್ರ್ಯ ಹೋರಾಟಗಾರ ಮತ್ತು ಅವನ 2ನೇ ಹೆಂಡತಿ ನರ್ಮದಾ ತಾಯಿಯವರ ಜೀವನದ ಕತೆಯನ್ನು ಆಧರಿಸಿ ಬಂದ ಸಿನಿಮಾ 'ತಾಯಿ ಸಾಹೇಬ'. ಜಯಮಾಲಾ ಹಾಗೂ ಸುರೇಶ್ ಹೆಬ್ಳೀಕರ್ ಅಭಿನಯದ ಈ ಸಿನಿಮಾ ಸ್ವಾತಂತ್ರ ಪೂರ್ವ ಹಾಗೂ ಭೂ ಚಳವಳಿ ಬಗ್ಗೆ ಇದೆ. ಗಿರೀಶ್ ಕಾಸವರಳ್ಳಿ ನಿರ್ದೇಶನದ ಚಿತ್ರವು ಡಿಸೆಂಬರ್ 31, 1997ರಲ್ಲಿ ತೆರೆ ಕಂಡಿತ್ತು. ಆ ದಿನಗಳಲ್ಲಿ 'ತಾಯಿ ಸಾಹೇಬ' ಚಲನಚಿತ್ರವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ತಾಯಿಸಾಹೇಬ

ವೀರಪ್ಪ ನಾಯ್ಕ : ಮುತ್ತಿನ ಹಾರ ಸಿನಿಮಾ ಬಳಿಕ, ಮತ್ತೆ ಸಾಹಸ ಸಿಂಹ ವಿಷ್ಣುವರ್ಧನ್ ದೇಶ ಪ್ರೇಮಿಯಾಗಿ ಅಭಿನಯಿಸಿದ ಚಿತ್ರ 'ವೀರಪ್ಪ ನಾಯ್ಕ'. ಬೆಳಗಾವಿ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ಒಬ್ಬ ದೇಶಪ್ರೇಮಿ ಹಾಗೂ ಗಾಂಧಿವಾದಿ ನಾಯಕನ ಜೀವನದ ಕಥೆಯನ್ನು ಈ ಚಿತ್ರ ಒಳಗೊಂಡಿತ್ತು.

ಸಂಬಂಧಗಳಿಗಿಂತ ದೇಶಪ್ರೇಮವೇ ಹೆಚ್ಚೆಂದು ಉಗ್ರಗ್ರಾಮಿಯಾದ ತನ್ನ ಮಗನನ್ನೇ ಕೊಲ್ಲುವ ಅಪ್ಟಟ ದೇಶಾಭಿಮಾನಿಯ ಕಥೆ ಇದು. ದೇಶಕ್ಕೋಸ್ಕರ ಮಗನನ್ನೇ ವಿಷ್ಣುರ್ಧನ್ ಚಿತ್ರದಲ್ಲಿ ಕೊಲೆ ಮಾಡ್ತಾರೆ. ವಿಷ್ಣುವರ್ಧನ್ ಪತ್ನಿ ಪಾತ್ರದಲ್ಲಿ ಶೃತಿ ನಟಿಸಿದ್ದರು. ಎಸ್. ನಾರಾಯಣ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. 1999ರಲ್ಲಿ ಬಿಡುಗಡೆಯಾದ 'ವೀರಪ್ಪನಾಯ್ಕ' ಚಿತ್ರ ಯಶಸ್ವಿ ನೂರು ದಿನಗಳನ್ನು ಪೂರೈಸಿತ್ತು.

ವೀರಪ್ಪನಾಯ್ಕ

ಹಗಲು ವೇಷ: ಲವರ್ ಬಾಯ್ ಹಾಗೂ ಹಳ್ಳಿ ಹುಡುಗನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, 'ಹಗಲು ವೇಷ' ಸಿನಿಮಾದಲ್ಲಿ ದೇಶಪ್ರೇಮಿಯ ಪಾತ್ರದಲ್ಲಿ ಮಿಂಚಿದ್ದರು. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹಗಲುವೇಷ ಚಿತ್ರವು ಬ್ರಿಟಿಷ್ ಆಳ್ವಿಕೆ ವಿರುದ್ಧ ದಂಗೆಯೇಳುವ ಸ್ವಾತಂತ್ರ್ಯ ಹೋರಾಟಗಾರನ ಕಥೆ ಆಧರಿಸಿದೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಾರ್ಚ್ 24, 2000ರಲ್ಲಿ ಬಿಡುಗಡೆಯಾಗಿದ್ದ ಚಿತ್ರ ಯಶಸ್ಸು ಕಂಡಿತ್ತು.

