'ಜೇಮ್ಸ್' ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾವಾಗಿದೆ. ಈ ಸಿನಿಮಾ ಬಿಡುಗಡೆಗಾಗಿ ಪವರ್ ಸ್ಟಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಈ ಮಧ್ಯೆ ಜೇಮ್ಸ್ ಸಿನಿಮಾದ ನಿರ್ದೇಶಕ ಚೇತನ್ ಕುಮಾರ್, ಅಪ್ಪು ಹುಟ್ಟು ಹಬ್ಬಕ್ಕೆ ಬಿಡುಗಡೆ ಮಾಡುವ ಹಿನ್ನೆಲೆ ಚಿತ್ರದ ಚಿತ್ರೀಕರಣವನ್ನ ಭರದಿಂದ ಮಾಡುತ್ತಿದ್ದಾರೆ. ಅಲ್ಲದೇ ಇದೀಗ 'ಜೇಮ್ಸ್' ಚಿತ್ರತಂಡದಿಂದ ಒಂದು ಗುಡ್ ನ್ಯೂಸ್ ಹೊರ ಬಂದಿದೆ.
!['James' cinema](https://etvbharatimages.akamaized.net/etvbharat/prod-images/kn-bng-03-puneeth-jemas-cinemadhali-shivann-raghanna-acting-7204735_21012022150341_2101f_1642757621_129.jpg)
'ಜೇಮ್ಸ್' ಸಿನಿಮಾದಲ್ಲಿ ಪುನೀತ್ ಅಣ್ಣಂದಿರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಇಂದಿನಿಂದ ಕನಕಪುರದ ರೆಸಾರ್ಟ್‌ವೊಂದರಲ್ಲಿ 'ಜೇಮ್ಸ್' ಚಿತ್ರದ ಶೂಟಿಂಗ್ ಆರಂಭವಾಗಿದೆ. ನಟ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಇಬ್ಬರೂ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
'ಜೇಮ್ಸ್' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪವರ್‌ಫುಲ್ ಪಾತ್ರವೊಂದನ್ನ ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ಕಾಶ್ಮೀರದಲ್ಲೆಲ್ಲಾ ಸಿನಿಮಾದ ಚಿತ್ರೀಕರಣ ನಡೆದಿದೆ. ಅಪ್ಪು ಕೂಡ ವಿಭಿನ್ನ ಲುಕ್‌ನಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸುವ ಉತ್ಸಾಹದಲ್ಲಿದ್ದರು. ಆದ್ರೆ, ಅಷ್ಟರಲ್ಲೇ ಅಪ್ಪು ಇಹಲೋಕ ತ್ಯಜಿಸಿದ್ದಾರೆ.
ಇದನ್ನೂ ಓದಿ: ನಟಿ ಅಮೂಲ್ಯ ಸೀಮಂತ ಕಾರ್ಯಕ್ರಮದ ಸುಂದರ ಕ್ಷಣಗಳಿವು..
ಇದೇ ನೋವಿನಲ್ಲಿರುವ ಅಭಿಮಾನಿಗಳನ್ನು ರಂಜಿಸಲು, 'ಜೇಮ್ಸ್' ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಶಿವಣ್ಣ ಮತ್ತು ರಾಘಣ್ಣರನ್ನು ಒಟ್ಟಿಗೆ ಕರೆದುಕೊಂಡು ಬಂದಿದ್ದಾರೆ. ಇನ್ನು ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಇವರೆಲ್ಲರನ್ನು ಒಂದೇ ಸಿನಿಮಾದಲ್ಲಿ ತೆರೆಮೇಲೆ ನೋಡಬೇಕು ಅಂತಾ ಕೋಟ್ಯಂತರ ಅಭಿಮಾನಿಗಳು ಸಹ ಕನಸು ಕಂಡಿದ್ದಾರೆ.
!['James' cinema](https://etvbharatimages.akamaized.net/etvbharat/prod-images/kn-bng-03-puneeth-jemas-cinemadhali-shivann-raghanna-acting-7204735_21012022150341_2101f_1642757621_982.jpg)
ಈ ಸಿನಿಮಾದ ಮೂಲಕ ಅಣ್ಣಾವ್ರ ಮಕ್ಕಳು ಒಟ್ಟಿಗೆ ನಟಿಸಿದ್ದಾರೆ ಎಂಬ ಚಿಕ್ಕದೊಂದು ಕನಸು ನನಸಾದಂತಾಗಿದೆ. ಅಂದುಕೊಂಡಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ 'ಜೇಮ್ಸ್' ಸಿನಿಮಾ ಬಿಡುಗಡೆ ಮಾಡೋದಕ್ಕೆ ನಿರ್ದೇಶಕ ಚೇತನ್ ಕುಮಾರ್ ಹಾಗೂ ನಿರ್ಮಾಪಕ ಕಿಶೋರ್ ಪ್ಲ್ಯಾನ್ ಮಾಡಿದ್ದಾರೆ. ಇದು ಕೋಟ್ಯಂತರ ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