ಕೆಜಿಎಫ್-2 ಚಿತ್ರದ ಟೀಸರ್ ಬಿಡುಗಡೆಗೆ ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಈಗಾಗಲೇ ಅಭಿಮಾನಿಗಳಿಗೆ ಹಾಗೂ ಸಿನಿ ರಸಿಕರಿಗೆ ಟೀಸರ್ ಮೇಲಿನ ಆಸಕ್ತಿ ಹೆಚ್ಚಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಚಿತ್ರತಂಡ ಇದೀಗ ಅಧೀರ ಹೇಗೆ ಬದುಕಿ ಉಳಿದ ಎಂದು ಪ್ರಶ್ನಾರ್ತಕ ಮಾಹಿತಿ ಕೊಟ್ಟಿದೆ.
![KGF ಟೈಮ್ಸ್](https://etvbharatimages.akamaized.net/etvbharat/prod-images/10139161_thumb.jpg)
'ಕೆಜಿಎಫ್ ಟೈಮ್ಸ್' ಎಂದು ಹಳೆಯದಾದ ದಿನ ಪತ್ರಿಕೆ ರೂಪದಲ್ಲಿ ಸಿನಿಮಾ ಪ್ರಚಾರ ಮಾಡುತ್ತಿರುವ ಚಿತ್ರತಂಡ, ಇಂದು 'ಅಧೀರ ಹೇಗೆ ಬದುಕುಳಿದ' ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ. ಸದ್ಯ ಬಿಡುಗಡೆಯಾಗಿರುವ ಕೆಜಿಎಫ್ ಟೈಮ್ಸ್ನಲ್ಲಿ ಅವನು ಅಜೇಯನಾ, ಅವನು ಅಮರನಾ, ಅವನಿಗೆ ತನ್ನ ಮೇಲಿನ ದಾಳಿ ಬಗ್ಗೆ ಗೊತ್ತಿತ್ತಾ. ಇದು ದೇಶಕ್ಕೆ ತಿಳಿಯಬೇಕು ಎಂದು ಅದರಲ್ಲಿ ಬರೆಯಲಾಗಿದೆ.
![KGF ಟೈಮ್ಸ್](https://etvbharatimages.akamaized.net/etvbharat/prod-images/10139161_thumb2.jpg)
ಮತ್ತೊಂದು ವಿಶೇಷ ಅಂದ್ರೆ ಸಿನಿಮಾದ ಕಥೆಯ ಬಗ್ಗೆ ಕತೂಹಲ ಮೂಡಿಸುವಂತಹ ಹೆಡ್ಲೈನ್ ನೀಡಿದ್ದು, ಪೂರ್ತಿ ಕಥೆಗಾಗಿ ಚಾಪ್ಟರ್ 2 ನೋಡಿ ಎಂದು ಬರೆಯಲಾಗಿದೆ. ಗರುಡನನ್ನು ಕೊಂದ ರಾಕಿ ಸಿಂಹಾಸನವನ್ನು ಹಿಡಿದಿಟ್ಟುಕೊಳ್ಳುವನಾ, ಅಧೀರ ತನ್ನ ದಿ. ಸಹೋದರ ಸೂರ್ಯವರ್ಧನ್ ತಪ್ಪು ಎಂದು ಸಾಬೀತು ಪಡಿಸುತ್ತಾರ? ಎಂದು ಪ್ರಶ್ನೆಗಳನ್ನು ಇದ್ರಲ್ಲಿ ಹಾಕಲಾಗಿದೆ.
ಜನವರಿ 8ಕ್ಕೆ, ಯಶ್ ಹುಟ್ಟು ಹಬ್ಬದ ಪ್ರಯುಕ್ತ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾದ ಟೀಸರ್ ರಿಲೀಸ್ ಆಗಲಿದೆ.