ETV Bharat / sitara

ಹಾಲಿವುಡ್​ - ಬಾಲಿವುಡ್​ನವರು ತುಂಬಾ ಲೇಟ್​​...ಕಳೆದ ವರ್ಷವೇ ಈ ಸಾಹಸ ಮಾಡಿದ್ದರು ನಟ ಗಣೇಶ್​ - ನಟ ಗಣೇಶ್

ನಟ ಅಕ್ಷಯ್ ಕುಮಾರ್​, ಅರ್ಜುನ್ ಸರ್ಜಾ ಸೇರಿದಂತೆ ಬಾಲಿವುಡ್ ಹಾಗೂ ಹಾಲಿವುಡ್​​ನ ಸಾಕಷ್ಟು ನಟಿಯರು ಈ ಚಾಲೆಂಜ್​​ನ ಭಾಗವಾಗುತ್ತಿದ್ದಾರೆ. ಸದ್ಯ ಈ ಸವಾಲು ಟ್ರೆಂಡಿಂಗ್​ನಲ್ಲಿದೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Jul 3, 2019, 5:59 PM IST

ಸೋಷಿಯಲ್​ ಮೀಡಿಯಾದಲ್ಲಿ ಆಗಾಗ ಹೊಸ ಚಾಲೆಂಜ್​​ಗಳು ಶುರುವಾಗುತ್ತಲೇ ಇರುತ್ತವೆ. ಕೆಲವೊಂದಿಷ್ಟು ಆರೋಗ್ಯಕರ ಚಾಲೆಂಜ್​ಗಳಾಗಿದ್ದರೆ ಮತ್ತೊಂದಿಷ್ಟು ಅಪಾಯಕಾರಿಯೂ ಆಗಿರುತ್ತವೆ.

ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಬಾಟಲ್​ ಕ್ಯಾಪ್​ ಚಾಲೆಂಜ್'​ ಶುರುವಾಗಿದೆ. ಕೈಗಳ ಸಹಾಯವಿಲ್ಲದೇ ಹಿಮ್ಮುಖವಾಗಿ ಕಿಕ್​ ಮಾಡಿ ಬಾಟಲಿಯೊಂದರ ಕ್ಯಾಪ್​ ತೆರೆಯುವುದೇ ಈ ಸವಾಲು. ಕಝಾಕಿಸ್ತಾನ್​​ನ ಫೈಟರ್​​ ಕರೋ ಪಶಿಕ್ಯಾನ್ ಈ ಸಾಹಸದ ವಿಡಿಯೋ ತಮ್ಮ ಫೇಸ್​ಬುಕ್​​ಲ್ಲಿ ಶೇರ್​ ಮಾಡಿಕೊಂಡು, ತನ್ನ ಸ್ನೇಹಿತರಿಗೆ ಹೀಗೆ ಮಾಡುವಂತೆ ಸವಾಲು ಎಸೆದಿದ್ದಾರೆ. ಕ್ಷಣಾರ್ಧದಲ್ಲೇ ಈ ವಿಡಿಯೋ ಭಾರೀ ವೈರಲ್ ಆಗಿದೆ. ಹಾಲಿವುಡ್​,ಬಾಲಿವುಡ್ ಹಾಗೂ ಸ್ಯಾಂಡಲ್​​ವುಡ್​ ಸೇರಿದಂತೆ ಎಲ್ಲ ತಾರೆಯರು ಈ ಸವಾಲು ಸ್ವೀಕರಿಸಿ, ತಮ್ಮ ಸಾಹಸದ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ನಟ ಅಕ್ಷಯ್ ಕುಮಾರ್​, ಅರ್ಜುನ್ ಸರ್ಜಾ, ಜಾನಿ ಮೆಯರ್​ ಸೇರಿದಂತೆ ಸಾಕಷ್ಟು ನಟಿಯರು ಕೂಡ ಈ ಚಾಲೆಂಜ್​​ನ ಭಾಗವಾಗುತ್ತಿದ್ದಾರೆ. ಸದ್ಯ ಈ ಸವಾಲು ಟ್ರೆಂಡಿಂಗ್​ನಲ್ಲಿದೆ.

ಮತ್ತೊಂದು ವಿಶೇಷ ಸಂಗತಿ ಏನಂದ್ರೆ, ಪ್ರಸ್ತುತ ಮುನ್ನೆಲೆಗೆ ಬಂದಿರುವ ​'ಬಾಟಲ್​ ಕ್ಯಾಪ್ ಚಾಲೆಂಜ್'ನ್ನು ಎಲ್ಲರಿಗಿಂತಲೂ ಮುಂಚೆಯೇ ಮಾಡಿದ್ದರು ಕನ್ನಡದ ನಟ ಗಣೇಶ್​​. ಗೋಲ್ಡನ್ ಸ್ಟಾರ್ ಗಣಿ ಕಳೆದ ವರ್ಷ ಫೆಬ್ರವರಿ 22 ರಂದೇ ಈ ಸಾಹಸ ಮಾಡಿ, ತಮ್ಮ ಟ್ವಿಟರ್​ಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಮುಥಾಯ್​ ಬಾಕ್ಸಿಂಗ್ ಕಲೆ ಕಲಿಯುತ್ತ ಗಣೇಶ್ ಅವರು ಜಿಮ್​​ವೊಂದರಲ್ಲಿ ಕಿಕ್​ ಮಾಡಿ ವಾಟರ್​ಬಾಟಲ್​​ನ ಕ್ಯಾಪ್​ ಓಪನ್ ಮಾಡಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.