ಮೇ 1 ರಂದು ರಾಜ್ಯಾದ್ಯಂತ ತೆರೆ ಕಂಡಿದ್ದ ಗೋಲ್ಡನ್ ಸ್ಟಾರ್ ಅಭಿನಯದ '99' ಸಿನಿಮಾ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ನಿರ್ದೇಶಕ ಪ್ರೀತಂ ಗುಬ್ಬಿ ತಮಿಳಿನ '96' ಸಿನಿಮಾವನ್ನು ಕನ್ನಡದಲ್ಲಿ '99' ಹೆಸರಿನಲ್ಲಿ ರೀಮೇಕ್ ಮಾಡಿದ್ದರು.
ಇದೀಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುತ್ತಿದೆ. ಇದಕ್ಕೂ ಮೊದಲು ರಿಷಿ ಅಭಿನಯದ 'ಕವಲುದಾರಿ', ಧನ್ವೀರ್ ಅಭಿನಯದ 'ಬಜಾರ್', ನೀನಾಸಂ ಸತೀಶ್ ಅಭಿನಯದ 'ಚಂಬಲ್' ಹಾಗೂ ಇನ್ನೂ ಕೆಲ ಕನ್ನಡ ಸಿನಿಮಾಗಳು ಬಿಡುಗಡೆಯಾದ ಕೆಲವೇ ದಿನಗಳ ನಂತರ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದ್ವು. ಇದೀಗ ಆ ಚಿತ್ರಗಳ ಸಾಲಿಗೆ '99' ಸೇರಿದೆ. ಈ ಹಿಂದೆ ಪಿ ಸಿ ಶೇಖರ್ ನಿರ್ದೇಶನದ ರೋಮಿಯೋ ಸಿನಿಮಾದಲ್ಲಿ ಗಣೇಶ್ ಹಾಗೂ ಭಾವನಾ ಜೊತೆಯಾಗಿ ನಟಿಸಿದ್ದರು. ಇದೀಗ '99' ಸಿನಿಮಾದ ಮೂಲಕ ಈ ಜೋಡಿ ಮತ್ತೆ ಜೊತೆಯಾಗಿ ನಟಿಸಿತ್ತು.
ತಮಿಳಿನ '96' ಸಿನಿಮಾದಲ್ಲಿ ವಿಜಯ್ ಸೇತುಪತಿ ಹಾಗೂ ತ್ರಿಶಾ ಜೊತೆಯಾಗಿ ನಟಿಸಿದ್ದು ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾವನ್ನು ಪ್ರೀತಂ ಗುಬ್ಬಿ ಕನ್ನಡಕ್ಕೆ ರೀಮೇಕ್ ಮಾಡಿದ್ದರು. ರಾಮು '99' ಸಿನಿಮಾವನ್ನು ನಿರ್ಮಿಸಿದ್ದಾರೆ.