ETV Bharat / sitara

ಕರ್ಣನ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗಿಯಾದ ದುರ್ಯೋಧನ - ಬಾಕ್ಸ್ ಆಫೀಸ್ ಸುಲ್ತಾನ

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಇಂದು ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 'ರಾಬರ್ಟ್' ಚಿತ್ರದ ಶೂಟಿಂಗ್​​ಗಾಗಿ ಚೆನ್ನೈನಲ್ಲಿ ನೆಲೆಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಬಿಡುವು ಮಾಡಿಕೊಂಡು ಅರ್ಜುನ್​ ಸರ್ಜಾ ನಿವಾಸಕ್ಕೆ ತೆರಳಿ ಬರ್ತಡೇ ಶುಭ ಕೋರಿ ಬಂದಿದ್ದಾರೆ.

ಅರ್ಜುನ್ ಸರ್ಜಾ
author img

By

Published : Aug 15, 2019, 5:02 PM IST

ದೇಶಾದ್ಯಂತ ಇಂದು ಸಡಗರ ಸಂಭ್ರಮದಿಂದ 73ನೇ ಸ್ವಾತಂತ್ಯ್ರ ದಿನವನ್ನು ಆಚರಿಸಲಾಗುತ್ತಿದೆ. ಜೊತೆಗೆ ಇಂದು ದಕ್ಷಿಣ ಭಾರತದ ಖ್ಯಾತ ನಟ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅರ್ಜುನ್ ಸರ್ಜಾ

ಚೆನ್ನೈನ ತಮ್ಮ ನಿವಾಸದಲ್ಲಿ ಈ ಜಂಟಲ್​ಮ್ಯಾನ್​ ತಮ್ಮ ಕುಟುಂಬ ಹಾಗೂ ಕೆಲವೇ ಆಪ್ತರ ಸಮ್ಮುಖದಲ್ಲಿ ಕೇಕ್ ಕಟ್ ಮಾಡುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಅರ್ಜುನ್ ಸರ್ಜಾ ಹುಟ್ಟುಹಬ್ಬದ ಸಂಭ್ರಮಕ್ಕೆ ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಗ್ ಸ್ಟಾರ್ ದರ್ಶನ್ ಕೂಡಾ ಜೊತೆಯಾಗಿದ್ದಾರೆ. ದರ್ಶನ್​ ಚೆನ್ನೈನಲ್ಲಿ ನಡೆಯುತ್ತಿರುವ 'ರಾಬರ್ಟ್' ಚಿತ್ರೀಕರಣದಲ್ಲಿ ಬ್ಯುಸಿಯಿದ್ದು ಬಿಡುವು ಮಾಡಿಕೊಂಡು ಅರ್ಜುನ್ ಸರ್ಜಾ ಮನೆಗೆ ಹೋಗಿ ಆ್ಯಕ್ಷನ್ ಕಿಂಗ್​​ಗೆ ಹುಟ್ಟುಹಬ್ಬದ ಶುಭ ಕೋರಿ ಬಂದಿದ್ದಾರೆ. ದರ್ಶನ್ ಹಾಗೂ ಅರ್ಜುನ್ ಸರ್ಜಾ 'ಕುರುಕ್ಷೇತ್ರ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅರ್ಜುನ್ ಸರ್ಜಾ ಕರ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಸರ್ಜಾ ಹುಟ್ಟುಹಬ್ಬಕ್ಕೆ ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ.

arjun sarja
ಅರ್ಜುನ್ ಸರ್ಜಾ ಬರ್ತಡೇ ಪಾರ್ಟಿಯಲ್ಲಿ ದರ್ಶನ್

Intro:ಕರ್ಣನ ಹುಟ್ಟು ಹಬ್ಬದ ಸಂಭ್ರಮದಲ್ಲಿ ಸುಯೋಧನ!!!!

ಸೌಥ್ ಇಂಡಿಯಾ ಸ್ಟಾರ್ ಕನ್ನಡಿಗ ಅರ್ಜುನ್ ಸರ್ಜಾ ಅವರಿಗೆ ಇಂದು ೫೭ನೇ ಹುಟ್ಟು ಹಬ್ಬದ. ಸಂಭ್ರಮ.
ಚೆನ್ನೈನ ನಿವಾಸದಲ್ಲಿ ಈ ಜೆಂಟಲ್ ಮ್ಯಾನ್ ಫ್ಯಾಮಿಲಿ ಜೊತೆ ಸರಳವಾಗಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬ ಅಚರಿಸಿ ಕೊಂಡಿದ್ದಾರೆ.ಅಲ್ಲದೆ ವಿಶೇಷ ಅಂದ್ರೆ ಅರ್ಜುನ್ ಸರ್ಜಾ ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಗ್ ಸ್ಟಾರ್ ದರ್ಶನ್ ಭಾಗಿಯಾಗಿ ಬರ್ತ್ ಡೇ ಗೆ ವಿಶ್ ಮಾಡಿದ್ದಾರೆ.Body:ಚೆನ್ನೈ ನಲ್ಲಿ ರಾಬರ್ಟ್ ಶೂಟಿಂಗ್ ಗೆ ಹೋಗಿದ್ದ ವೇಳೆ ದಚ್ಚು ಅರ್ಜುನ್ ಸರ್ಜಾ ಅವರ ಮನೆಗೆ ತೆರಳಿ ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ.ಅಲ್ಲದೆ ದರ್ಶನ್ ಹಾಗೂ ಅರ್ಜುನ್ ಸರ್ಜಾ ಕುರುಕ್ಷೇತ್ರ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ಧಾರೆ.ಇನ್ನೂ ಕುರುಕ್ಷೇತ್ರ ಚಿತ್ರದಲ್ಲಿ ಅರ್ಜುನ್ ಸರ್ಜಾ ಕರ್ಣನ ಪಾತ್ರದಲ್ಲಿ ಕಾಣಿಸಿದ್ದು ಅದ್ಬುತ ವಾಗಿ ಅಭಿನಯಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೇ.ಅಲ್ಲದೆ ಡಿ ಬಾಸ್ ದುರ್ಯೋಧನನಾಗಿ ಅಬ್ಬರಿ ಬಾಕ್ಸ್ ಆಫೀಸ್ ನಲ್ಲಿ ಗಹಗಹಿಸಿ ನಕ್ಕಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.