ETV Bharat / sitara

ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯ 11ನೇ ಚಿತ್ರದ ಟೈಟಲ್ ರಿವೀಲ್ - ಕಾಂತಾರ ಸಿನಿಮಾ

ಹೊಂಬಾಳೆ ಫಿಲಂಸ್‌ ಸಂಸ್ಥೆಯ 11ನೇ ಸಿನಿಮಾ ಕಾಂತಾರ. ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

hombale
ಕಾಂತಾರ ಟೈಟಲ್
author img

By

Published : Aug 6, 2021, 12:51 PM IST

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಎಂದು ಹೊಂಬಾಳೆ ಫಿಲಂಸ್‌ ಸಂಸ್ಥೆ ಹೆಗ್ಗಳಿಕೆ ಪಡೆದಿದೆ. ನಿರ್ಮಾಪಕ ವಿಜಯ್ ಕಿರಗಂದೂರ್ ಮಾಲೀಕತ್ವದ ಈ ಸಂಸ್ಥೆ ಬ್ಯಾಕ್ ಟು ಬ್ಯಾಕ್ ಹೊಸ ಸಿನಿಮಾಗಳನ್ನು ಮಾಡುತ್ತಿದೆ.

ನಿನ್ನೆಯಷ್ಟೇ ಹೊಂಬಾಳೆ ಫಿಲಂಸ್ ಸಂಸ್ಥೆಯ 11ನೇ ಸಿನಿಮಾ ಬಗ್ಗೆ ವಿಜಯ್ ಕಿರಗಂದೂರ್ ಸೋಶಿಯಲ್ ಮೀಡಿಯಾದಲ್ಲಿ "ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ" ಎಂಬ ಬರಹವಿರುವ ಪೋಸ್ಟರ್​ ಹಂಚಿಕೊಂಡಿದ್ದರು. ಆದರೆ, ಸಿನಿಮಾದ ಹೆಸರು, ನಿರ್ದೇಶಕ ಹಾಗೂ ನಾಯಕ ಯಾರು ಎಂಬ ಸುಳಿವು ಬಿಟ್ಟುಕೊಟ್ಟಿಲ್ಲ.

hombale
ನಟ ರಿಷಬ್ ಶೆಟ್ಟಿ

ಚಿತ್ರದ ಟೈಟಲ್ ಕಾಂತಾರ ಎಂದು. ಒಂದು ದಂತಕಥೆ ಅಂತಾ ಟ್ಯಾಗ್ ಲ್ಯಾನ್ ಹೊಂದಿರುವ ಈ ಸಿನಿಮಾನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಬಣ್ಣವನ್ನೂ ಹಚ್ಚುತ್ತಿದ್ದಾರೆ. ಈ ಹಿಂದೆಯೇ ರಿಷಬ್ ಶೆಟ್ಟಿ ಹೊಂಬಾಳೆ ಫಿಲಂಸ್ ಸಂಸ್ಥೆಯ ಜೊತೆ ಒಂದು ಸಿನಿಮಾ ಮಾಡಲು ಮುಂದಾಗಿ, ಮಾತುಕತೆ ನಡೆಸಿದ್ದರು. ಈಗ ಆ ಸಿನಿಮಾನೇ ಕಾಂತಾರ ಎಂದು ಬಹಿರಂಗವಾಗಿದೆ.

ಈ ಸಿನಿಮಾ ಮನುಷ್ಯ ಮತ್ತು ಪರಿಸರದ ಕಥೆ ಒಳಗೊಂಡಿದೆಯಂತೆ. ಚಿತ್ರದ ಪೋಸ್ಟರ್ ನೋಡ್ತಾ ಇದ್ರೆ, ಮಂಗಳೂರಿನ ಕಂಬಳದ ಕಥೆ ಇರಬಹುದು ಎಂಬ ಅನುಮಾನ ಮೂಡುತ್ತದೆ. ಇದೇ ತಿಂಗಳು 27ರಿಂದ ಈ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.