ಅರ್ಜುನ್ ರೆಡ್ಡಿ ಖ್ಯಾತಿಯ ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಅಷ್ಟೇ ಅಲ್ಲ ಇತ್ತೀಚೆಗಷ್ಟೇ 'ಗೀತ ಗೋವಿಂದಂ' ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂದೂ ವರದಿಯಾಗಿತ್ತು.
ಈ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ ತಮ್ಮ ಟ್ವಿಟರ್ ಖಾತೆಯಲ್ಲಿ "ಎಂದಿನಂತೆ ನಾನ್ಸೆನ್ಸ್.. ನಾವು ಈ ಸುದ್ದಿಯನ್ನು ಕೇವಲ ಪ್ರೀತಿಸುವುದಿಲ್ಲವೇ" ಎಂದು ಬರೆದುಕೊಂಡಿದ್ದಾರೆ.
-
As usual nonsense..
— Vijay Deverakonda (@TheDeverakonda) February 21, 2022 " class="align-text-top noRightClick twitterSection" data="
Don’t we just
❤️ da news!
">As usual nonsense..
— Vijay Deverakonda (@TheDeverakonda) February 21, 2022
Don’t we just
❤️ da news!As usual nonsense..
— Vijay Deverakonda (@TheDeverakonda) February 21, 2022
Don’t we just
❤️ da news!
ಇದನ್ನೂ ಓದಿ: ನಿಜ ಜೀವನದಲ್ಲೂ ಜೋಡಿಯಾಗಲಿದ್ದಾರಾ ಗೀತ-ಗೋವಿಂದಂ..?
'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಪ್ರೀತಿಯ ಬಲೆಯಲ್ಲಿ ಬಿದ್ದಿವೆ ಎಂಬ ಗುಸುಗುಸು ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವ ರೀತಿಯಲ್ಲಿ ಒಮ್ಮೆ ಮುಂಬೈನ ರೆಸ್ಟೋರೆಂಟ್ವೊಂದರಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲ ಈ ಬಾರಿ ಹೊಸ ವರ್ಷವನ್ನು ಇವರಿಬ್ಬರು ಕುಟುಂಬ ಸಮೇತರಾಗಿ ಗೋವಾದಲ್ಲಿ ಆಚರಿಸಿದ್ದರು.