ಹಗಲು ವೇಷ

ವಂದೇ ಮಾತರಂ: 2001ರಲ್ಲಿ ತೆರೆ ಕಂಡು ಸಕ್ಸಸ್ ಕಂಡ ಸಿನಿಮಾ 'ವಂದೇ ಮಾತರಂ'. ರೆಬಲ್ ಸ್ಟಾರ್ ಅಂಬರೀಷ್ ಹಾಗೂ ತೆಲುಗಿನ ಖ್ಯಾತ ನಟಿ ವಿಜಯಶಾಂತಿ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ, ನವ ಪೀಳಿಗೆಯ ಯುವಕರನ್ನು ಹೇಗೆ ಬ್ರೇನ್ ವಾಶ್​ ಮಾಡಿ, ಉಗ್ರಗಾಮಿ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ತೋರಿಸಲಾಗಿದೆ. ಓಂ ಪ್ರಕಾಶ್ ರಾವ್ ಈ ಸಿನಿಮಾ ನಿರ್ದೇಶನ ಮಾಡಿದ್ದರು.

ಸೈನಿಕ : 2002ರಲ್ಲಿ ಪವರ್ ಫುಲ್ ಟೈಟಲ್ ಇಟ್ಟುಕೊಂಡು, ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡಿದ ಚಿತ್ರ 'ಸೈನಿಕ'. ನಟ ಹಾಗೂ ರಾಜಕಾರಣಿ ಸಿ.ಪಿ. ಯೋಗೇಶ್ವರ್ ಮತ್ತು ನಟಿ ಸಾಕ್ಷಿ ಶಿವಾನಂದ ನಟಿಸಿದ್ದ ಸೈನಿಕ ಸಿನಿಮಾ ಕಾರ್ಗಿಲ್​ ಯುದ್ಧದ ಕಥೆಯನ್ನು ಒಳಗೊಂಡಿತ್ತು. ಮಹೇಶ್ ಸುಖಧರೆ ಈ ಸಿನಿಮಾ ನಿರ್ದೇಶಿಸಿದ್ದರು.

ಸೈನಿಕ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ : ಸ್ಯಾಂಡಲ್​ವುಡ್​​ನಲ್ಲಿ ಮಾಸ್ ಹೀರೊ ಆಗಿದ್ದ ದರ್ಶನ್, ಸಂಗೊಳ್ಳಿ ರಾಯಣ್ಣನಾಗಿ ಬೆಳ್ಳಿ ತೆರೆ ಮೇಲೆ ರಾರಾಜಿಸಿದ ಸಿನಿಮಾ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'. ಕಿತ್ತೂರಿನಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಬೆಳಗಿಸಿದ ರಾಯಣ್ಣನ ಕತೆ ಹೊಂದಿದ ಈ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮಿಂಚಿದ್ದರು.

ರಾಣಿ ಚೆನ್ನಮ್ಮನ ನಂತರ ಕಿತ್ತೂರು ಹೋರಾಟಕ್ಕೆ ತೀವ್ರಗತಿ ತಂದು ಕೊಟ್ಟ ರಾಯಣ್ಣ ನಂತರ ತನ್ನವರ ಮೋಸದಿಂದಲೇ ಬ್ರಿಟಿಷರಿಂದ ಸೆರೆ ಹಿಡಿಯಲ್ಪಡುತ್ತಾನೆ. 2012ರಲ್ಲಿ ತೆರೆಕಂಡ ಈ ಸಿನಿಮಾ ಬರೋಬ್ಬರಿ ಒಂದು ವರ್ಷ ಪ್ರದರ್ಶನಗೊಂಡಿತ್ತು. ನಾಗಣ್ಣ ನಿರ್ದೇಶನ ಮಾಡಿದ್ರೆ, ಆನಂದ್ ಅಪ್ಪುಗೋಳ್ ಈ ಸಿನಿಮಾವನ್ನ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದರು.

ಸಂಗೊಳ್ಳಿ ರಾಯಣ್ಣ

1944 : 2016ರಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ದೇಶಪ್ರೇಮ ಆಧಾರಿತ ಸಿನಿಮಾ '1944'. ನಟ ನವೀನ್​ ಕೃಷ್ಣ ಹಾಗೂ ಶೃತಿ ಮುಖ್ಯ ಭೂಮಿಕೆಯಲ್ಲಿದ್ದ ಚಿತ್ರವಿದು. ಎನ್.ಎಸ್. ರಾವ್ ನಿರ್ದೇಶಿಸಿರುವ ರೊಟ್ಟಿ ಋಣ ನಾಟಕ ಆಧರಿಸಿದ್ದ ಸಿನಿಮಾ ಇದಾಗಿದೆ. ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಸ್ವಾತಂತ್ರ ಹೋರಾಟದ ಕಥೆಯನ್ನು 1944 ಸಿನಿಮಾ ಒಳಗೊಂಡಿದೆ. ಬದ್ರಿನಾಥ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

1944

ಇದರ ಜೊತೆಗೆ 'ಮೈಸೂರು ಮಲ್ಲಿಗೆ', 'ಎಕೆ 47' ಸೇರಿದಂತೆ ಹಲವು ಸಿನಿಮಾಗಳು ದೇಶಪ್ರೇಮದ ಕಥಾ ಹಂದರವನ್ನು ಒಳಗೊಂಡು ಕನ್ನಡದ ಪ್ರೇಕ್ಷಕರ ಗಮನ ಸೆಳೆದಿವೆ.

Last Updated : Aug 14, 2021, 10:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.