'ಗಮನಂ' ಇದೊಂದು ಮುದ್ದು ಮನಸ್ಸುಗಳ ಕ್ಯೂಟ್ ಲವ್ ಸ್ಟೋರಿ ಚಿತ್ರವಾಗಿದ್ದು ಫಸ್ಟ್ ಲುಕ್ನಿಂದಲೇ ಹೆಚ್ಚು ಗಮನ ಸೆಳೆಯುತ್ತಿದೆ. ಯುವ ಪ್ರತಿಭೆಗಳಾದ ಶಿವ ಕಂದುಕರಿ ಮತ್ತು ಪ್ರಿಯಾಂಕಾ ಜವಾಲ್ಕರ್ ಮುಖ್ಯ ಭೂಮಿಕೆಯಲ್ಲಿ ಮೂಡಿ ಬರುತ್ತಿದ್ದು ಭಾರಿ ಕುತೂಹಲ ಹುಟ್ಟಿಸಿದೆ.
![Gamanam movie will release in five languages](https://etvbharatimages.akamaized.net/etvbharat/prod-images/kn-bng-05-kannadadhali-bharatha-edie-fan-india-movie-7204735_05102020215307_0510f_1601914987_120.jpg)
ಜರ್ಸಿ ಧರಿಸಿದ ಕ್ರೀಡಾಪಟುವಾಗಿ ಶಿವ ಕಾಣಿಸಿಕೊಂಡರೆ, ಮುಸ್ಲಿಂ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರಿಯಾಂಕಾ ಕಂಗೊಳಿಸುತ್ತಿದ್ದಾರೆ. ಟಾಲಿವುಡ್ನ ಬ್ಯೂಟಿಫುಲ್ ನಟಿಯರಾದ ಶ್ರೀಯಾ ಶರಣ್ ಮತ್ತು ನಿತ್ಯಾ ಮೆನನ್ ಕೂಡ ಅಭಿನಯಿಸುತ್ತಿದ್ದಾರೆ. ಸುಜನಾ ರಾವ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಗಮನಂ' ಚಿತ್ರ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಭಾರತದ ಐದು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣ ಆಗುತ್ತಿದೆ.
![Gamanam movie will release in five languages](https://etvbharatimages.akamaized.net/etvbharat/prod-images/kn-bng-05-kannadadhali-bharatha-edie-fan-india-movie-7204735_05102020215307_0510f_1601914987_1084.jpg)
ಜಗತ್ತಿನ ಎಲ್ಲ ಭಾಗದ ಜನ ನೋಡುವಂತ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ. ಭಾರತದ ಪ್ರತಿಯೊಬ್ಬ ಪ್ರೇಕ್ಷಕ ಯಾವುದೋ ಒಂದು ರೀತಿಯಲ್ಲಿ ಈ ಚಿತ್ರದ ಕಥೆ, ಪಾತ್ರಗಳೊಂದಿಗೆ ಕನೆಕ್ಟ್ ಆಗುವಂತ ಕಂಟೆಂಟ್ 'ಗಮನಂ' ಚಿತ್ರದಲ್ಲಿದೆಯಂತೆ.
![Gamanam movie will release in five languages](https://etvbharatimages.akamaized.net/etvbharat/prod-images/kn-bng-05-kannadadhali-bharatha-edie-fan-india-movie-7204735_05102020215307_0510f_1601914987_127.jpg)
ಇನ್ನು ಪ್ರಿಯಾಂಕಾ ಜವಾಲ್ಕರ್, ಶಿವ ಕಂದುಕುರಿ ಅಲ್ಲದೆ, ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರು ನಟಿಸಿದ್ದಾರೆ. ಸಂಗೀತ ಜ್ಞಾನಿ ಇಳಯರಾಜಾ 'ಗಮನಂ'ಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಜ್ಞಾನಶೇಖರ್ ವಿ.ಎಸ್. ಛಾಯಾಗ್ರಹಣ, ರಾಮಕೃಷ್ಣ ಅರ್ರಮ್ ಸಂಕಲನ, ಸಾಯಿ ಮಾಧವ ಬುರಾ ಸಂಭಾಷಣೆ ಬರೆದಿರುವ ʻಗಮನಂʼ ಚಿತ್ರವನ್ನು ರಮೇಶ್ ಕರುತೂರಿ, ವೆಂಕಿ ಪುಶದಾಪು ಮತ್ತು ಜ್ಞಾನಶೇಖರ್ ವಿ.ಎಸ್ ಸೇರಿ ಕ್ರಿಯಾ ಫಿಲ್ಮ್ಸ್ ಕಾರ್ಪ್ ಮೂಲಕ ನಿರ್ಮಾಣ ಮಾಡಿದ್ದಾರೆ. ಸುಜನಾ ರಾವ್ ಕಥೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ.