ಬೆಂಗಳೂರು : ಸುಂದರ ನಟಿ ಹರಿಪ್ರಿಯಾ ಹಾಗೂ ಸುರದ್ರೂಪಿ ನಟ ಗುರುನಂದನ್ ಮೊದಲ ಬಾರಿಗೆ ಜೊತೆಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆಯ ಸಿನಿಮಾಗಳಲ್ಲಿ ಕೊನೆಗೆ ಬರುವ ವಿಚಾರ ಅಂದ್ರೆ 'ಅದೇ ಹ್ಯಾಪಿ ಎಂಡಿಂಗ್'.
ಈ ಹ್ಯಾಪಿ ಎಂಡಿಂಗ್ ಸಿನಿಮಾಕ್ಕೂ ಮೊದಲು ನೀರ್ ದೋಸೆ ಬೆಡಗಿ, ಕಪಲ್ ರಿಮೇಕ್ ಹಾಗೂ ಸೂಪರ್ ಸ್ಟಾರ್ ಉಪೇಂದ್ರ ಅವರೊಂದಿಗೆ ಸಿನಿಮಾ ಒಂದಕ್ಕೆ ಸಹಿ ಹಾಕಿದ್ದಾರೆ. ಇವರ ‘ಅಮೃತಮತಿ’ ಸಿನಿಮಾ ಪ್ರೊ. ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ ಬಿಡುಗಡೆಗೂ ಮುಂಚೆಯೇ ಹಲವಾರು ಉತ್ಸವಗಳಿಗೆ ಆಯ್ಕೆಯಾಗಿದೆ.
ಚಿಕ್ಕಮಗಳೂರಿನ ಮೂಡಿಗೆರೆ ಹುಡುಗ ಕನ್ನಡ ಚಿತ್ರ ರಂಗದ ‘ರಾಜು’ – ಫಸ್ಟ್ ರ‍್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂನಿಂದ ಪ್ರಸಿದ್ದಯಾದ ಗುರುನಂದನ್ ಅವರ ‘ರಾಜು ಜೇಮ್ಸ್ ಬಾಂಡ್’ ಸಿನಿಮಾ ಚಿತ್ರೀಕರಣ ಸಹ ಸಂಪೂರ್ಣ ಮುಗಿದಿದೆ. ಈ ಸಿನಿಮಾ ಕೊರೊನಾ ಸಂಕಷ್ಟಗಳು ಮುಗಿದ ಬಳಿಕ ಬಿಡುಗಡೆಯಾಗಲಿದೆ.
‘ಹ್ಯಾಪಿ ಎಂಡಿಂಗ್’ ಚಿತ್ರದ ಚಿತ್ರೀಕರಣವನ್ನು ಲಾಕ್ಡೌನ್ಗೆ ಮೊದಲೇ ಆರ್ಎಂಜಿಎಸ್ ಬ್ಯಾನರ್ ಅಡಿ ನಿರ್ಮಾಪಕ ರಮೇಶ್ ಮುಗಿಸಿಕೊಂಡಿದ್ದಾರೆ. ವಿಜಯ್ ಕಿರಣ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ.
ಒಂದು ಯುಗಳ ಗೀತೆ ಮತ್ತು ಕೆಲವು ಟಾಕಿ ಭಾಗದ ಚಿತ್ರೀಕರಣ ಮಾತ್ರ ಉಳಿದಿದೆ. ಚಿತ್ರದ ಡಬ್ಬಿಂಗ್ ಕೆಲಸ, ಸಾಧು ಕೋಕಿಲ ಹಾಗೂ ಹರಿಪ್ರಿಯಾ ಅವರುಗಳ ಆ್ಯಕ್ಟಿಂಗ್ ಮಾತ್ರ ಬಾಕಿ ಉಳಿದಿದೆ.
ಗುರುನಂದನ್, ಹರಿಪ್ರಿಯಾ ಜೊತೆಗೆ ಸಾಧು ಕೋಕಿಲ, ಶಿವರಾಜ್ ಕೆ. ಆರ್ ಪೇಟೆ, ಅಶೋಕ್, ವಿಜಯ್ ಚೆಂಡೂರ್ ಹಾಗೂ ಮನು ಅವರ ಕಾಮಿಡಿ ಸನ್ನಿವೇಶಗಳು ನಕ್ಕು ನಗಿಸಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ .