ಸ್ಯಾಂಡಲ್ವುಡ್ ಬಾದ್ಷಾ ಕಿಚ್ಚ ಸುದೀಪ್ ಅಭಿನಯದ 'ಫ್ಯಾಂಟಮ್' ಚಿತ್ರ 'ರಂಗಿತರಂಗ' ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರಲಿದೆ. ಚಿತ್ರದಲ್ಲಿ ವಿಕ್ರಾಂತ್ ರೋಣ ಪಾತ್ರಕ್ಕೆ ಅಭಿನಯ ಚಕ್ರವರ್ತಿ ಜೀವ ತುಂಬಲಿದ್ದಾರೆ.
ಲಾಕ್ಡೌನ್ ಸಡಿಲಿಕೆ ನಂತರ ಚಿತ್ರತಂಡ ಹೈದರಾಬಾದ್ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಚಿತ್ರೀಕರಣದಲ್ಲಿ ಬ್ಯುಸಿ ಆಗಿದೆ. ಜುಲೈ 6 ರಂದು ಸುದೀಪ್ 'ಫ್ಯಾಂಟಮ್' ಟೀಂ ಸೇರಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಅನೂಪ್ ಹೇಳಿದ್ದರು. ಆದರೆ ಸುದೀಪ್ ಚಿತ್ರೀಕರಣಕ್ಕೆ ಗೈರಾಗಿದ್ದಾರೆ. ಚಿತ್ರದ ಸೆಟ್ ನಿರ್ಮಾಣ ಇನ್ನೂ ಮುಗಿದಿಲ್ಲವಾದ್ದರಿಂದ ಸುದೀಪ್ ಇನ್ನೂ ಹೈದರಾಬಾದ್ಗೆ ಬಂದಿಲ್ಲ ಎನ್ನಲಾಗಿದೆ.
![Huge set for Phantom film in Hyderabad](https://etvbharatimages.akamaized.net/etvbharat/prod-images/ka-bng-5-july-20-fantam-shooting-kicha-attend-ka10012_09072020115914_0907f_1594276154_598.jpg)
ಕಳೆದ ಕೆಲವು ದಿನಗಳಿಂದ ಹೈದರಾಬಾದ್ನಲ್ಲಿ ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ 150 ಮಂದಿ ಬೃಹತ್ ಸೆಟ್ ಹಾಕುವುದರಲ್ಲಿ ನಿರತರಾಗಿದ್ಧಾರೆ. 'ಕೆಜಿಎಫ್' ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ನೇತೃತ್ವದಲ್ಲಿ ಈ ಸೆಟ್ ನಿರ್ಮಾಣವಾಗುತ್ತಿದೆ. ಚಿತ್ರತಂಡ 'ಫ್ಯಾಂಟಮ್' ಚಿತ್ರಕ್ಕಾಗಿ ಹೊಸ ಲೋಕವನ್ನೇ ಸೃಷ್ಟಿ ಮಾಡಲು ಹೊರಟಿದೆ.
![Huge set for Phantom film in Hyderabad](https://etvbharatimages.akamaized.net/etvbharat/prod-images/ka-bng-5-july-20-fantam-shooting-kicha-attend-ka10012_09072020115914_0907f_1594276154_1019.jpg)
ಶೂಟಿಂಗ್ ಸೆಟ್ ನಿರ್ಮಾಣವಾದ ನಂತರ ಜುಲೈ 20 ರ ವೇಳೆಗೆ ಸುದೀಪ್ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈ ಗ್ಯಾಪ್ನಲ್ಲಿ ಸುದೀಪ್ ಮತ್ತೊಮ್ಮೆ ಕರ್ನಾಟಕದ ಅಭಿಮಾನಿಗಳೊಂದಿಗೆ ಲೈವ್ ವಿಡಿಯೋ ಕಾಲ್ ಮೂಲಕ ಮಾತನಾಡಲು ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಜುಲೈ 11, 12 ರಂದು ಸುದೀಪ್ ತಮ್ಮ ಅಭಿಮಾನಿಗಳೊಂದಿಗೆ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
![Huge set for Phantom film in Hyderabad](https://etvbharatimages.akamaized.net/etvbharat/prod-images/ka-bng-5-july-20-fantam-shooting-kicha-attend-ka10012_09072020115914_0907f_1594276154_1033.jpg)