ETV Bharat / sitara

'ಫ್ಯಾಂಟಸಿ' ಮೂಲಕ ಬಿಗ್​ಸ್ಕ್ರೀನ್​ಗೆ ಎಂಟ್ರಿ ಕೊಡಲಿದ್ದಾರೆ ಪ್ರಿಯಾಂಕ.. ಇಲ್ಲೂ ಕೂಡಾ ನೆಗೆಟಿವ್ ರೋಲ್..!!?

author img

By

Published : Nov 9, 2020, 11:24 PM IST

ಮೊದಲಿನಿಂದಲೂ ನೆಗೆಟಿವ್ ಶೇಡ್​ನಲ್ಲಿ, ಕಾಣಿಸಿಕೊಳ್ಳುತ್ತಿದ್ದ ಪ್ರಿಯಾಂಕಾ ಫ್ಯಾಂಟಸಿ ಚಿತ್ರದಲ್ಲಿ ನಾಲ್ಕು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರಂತೆ.

Fantasy
ಫ್ಯಾಂಟಸಿ

ಫ್ಯಾಂಟಸಿ ಚಿತ್ರ ಕನ್ನಡ ಚಿತ್ರರಂಗದಲ್ಲಿ ಶೀರ್ಷಿಕೆಯಿಂದದಲೇ ಸದ್ದು ಮಾಡುತ್ತಿರುವ ಸಿನಿಮಾ, ಕಿರುತೆರೆ ಹಾಗೂ ಬಿಗ್​ಬಾಸ್​ನಲ್ಲಿ ಗಮನಸೆಳೆದಿದ್ದ ಪ್ರಿಯಾಂಕಾ ಮುಖ್ಯಭೂಮಿಕೆಯಲ್ಲಿರುವ ಫ್ಯಾಂಟಸಿ ಸಿನಿಮಾದಲ್ಲಿ, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅನುರಾಗ್, ಹಿರಿಯ ನಟ ಬಾಲರಾಜ್ವಾಡಿ ಹಾಗೂ ಗೋಲಿ ಸೋಡಾ ಸಿನಿಮಾದಲ್ಲಿ ಗಮನಸೆಳೆದಿದ್ದ ಯುವ ನಟ ಹೇಮಂತ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಫ್ಯಾಂಟಸಿ ಸಿನಿಮಾ ಚಿತ್ರೀಕರಣ

ಸೆಪ್ಟೆಂಬರ್ ತಿಂಗಳಲ್ಲಿ, ಚಿತ್ರೀಕರಣ ಶುರು ಮಾಡಿದ ಫ್ಯಾಂಟಸಿ ಸಿನಿಮಾ, ಬಹುತೇಕ ಚಿತ್ರೀಕರಣ ಮುಗಿಸಿದೆ. ಇಂದು ರಾಕ್​ಲೈನ್ ಸ್ಟುಡಿಯೋದಲ್ಲಿ ಕೆಲವು ಸನ್ನಿವೇಶಗಳನ್ನು ಚಿತ್ರೀಕರಣ ಮಾಡುತ್ತಾ ಶೂಟಿಂಗ್ ಮಾಡ್ತಾ, ಕುಂಬಳಕಾಯಿ ಒಡೆದಿದೆ. ಇವತ್ತಿನ ಚಿತ್ರೀಕರಣದಲ್ಲಿ ಪ್ರಿಯಾಂಕಾ, ಬಾಲ ನಟ ಅನುರಾಗ್, ಮತ್ತೊಮ್ಮ ಪೋಷಕ ನಟ ಬಾಲರಾಜ್ವಾಡಿ, ಹರಿಣಿ ಅವ್ರ ಕೆಲ ಸನ್ನಿವೇಶಗಳನ್ನ ನಿರ್ದೇಶಕ ಪವನ್ ಚಿತ್ರೀಕರಣ ಮಾಡಿಕೊಳ್ಳುತ್ತಿದ್ರು‌.

ಇಂಜಿನಿಯರಿಂಗ್ ಓದುತ್ತಿದ್ದ ಎ.ಪವನ್ ಕುಮಾರ್ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ, ಸಂಹಾರ ಸಿನಿಮಾ ಮೂಲಕ ನಿರ್ದೇಶಕರಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟರು. ಬಳಿಕ ಅಮ್ಮ ಐ ಲವ್ ಯೂ ಸಿನಿಮಾಗಳಲ್ಲಿ ಸಹ ನಿರ್ದೇಶಕರೊಂದಿಗೆ ಕೆಲಸ ಮಾಡಿ, ಈಗ ಫ್ಯಾಂಟಸಿ ಸಿನಿಮಾದಿಂದ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ.

ಮೊದಲಿನಿಂದಲೂ ನೆಗೆಟಿವ್ ಶೇಡ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಿಯಾಂಕಾ ಫ್ಯಾಂಟಸಿ ಚಿತ್ರದಲ್ಲಿ ನಾಲ್ಕು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರಂತೆ. 24 ದಿನಗಳಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿರುವ ಫ್ಯಾಂಟಸಿ ಸಿನಿಮಾಗೆ, ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್. ದಾಸ್ ಅವ್ರ ಕ್ಯಾಮರಾ ಕೈಚಳಕವಿದೆ. ಗಣೇಶ್ ನಾರಾಯಣ್ ಸಂಗೀತ ನೀಡಿದ್ದು, ಶಶಿರಾಮ್ ಅವರ ಸಂಕಲನವಿದೆ. ಪವನ್ ಡ್ರೀಮ್ ಫಿಲಂಸ್ ಲಾಂಛನದಲ್ಲಿ ಸಿದ್ಧವಾಗಿರುವ ಫ್ಯಾಂಟಸಿ ಚಿತ್ರಕ್ಕೆ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ಎ. ಪವನ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

ಈ ಕೊರೊನಾ ಸಂದರ್ಭದಲ್ಲಿ ನಿರ್ದೇಶಕ ಪವನ್ ತಂದೆ- ತಾಯಿ ಅವರಾದ ಮಹಾದೇವಿ ಟಿ ರಂಗಸ್ವಾಮಿ ಈ ಚಿತ್ರಕ್ಕೆ ಹಣ ಹೂಡುವ ಮೂಲಕ ನಿರ್ಮಾಪಕರಾಗಿದ್ದಾರೆ. ಇಂದು ಕುಂಬಳಕಾಯಿ ಒಡೆದಿರುವ ಫ್ಯಾಂಟಸಿ ಸಿನಿಮಾ ತಂಡ ಹೊಸ ವರ್ಷಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ. ಬಿಗ್ ಸ್ಕ್ರೀನ್​ನಲ್ಲಿ ಪ್ರಿಯಾಂಕಾ ನೆಗೆಟಿವ್ ಶೇಡ್​ನಲ್ಲಿ ಹೇಗೆ ಕಾಣ್ತಾರೆ ಅಂತ ಅನ್ನೋದು ಕುತೂಹಲ ಹುಟ್ಟಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.